Sara Ali Khan: ಬಡವರಿಗೆ ಆಹಾರ ಹಂಚೋದನ್ನ ವೀಡಿಯೋ ಮಾಡಬೇಡಿ, ಮಾದ್ಯಮದವರ ಮೇಲೆ ಸಿಟ್ಟಾದ ನಟಿ

Written by Soma Shekar

Published on:

---Join Our Channel---

Sara Ali Khan: ಬಾಲಿವುಡ್ ನ (Bollywood) ಯುವ ಸ್ಟಾರ್ ನಟಿ ಸಾರಾ ಆಲಿ ಖಾನ್ ಪಟೌಡಿ ಮನೆತನದ ಮಗಳಾದರೂ ಕೂಡಾ ತನ್ನ ಸರಳತೆಯಿಂದಾಗಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ಅಲ್ಲದೇ ಸಾರಾ ಆಗಾಗ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿ ಶ್ರದ್ಧೆ ಭಕ್ತಿಯಿಂದ ದೇವರ ಆರಾಧನೆಯನ್ನು ಮಾಡುವ ವಿಚಾರವಾಗಿಯೂ ನಟಿ ಒಂದು ಪ್ರತ್ಯೇಕ ವರ್ಗದ ಜನರಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಾರೆ ಮತ್ತು ಬಹಳ ಕೆಟ್ಟದಾಗಿ ಟ್ರೋಲ್ ಗೆ ಗುರಿಯಾಗುತ್ತಾರೆ.

ಈಗ ನಟಿ ಸೆಲೆಬ್ರಿಟಿಗಳು ಇರುವ ಕಡೆಗೆ ಹೋಗಿ ಫೋಟೋಗಳನ್ನು ತೆಗೆಯುವ ಮತ್ತು ವೀಡಿಯೋಗಳನ್ನು ಮಾಡುವ ಪಾಪರಾಜಿಗಳ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಹೌದು, ಸಾರಾ (Sara Ali Khan) ಅವರು ಸರಳ ಉಡುಗೆ ಧರಿಸಿ ರಸ್ತೆ ಬದಿಯಲ್ಲಿ ಇರುವ ನಿರ್ಗತಿಕರಿಗೆ ಆಹಾರದ ಪೊಟ್ಟಣಗಳನ್ನು ನೀಡೋದಕ್ಕೆ ಅಂತ ಬಂದಿದ್ದರು. ನಟಿ ಆಹಾರವನ್ನು ಹಂಚುತ್ತಿದ್ದರು.‌

ಈ ವೇಳೆ ಪಾಪರಾಜಿಗಳು ನಟಿಯ ಫೋಟೋಗಳನ್ನು ಕ್ಲಿಕ್ ಮಾಡಲು ಮುಂದಾಗಿದ್ದಾರೆ. ನಟಿ ದಯವಿಟ್ಟು ಫೋಟೋ ತೆಗೀಬೇಡಿ. ಇಲ್ಲಿರುವವರು ಹೊಟ್ಟೆ ಹಸಿವಿನಿಂದ ಇದ್ದಾರೆ, ಪ್ಲೀಸ್ ಎಂದು ಮನವಿಯನ್ನು ಮಾಡಿಕೊಂಡರೂ ಕೂಡಾ ಕೆಲವರು ಫೋಟೋಗಳನ್ನು ತೆಗೆಯುವುದನ್ನು ನಿಲ್ಲಿಸಿಲ್ಲ. ಇದರಿಂದ ನಟಿ ಫೋಟೋಗ್ರಾಫರ್ ಗಳ ಮೇಲೆ ಬಹಳ ಸಿಟ್ಟನ್ನು ಮಾಡಿಕೊಂಡಿದ್ದಾರೆ.

ನಂತರ ನಟಿ ಅಲ್ಲಿಂದ ಹೊರಟು ಹೋದರು. ಈ ವೀಡಿಯೋ ವೈರಲ್ ಆದ ಮೇಲೆ ನೆಟ್ಟಿಗರಿಂದ ಈ ವಿಚಾರಕ್ಕೆ ಮಿಶ್ರ ಪ್ರತಿಕ್ರಿಯೆ ಹರಿದು ಬಂದಿದೆ. ಕೆಲವರು ನಟಿಯ ಗುಣವನ್ನು ಮೆಚ್ಚಿದರೆ, ಇನ್ನೂ ಕೆಲವರು ನಟಿ ಆ ಸಮಯಕ್ಕೆ ಅಲ್ಲಿಗೆ ಹೋಗ್ತಾರೆ ಅಂತ ಅವರ ಪಿಆರ್ ಟೀಮ್ ಹೇಳದೇ ಹೋದರೆ ಫೋಟೋಗ್ರಾಫರ್ ಗಳು ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೇಗೆ ಹೋಗೋಕೆ ಸಾಧ್ಯ. ಎಲ್ಲಾ ಜನರನ್ನ ಮೆಚ್ಚಿಸೋ ನಾಟಕ ಎಂದಿದ್ದಾರೆ.

Leave a Comment