Dhruva Sarja : ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು; ನೇಹಾ ಸಾವಿನ ಬಗ್ಗೆ ಧೃವ ಸರ್ಜಾ ಅಸಮಾಧಾನ, ಆಕ್ರೋಶ

Written by Soma Shekar

Published on:

---Join Our Channel---

Dhruva Sarja: ಹುಬ್ಬಳ್ಳಿಯ (Hubballi) ಕಾಲೇಜೊಂದರಲ್ಲಿ ನಡೆದಂತಹ ಕಾರ್ಪೊರೇಟರ್ ಮಗಳ ಭೀ ಕ ರವಾದ ಹ ತ್ಯೆ ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇಂತಹುದೊಂದು ಕ್ರೌರ್ಯ ಮೆರದವನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಸೋಶಿಯಲ್ ಮೀಡಿಯಾಗಳ ಮೂಲಕ ಅನೇಕರು ಆಗ್ರಹಿಸುತ್ತಿದ್ದಾರೆ. ಎಲ್ಲೆಡೆ ತೀವ್ರ ಅಸಮಾಧಾನ ಮತ್ತು ಆಕ್ರೋಶವು ವ್ಯಕ್ತವಾಗುತ್ತಿದೆ.‌

ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಹ ತ್ಯೆ ಗೆ ಇದೀಗ ರಾಜ್ಯದಾದ್ಯಂತ ಆ ಕ್ರೋ ಶ ವು ಭುಗಿಲೆದ್ದಿದ್ದು, ಈ ವೇಳೆ ಸ್ಯಾಂಡಲ್ವುಡ್ ನ ಸ್ಟಾರ್ ನಟ ಧ್ರುವ ಸರ್ಜಾ (Dhruva Sarja) ಅವರು ಈ ವಿಚಾರಕ್ಕೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಲ್ಲದೇ ಅವರು ಆ ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕೆಂದು ನೇಹಾ ಪರವಾಗಿ ದನಿ ಎತ್ತಿದ್ದಾರೆ ನಟ ಧೃವ ಸರ್ಜಾ ಅವರು. ಸೋಶಿಯಲ್ ಮೀಡಿಯಾ ಮೂಲಕ ನಟ ಪ್ರತಿಕ್ರಿಯೆ ನೀಡಿದ್ದಾರೆ.

ಧೃವ ಸರ್ಜಾ (Dhruva Sarja) ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ, ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು, ಜೈ ಆಂಜನೇಯ ಎಂದು ಪೋಸ್ಟ್ ಮಾಡಿದ್ದಾರೆ.‌

ಏ.18 ರಂದು ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ಅವರ ಪತ್ರಿಯ ಬರ್ಬರ ಹ ತ್ಯೆ ಪುತ್ರಿ ಹತ್ಯೆ ನಡೆದಿತ್ತು. ಈ ಕೃತ್ಯ ಎಸಗಿದ ಆರೋಪಿಯಾದಂತಹ ಫಯಾಜ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ನಗರದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲೂ ಈ ವಿಚಾರವು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

Leave a Comment