Sapthami Gowda: ಕೋರ್ಟ್ ಮೆಟ್ಟಿಲೇರಿದ ಕಾಂತಾರ ಬೆಡಗಿ ಸಪ್ತಮಿ ಗೌಡ, ಏನಾಗ್ತಿದೆ ಸ್ಯಾಂಡಲ್ವುಡ್ ನಲ್ಲಿ ?

Written by Soma Shekar

Published on:

---Join Our Channel---

Sapthami Gowda: ಸ್ಯಾಂಡಲ್ವುಡ್ ನಟ, ದೊಡ್ಮನೆಯ ಮೊಮ್ಮಗ ಯುವರಾಜ್ ಕುಮಾರ್ ದಾಂಪತ್ಯ ಜೀವನದಲ್ಲಿ (Yuva Rajkumar Divorce) ಎದುರಾಗಿರುವ ಸಮಸ್ಯೆ ಕುರಿತಾಗಿ ಕೆಲವು ದಿನಗಳ ಹಿಂದೆಯಷ್ಟೇ ಸಾಕಷ್ಟು ಸುದ್ದಿಗಳಾಗಿದೆ. ಯುವ ತಾನು ಪ್ರೀತಿಸಿ ಮದುವೆಯಾಗಿದ್ದ ಶ್ರೀದೇವಿ (Sridevi) ಅವರಿಗೆ ವಿಚ್ಚೇದನ ನೀಡುವ ನಿರ್ಧಾರವನ್ನು ಮಾಡಿದ್ದಾರೆ. ವಿಚ್ಚೇದನದ ವಿಷಯವಾಗಿ ಯುವ ಪತ್ನಿಗೆ ನೋಟೀಸ್ ನೀಡಿದ್ದ ವಿಚಾರವು ಸಹಾ ಈಗಾಗಲೇ ಸುದ್ದಿಯಾಗಿದೆ.

ಯುವ ರಾಜ್‍ಕುಮಾರ್ ಅವರಿಂದ ದೊರೆತ ನೋಟೀಸ್ ಗೆ ಶ್ರೀದೇವಿ ಅವರು ಉತ್ತರ ನೀಡಿದ್ದು ಸುಮಾರು ಹತ್ತು ಪುಟಗಳ ಸುದೀರ್ಘ ಪತ್ರದ ಉತ್ತರವನ್ನು ನೀಡಿರುವ ಶ್ರೀದೇವಿ ಅವರ ಉತ್ತರದಲ್ಲಿ ಯುವ ಅವರಿಗೆ ಸ್ಯಾಂಡಲ್ವುಡ್ ನಟಿಯೊಬ್ಬರ ಜೊತೆಗೆ ಸಂಬಂಧವಿತ್ತು ಎನ್ನುವ ಆ ರೋ ಪವನ್ನು ಸಹಾ ಮಾಡಿದ್ದರು. ಶ್ರೀದೇವಿ ಅವರ ತಂದೆ ಮಾದ್ಯಮಗಳ ಮುಂದೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಯುವ ಮತ್ತು ಅವರ ಪತ್ನಿಯ ವಿಚ್ಚೇದನದ ವಿಚಾರದಲ್ಲಿ ಶ್ರೀದೇವಿ ಅವರು ಪ್ರಸ್ತಾಪ ಮಾಡಿದ ನಟಿಯ ಹೆಸರು ಸಹಾ ದೊಡ್ಡ ಚರ್ಚೆಗಳಿಗೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರವಾಗಿ ಒಂದಷ್ಟು ಟ್ರೋಲ್ ಸಹಾ ನಡೆದಿತ್ತು. ಈಗ ಇವೆಲ್ಲವುಗಳ ಬೆನ್ನಲ್ಲೇ ನಟಿ ಸಪ್ತಮಿ ಗೌಡ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನುವ ವಿಷಯವೊಂದು ಸುದ್ದಿಯಾಗಿದೆ.

ಯುವ ಅವರ ಜೊತೆಯಲ್ಲಿ ತನ್ನ ಹೆಸರು ಬಂದಿದೆ ಎನ್ನುವ ಕಾರಣಕ್ಕೆ ಶ್ರೀದೇವಿ ವಿರುದ್ಧ ಸಪ್ತಮಿ ಗೌಡ (Sapthami Gowda)ಅವರು ಕೋರ್ಟ್ ಮೆಟ್ಟಿಲೇರಿದ್ದು, ಮಾನ ಹಾನಿ ಮಾಡದಂತೆ ಸಪ್ತಮಿಗೌಡ ಅವರು ಯುವ ಪತ್ನಿ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.‌ ತನ್ನ ಬಗ್ಗೆ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿ ತೇಜೋವಧೆ ಮಾಡಲಾಗುತ್ತಿದೆ ಎಂದು ಸಪ್ತಮಿ ಗೌಡ ಅವರು ಆರೋಪ ಮಾಡಿದ್ದು ಶ್ರೀದೇವಿ ಅವರ ವಿರುದ್ಧ ಕೋರ್ಟ್ ನಲ್ಲಿ ದಾವೆಯನ್ನು ಹೂಡಿದ್ದಾರೆ.

Leave a Comment