Actress Ramya: ದರ್ಶನ್, ಪ್ರಜ್ವಲ್ ರೇವಣ್ಣ, ಯಡಿಯೂರಪ್ಪ, ಸೂರಜ್ ರೇವಣ್ಣ ವಿರುದ್ದ ನಟಿ ರಮ್ಯಾ ಆಕ್ರೋಶ

Written by Soma Shekar

Published on:

---Join Our Channel---

Actress Ramya: ಲೈಂ ಗಿ ಕ ದೌ ರ್ಜ ನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಅದರ ಬೆನ್ನಲ್ಲೇ ಕೊ ಲೆ ಆರೋಪದ ಅಡಿಯಲ್ಲಿ ಕನ್ನಡ ಸಿನಿಮಾರಂಗದ ಸ್ಟಾರ್ ನಟ ನಗರ ದರ್ಶನ್ (Darshan) ಪೊಲೀಸರ ವಶದಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ವಿಚಾರ ಕೂಡಾ ಮುನ್ನೆಲೆಗೆ ಬಂದಿತ್ತು. ಈಗ ಇವೆಲ್ಲವುಗಳ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಅವರ ಸಹೋದರ ಸೂರಜ್ ರೇವಣ್ಣ (Suraj Revanna) ಮೇಲೆ ಕೂಡಾ ಅಸಹಜ ಲೈಂ ಗಿ ಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ನಟಿ ಹಾಗೂ ಮಾಜಿ ಸಂಸದೆ ಆಗಿರುವ ರಮ್ಯಾ ಅವರು ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

ನಟಿ (Actress Ramya) ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟನ್ನು ಶೇರ್ ಮಾಡಿಕೊಂಡಿದ್ದು ಕಾನೂನನ್ನ ಉಲ್ಲಂಘಿಸಿ ಸುದ್ದಿಯಲ್ಲಿ ಇರುವವರು ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಅವರ ಹಿಂ ಸಾ ತ್ಮ ಕ ಕ್ರಿಯೆಯಿಂದಾಗಿ ಬಡವರು ಮಹಿಳೆಯರು ಮತ್ತು ಮಕ್ಕಳ ಬದುಕು ನಾಶವಾಗಿದೆ ಎಂದು ಬರೆದುಕೊಂಡು ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಟಿಯ ಈ ಪೋಸ್ಟ್ ಈಗ ವೈರಲ್ ಆಗುತ್ತಿದ್ದು ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಹರಿದು ಬರುತ್ತಿದೆ.

ನಟಿ ಮಾಡಿರುವ ಪೋಸ್ಟಿನಲ್ಲಿ ಏನಿದೆ ? ಅನ್ನೋದಾದ್ರೆ, ಕಾನೂನು ಉಲ್ಲಂಘನೆ ಮಾಡಿ ಸುದ್ದಿಯಲ್ಲಿ ಇರುವವರು ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಅವರ ಹಿಂ ಸಾ ತ್ಮಕ ಕ್ರಿಯೆಗಳಿಗೆ ಬಡವರು, ಮಹಿಳೆಯರು ಮತ್ತು ಮಕ್ಕಳ ಬದುಕು ನಾಶವಾಗಿದೆ. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾದ್ಯಮಗಳಿಗೆ ಹ್ಯಾಟ್ಸಾಫ್. ವಿಚಾರಣೆಯನ್ನು ತ್ವರಿತಗೊಳಿಸಿದಾಗ ಮತ್ತು ಪ್ರಕರಣಗಳನ್ನು ಅವುಗಳ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಾಗ ನಿಜವಾಗಿ ನ್ಯಾಯ ಸಿಗುತ್ತದೆ.

ನ್ಯಾಯವು ಮೇಲುಗೈ ಸಾಧಿಸದಿದ್ದರೆ ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ ? ಎಂಬುದಾಗಿ ನಟಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ರಮ್ಯಾ ತಮ್ಮ ಪೋಸ್ಟ್ ಜೊತೆಗೆ ಸಂಸದ ಪ್ರಜ್ವಲ್ ರೇವಣ್ಣ, ನಟ ದರ್ಶನ್, ಮಾಜಿ ಸಿಎಂ ಯಡಿಯೂರಪ್ಪ, ಎಂಎಲ್‌ಸಿ ಸೂರಜ್ ರೇವಣ್ಣ ಅವರ ಹೆಸರುಗಳನ್ನು ಹ್ಯಾಷ್ ಟ್ಯಾಗ್ ಮೂಲಕ ಉಲ್ಲೇಖ ಮಾಡಿದ್ದಾರೆ. ನಟಿಯು ಮಾಡಿರುವಂತಹ ಪೋಸ್ಟ್ ಗೆ ಬಹಳಷ್ಟು ಜನ ತಮ್ಮ ಪ್ರತಿಕ್ರಿಯೆಗಳನ್ನು ನೀಡಿ ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

Leave a Comment