Puttakkana Makkalu: ಕಾಳಿ ಸಾಕ್ಷಿ ಏನೋ ತಂದ ಆದ್ರೆ ಜಡ್ಜ್ ಕೌಸಲ್ಯ ಮತ್ತು ಅಳಿಯಂಗೆ ಶಿಕ್ಷೆ ಕೊಡ್ತಾರಾ? ಸುಮ್ಮನಾಗ್ತಾರಾ? ನೆಟ್ಟಿಗರ ಪ್ರಶ್ನೆ

Written by Soma Shekar

Published on:

---Join Our Channel---

Puttakkana Makkalu: ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಸೀರಿಯಲ್ ಆಗಿ ನಂಬರ್ ಒನ್ ಸೀರಿಯಲ್ ಆಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ, ಸ್ಯಾಂಡಲ್ವುಡ್ ನ ಹಿರಿಯ ನಟಿ ಉಮಾಶ್ರೀ (Umashree) ಅವರು, ಮಂಜು ಭಾಷಿಣಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿದೆ. ಸೀರಿಯಲ್ ನ ಹೊಸ ಹೊಸ ಟ್ವಿಸ್ಟ್ ಗಳು ಇನ್ನಷ್ಟು ಮತ್ತಷ್ಟು ಎನ್ನುವಂತೆ ಪ್ರೇಕ್ಷಕರ ಗಮನವನ್ನು ಸೆಳೆದಿದೆ.

ಪ್ರಸ್ತುತ ಪುಟ್ಟಕ್ಕನ ಹಿರಿಯ ಮಗಳು ಸಹನಾ (Sahana) ಮತ್ತು ಮುರುಳಿ ಮೇಷ್ಟ್ರ (Murali) ವಿಚ್ಚೇದನದ ಕೇಸ್ ಕೋರ್ಟ್ ನಲ್ಲಿ ನಡೀತಿದ್ದು, ಕೋರ್ಟ್ ದೃಶ್ಯಗಳ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. ಅನೇಕರು ಅಸಮಾಧಾನ ಹೊರ ಹಾಕಿದ್ದು ಮಾತ್ರವೇ ಅಲ್ಲದೇ ವ್ಯಂಗ್ಯ ಮಾಡಿದ್ದರು. ವಿಚ್ಚೇದನ ಅಂತ ಹೋದ ಸಹನಾಗೆ ಏಳು ವರ್ಷ ಜೈಲು ಎಂದು ನ್ಯಾಯಾಧೀಶರು ಹೇಳೋದು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದರು.

ಇವೆಲ್ಲವುಗಳ ನಡುವೆಯೇ ಇನ್ನೇನು ಸಹನಾಗೆ ಶಿಕ್ಷೆ ಆಗುತ್ತೆ ಅನ್ನೋವಾಗ್ಲೇ ಕಾಳಿ ಸಾಕ್ಷಿಯನ್ನು ತಂದು ಕೋರ್ಟ್ ನಲ್ಲಿ ಸಹನಾ ಅವರ ಅತ್ತೆ ಕೌಸಲ್ಯ ಮತ್ತು ಅವರ ಅಳಿಯನ ಅಸಲಿಯತ್ತನ್ನ ಎಲ್ಲರ ಮುಂದೆ ಬಯಲು ಮಾಡಿದ್ದಾನೆ. ವೀಡಿಯೋ ನೋಡಿದ ಮೇಲೆ ಮುರುಳಿ ಮೇಷ್ಟ್ರಿಗೂ ಸಹಾ ತನ್ನ ತಾಯಿ ಮತ್ತು ಬಾವ ಮಾಡಿರೋ ಮಸಲತ್ತು ಏನು ಅನ್ನೋದು ಅರ್ಥವಾಗಿದೆ. ‌

ಸಹನಾ ಹೇಳಿದ್ದಕ್ಕೆ ಯಾವುದೂ ಸಾಕ್ಷಿ ಇಲ್ಲ ಅಂತ ನ್ಯಾಯಾಧೀಶರು ಏಳು ವರ್ಷ ಶಿಕ್ಷೆ ಹಾಕೋಕೆ ಹೋಗಿದ್ರಲ್ವಾ, ಈಗ ಸಹನಾ ಅತ್ತೆ ಮತ್ತು ಮೇಷ್ಟ್ರು ಬಾವನ ನಿಜ ರೂಪ ಗೊತ್ತಾಗಿದೆ. ಕೊಲೆ ಮಾಡೋ ಪ್ರಯತ್ನ ಮಾಡಿದ್ದಾರೆ. ಅವರಿಗೆ ಎಂತಹ ಕಠಿಣ ಶಿಕ್ಷೆ ಕೊಡ್ತಾರೆ? ಅಸಲು ಶಿಕ್ಷೆ ಕೊಡ್ತಾರೋ ಇಲ್ವೋ ? ಅಂತ ನೆಟ್ಟಿಗರು ಈಗ ಪ್ರಶ್ನೆ ಮಾಡ್ತಾ ಇದ್ದಾರೆ. ಅನೇಕರು ಕೋರ್ಟ್ ಕೇಸ್ ಒಂದೇ ಹಿಯರಿಂಗ್ ನಲ್ಲಿ ಮುಗಿತಿರೋದು ಅದ್ಭುತ ಅಂತಿದ್ದಾರೆ.‌

ಕೋರ್ಟ್ ಸಹನಾ ಮತ್ತು ಮುರುಳಿ ಮೇಷ್ಟ್ರಿಗೆ ಆರು ತಿಂಗಳ ಕಾಲಾವಕಾಶ ಕೂಡಾ ಕೊಡೋಕೆ ಹೊರಟಿದೆ. ಈ ಅವಕಾಶ ಅವರ ನಡುವೆ ಮತ್ತೆ ಸಂಬಂಧವನ್ನ ಸರಿ ಮಾಡುತ್ತಾ ? ಅನ್ನೋ ಪ್ರಶ್ನೆ ಇದ್ರೆ, ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಹನಾ ಮೇಷ್ಟ್ರು ಜೊತೆ ಮತ್ತೆ ಹೋಗೋದು ಬೇಡ, ಆಲೋಚನೆ ಮಾಡೋ ಶಕ್ತಿ ಕೂಡಾ ಇಲ್ಲದ ಮುರುಳಿ ಜೊತೆ ಬದುಕಬೇಡ ಸಹನಾ ಎಂದು ಸಹಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Leave a Comment