Sridevi Biopic: ನಾನು ಬದುಕಿರೋ ತನಕ ಶ್ರೀದೇವಿ ಬಯೋಪಿಕ್ ಮಾಡಕ್ಕೆ ಬಿಡಲ್ಲ; ನಟಿಯ ಪತಿ ವಾರ್ನಿಂಗ್ ಕೊಟ್ಟಿದ್ದೇಕೆ?

Written by Soma Shekar

Published on:

---Join Our Channel---

Sridevi Biopic: ಭಾರತೀಯ ಸಿನಿಮಾ ರಂಗದಲ್ಲಿ ನಟಿ ಶ್ರೀದೇವಿ ಹೆಸರು ಎಂದಿಗೂ ಮರೆಯಲಾಗದ ಹೆಸರು. ದಕ್ಷಿಣಾದಿಯಾಗಿ ಬಾಲಿವುಡ್ ನಲ್ಲೂ ನಂಬರ್ ಒನ್ ನಟಿಯಾಗಿ ಮಿಂಚಿದ್ದು ಮಾತ್ರವೇ ಅಲ್ಲದೇ ಎರಡು ತಲೆಮಾರಿನ ನಾಯಕ ನಟರ ಜೊತೆಗೆ ನಾಯಕಿಯಾಗಿ ಮೆರೆದ ಹೆಗ್ಗಳಿಕೆಯನ್ನು ನಟಿ ಶ್ರೀದೇವಿ ಪಡೆದಿದ್ದರು. ನಟಿಯ ಹಠಾತ್ ಮರಣ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ಸಿನಿ ಪ್ರೇಮಿಗಳಿಗೂ ಕೂಡಾ ದೊಡ್ಡ ಶಾಕ್ ಅನ್ನು ನೀಡಿತ್ತು. ಈಗ ಶ್ರೀದೇವಿ ಕೇವಲ ಸ್ಮರಣೆ ಮಾತ್ರ ಎನ್ನುವುದು ವಾಸ್ತವದ ವಿಚಾರವಾಗಿದೆ.

ಸಿನಿಮಾ ರಂಗದಲ್ಲಿ ಒಂದು ಛಾಪನ್ನು ಮೂಡಿಸಿರುವ ಶ್ರೀದೇವಿ ಅವರ ಬಯೋಪಿಕ್ (Sridevi Biopic) ನಿರ್ಮಾಣದ ಕುರಿತಾಗಿ ಈಗ ಅವರ ಪತಿ ನಿರ್ಮಾಪಕ ಬೋನಿ ಕಪೂರ್ (Boney Kapoor) ಹೇಳಿರುವ ಶಾಕಿಂಗ್ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ ಮತ್ತು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಬೋನಿ ಕಪೂರ್ ಮಾಡಿರುವ ಕಾಮೆಂಟ್‌ ಗಳು ಉದ್ಯಮ ವಲಯದಲ್ಲಿ ಹಾಟ್ ಟಾಪಿಕ್ ಆಗಿ ಬದಲಾಗುತ್ತಿದೆ. 

ಇಷ್ಟಕ್ಕೂ ವಿಷಯ ಏನೆಂದರೆ, ಬೋನಿ ಕಪೂರ್ ನಿರ್ಮಾಣ ಮಾಡಿರುವ ಹೊಸ ಸಿನಿಮಾ ಮೈದಾನ್ (Maidan) ಬಿಡುಗಡೆಗೆ ಸಿದ್ಧವಾಗಿದೆ. ಅಜಯ್ ದೇವಗನ್ ಅಭಿನಯದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನ ಮಾಡಿದ್ದು ಇದೇ ಏಪ್ರಿಲ್ 10 ರಂದು ಚಿತ್ರ ತೆರೆಗೆ ಬರಲಿದೆ. ಇತ್ತೀಚಿಗೆ ನಡೆದ ಈ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರು ಸಹಾ ಭಾಗಿಯಾಗಿದ್ದರು.

ಈ ವೇಳೆ ತಮ್ಮ‌ ಪತ್ನಿ ಶ್ರೀದೇವಿ ಅವರ ಬಯೋಪಿಕ್ ವಿಚಾರವಾಗಿ ಮಾತನಾಡಿರುವ ಬೋನಿ ಕಪೂರ್, ನನ್ನ ಪತ್ನಿ (ಶ್ರೀದೇವಿ) ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದವರು. ಆಕೆ ವೈಯಕ್ತಿಕ ವಿಷಯಗಳು ಹೊರಗೆ ಗೊತ್ತಾಗಬಾರದೆಂದೇ ಭಾವಿಸಿದ್ದರು.  ನಾನು ಆಕೆಯ ಆಲೋಚನೆಗಳು ಮತ್ತು ವ್ಯಕ್ತಿತ್ವವನ್ನು ಬಹಳ ಗೌರವಿಸುತ್ತೇನೆ. ಬಯೋಪಿಕ್ ಅಂತ ಬಂದಾಗ ಅಲ್ಲಿ ಸತ್ಯಗಳನ್ನು  ತಿರುಚುವ ಅವಕಾಶವಿರುತ್ತದೆ.

ಅದಕ್ಕೇ.. ನಾನು ನನ್ನ ಹೆಂಡತಿಯ ಯೋಚನೆಗೆ ತಕ್ಕಂತೆ ಅವರ ಬಯೋಪಿಕ್ ಮಾಡಲು ಬಯಸುವುದಿಲ್ಲ. ನಾನು ಬದುಕಿರುವವರೆಗೂ ಆಕೆಯ ಬಯೋಪಿಕ್ ನಿರ್ಮಾಣ ಮಾಡುವುದಿಲ್ಲ, ಮಾಡುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೋನಿ ಕಪೂರ್ ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇದೀಗ ಅವರು ಮಾಡಿರುವ ಈ ಕಾಮೆಂಟ್‌ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ವಾಸ್ತವದಲ್ಲಿ ಕಳೆದ ಕೆಲವು ವರ್ಷಗಳಿಂದಲೂ ನಿರ್ಮಾಪಕರು ಶ್ರೀದೇವಿ ಅವರ ಬಯೋಪಿಕ್ ನಿರ್ಮಾಣಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವರು ಈಗಾಗಲೇ ಬೋನಿ ಕಪೂರ್ ಅವರನ್ನು ಭೇಟಿ ಮಾಡಿ ಈ ಕುರಿತಾಗಿ ಚರ್ಚೆಗಳನ್ನು ಸಹಾ ನಡೆಸಿದ್ದಾರೆ ಎನ್ನಲಾಗಿದೆ.‌ ಇವೆಲ್ಲವುಗಳ ಬೆನ್ನಲ್ಲೇ ಈಗ ಬೋನಿ ಕಪೂರ್ ಅವರು ಹೇಳಿರುವ ಮಾತುಗಳು ವೈರಲ್ ಆಗಿದೆ.‌

Leave a Comment