World War 3: ಈ ತಿಂಗಳ ಕೊನೆಗೆ ಆರಂಭ 3ನೇ ವಿಶ್ವಯುದ್ಧ? ಭಯಾನಕ ಭವಿಷ್ಯ ನುಡಿದ ಪ್ರಖ್ಯಾತ ಜ್ಯೋತಿಷಿ

Written by Soma Shekar

Published on:

---Join Our Channel---

World War 3: ಇತ್ತೀಚಿನ ವರ್ಷಗಳಲ್ಲಿ ಜ್ಯೋತಿಷಿಗಳು ನುಡಿಯುವಂತಹ ಭವಿಷ್ಯವಾಣಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಕೆಲವರು ನುಡಿದ ಭವಿಷ್ಯವಾಣಿಗಳು ಸತ್ಯವಾಗಿದೆ ಅನ್ನೋದು ಬಹಳಷ್ಟು ಜನರ ನಂಬಿಕೆ ಸಹಾ ಆಗಿದೆ. ಖ್ಯಾತ ಜ್ಯೋತಿಷಿ ಕುಶಾಲ್ ಕುಮಾರ್ (Kushal Kumar) ಅವರು ಇಸ್ರೇಲ್ – ಹಮಾಜ್, ರಷ್ಯಾ -ನ್ಯಾಟೋ, ಉತ್ತರ ಕೊರಿಯಾ ದಕ್ಷಿಣ ಕೊರಿಯಾ, ಚೈನಾ-ತೈವಾನ್ ನಡುವಿನ ಬಿಕ್ಕಟ್ಟುಗಳು ಉಲ್ಬಣವಾಗುವ ಸಾಧ್ಯತೆಗಳ ಕುರಿತಾಗಿ ಬಹಳ ನಿಖರವಾದ ಭವಿಷ್ಯವಾಣಿಯನ್ನು ನುಡಿದು ಸುದ್ದಿಯಾಗಿದ್ದರು.

ಈಗ ಇದೇ ಕುಶಾಲ್ ಕುಮಾರ್ ಅವರು ಹೊಸದೊಂದು ಸಂಚಲನ ಎನಿಸುವಂತಹ ಭವಿಷ್ಯವಾಣಿಯನ್ನು ನುಡಿಯುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹೌದು, ಕುಶಾಲ್ ಕುಮಾರ್ ಅವರು ಈ ತಿಂಗಳ ಕೊನೆಯ ಭಾಗದಲ್ಲಿ ಅಂದ್ರೆ ಜೂನ್ 29ರಂದು ಮೂರನೇ ವಿಶ್ವ ಮಹಾಯುದ್ಧ (World War 3) ಆರಂಭವಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

ತಾನು ವೇದಿಕ್ ಅಸ್ಟ್ರಾಲಜಿ ಚಾರ್ಟನ್ನು (Vedic Astrology Chart) ನೋಡಿ ಭವಿಷ್ಯವನ್ನು ನುಡಿಯುವುದಾಗಿ ಹೇಳಿರುವ ಕುಶಾಲ್ ಅವರು, ವಿಶ್ವದ ಮೂರನೇ ಸಮರಕ್ಕೆ ಕಾರಣವಾಗುವಂತಹ ಅತ್ಯಂತ ಬಲವಾದ ಗ್ರಹ ಬದಲಾವಣೆ ಜೂನ್ 18ರಂದು ಸಂಭವಿಸಲಿದೆ ಎಂದು ತಿಳಿಸಿದ್ದಾರೆ. ಅವರು ಹೇಳಿರುವ ಮಾತುಗಳು ಮತ್ತು ನೀಡಿರುವಂತಹ ಉದಾಹರಣೆಗಳು ಈಗ ಎಲ್ಲರ ಗಮನವನ್ನು ಸೆಳೆದಿದೆ.

ತಮ್ಮ ಭವಿಷ್ಯವಾಣಿಗೆ ಪೂರಕ ಎನ್ನುವಂತೆ ಇಸ್ರೇಲ್ ಲೆಬನಾನ್ ನಡುವೆ ಉದ್ವಿಗ್ನ ಪರಿಸ್ಥಿತಿ, ಉತ್ತರ ಕೊರಿಯದ ಸೈನಿಕರು ದಕ್ಷಿಣ ಕೊರಿಯಾದ ಗಡಿ ನಿಯಂತ್ರಣ ರೇಖೆಯನ್ನು ದಾಟಿರುವುದು, ರಷ್ಯಾ ತನ್ನ ಯು ದ್ಧ ನೌಕೆಗಳನ್ನು ಪ್ರಕ್ಷುಬ್ಧ ಪ್ರದೇಶಕ್ಕೆ ರವಾನೆ ಮಾಡಿರುವುದು, ತೈವಾನ್ ಸಮೀಪ ಚೀನಾದ ಸೇನೆಯು ಕವಾಯಿತು ನಡೆಸುತ್ತಿರುವುದನ್ನು ಕುಶಾಲ್ ಕುಮಾರ್ (Kushal Kumar Prediction) ಉದಾಹರಣೆಯನ್ನಾಗಿ ನೀಡಿದ್ದಾರೆ.

ಕುಶಾಲ್ ಅವರು ಹೇಳಿರುವಂತಹ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಗಮನಿಸಬೇಕಾದ ವಿಚಾರ ಏನೆಂದರೆ ಶತಮಾನಗಳ ಹಿಂದೆ ಫ್ರಾನ್ಸ್ ದೇಶದಲ್ಲಿ ಬದುಕಿದ್ದಂತಹ ವಿಶ್ವ ವಿಖ್ಯಾತ ಜ್ಯೋತಿಷಿ ನಾಸ್ಟ್ರಾಡಾಮಸ್ ಕೂಡಾ 2024ರಲ್ಲಿ ನೌಕಾ ಯುದ್ಧ ಹಾಗೂ ಹೊಸ ಪೋಪ್ ಆಗಮನ, ರಾಜ ಮನೆತನದಲ್ಲಿ ಸ್ಥಾನ ಪಲ್ಲಟದ ಭವಿಷ್ಯಗಳನ್ನು ನುಡಿದಿದ್ದರು. ಅವರ ಭವಿಷ್ಯ ವಾಣಿಗಳು ಸತ್ಯವಾಗಿದೆ ಎನ್ನುವುದು ವಿಶ್ವ ರಾಷ್ಟ್ರಗಳಲ್ಲಿ ಅನೇಕರ ನಂಬಿಕೆಯಾಗಿದೆ.

Leave a Comment