Alien Existence: ಭೂಮಿಗೆ ಬಂದೇ ಬಿಟ್ವು ಏಲಿಯನ್ ಗಳು; ಇದು ನಕಲಿ ಅಲ್ಲ ಅಸಲಿ ಎಂದ ತಜ್ಞರು, ಶಾಕಿಂಗ್!

Written by Soma Shekar

Updated on:

---Join Our Channel---

Alien Existence : ಏಲಿಯನ್ ಗಳು (Aliens) ಅಥವಾ ಅನ್ಯಗ್ರಹ ವಾಸಿಗಳ ಕುರಿತಾಗಿ ಸದಾ ಒಂದು ರೀತಿಯ ಆಸಕ್ತಿ ಮತ್ತು ಕುತೂಹಲ ಎಲ್ಲರಿಗೂ ಇದ್ದೇ ಇದೆ. ಏಲಿಯನ್ ಗಳ ಅಸ್ತಿತ್ವದ ಕುರಿತಾಗಿ ಸಾಕಷ್ಟು ಚರ್ಚೆಗಳು ದಶಕಗಳಿಂದಲೂ ನಡೆಯುತ್ತಿದೆ. ಆದರೆ ಅವುಗಳ ಅಸ್ತಿತ್ವದ ಕುರಿತಾಗಿ ಯಾವುದೇ ಒಂದು ಸ್ಪಷ್ಟ ಅಥವಾ ನಿಖರವಾದ ಸಾಕ್ಷಿ ಎನ್ನುವುದು ಇಲ್ಲದೇ ಇರುವುದು ಸತ್ಯವಾಗಿದೆ. ಆಗೊಮ್ಮೆ ಈಗೊಮ್ಮೆ ಏಲಿಯನ್ ಗಳು ಕಾಣಿಸಿಕೊಂಡವು ಎಂದು ಕೆಲವರು ಹೇಳುವುದು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತದೆ. ಕೆಲವರು ಈ ವಿಚಾರಗಳನ್ನ ನಂಬಿದರೆ, ಇನ್ನೂ ಕೆಲವರು ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಮಾಡುವ ಸ್ಟಂಟ್ ಗಳು ಅಂತ ನಿರ್ಲಕ್ಷ್ಯ ಮಾಡುತ್ತಾರೆ.

ಏಲಿಯನ್ ಗಳ ಇರುವಿಕೆಯ (Alien Existence) ಕುರಿತಾಗಿ ಸಾಕಷ್ಟು ದೇಶಗಳಲ್ಲಿ ಸಂಶೋಧನೆಗಳು ನಡೆಯುತ್ತಿದೆ.‌ ಕೆಲವು ವಿಜ್ಞಾನಿಗಳು ತಮ್ಮದೇ ಆದ ಸಿದ್ಧಾಂತಗಳನ್ನು ಪ್ರಕಟಿಸಿದ್ದಾರೆ. ಏನೇ ಆದರೂ ಏಲಿಯನ್ ಎನ್ನುವ ವಿಚಾರ ಇಂದಿಗೂ ನಿಗೂಢವಾಗಿಯೇ (Secret) ಉಳಿದಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಏಲಿಯನ್ ಮತ್ತು ಹಾರುವ ತಟ್ಟೆಗಳನ್ನು ನೋಡಿದ್ದೇವೆ ಎಂಬುದಾಗಿ ಕೆಲವರು ವಾದಿಸುತ್ತಾರೆ. ಈ ಕುರಿತಾಗಿ ಒಂದಷ್ಟು ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ವೈರಲ್ ಕೂಡಾ ಆಗಿದೆ.

ಆಗಾಗ ಭೂಮಿ ಹಾಗೂ ಆಕಾಶದಲ್ಲಿ ಕೆಲವು ವಿಚಿತ್ರವಾದಂತಹ ವಸ್ತುಗಳು ಕಾಣಿಸಿಕೊಂಡಾಗ ಇವುಗಳನ್ನು ಯುಎಫ್ಓ ಅಂದರೆ ಅನ್ ಐಡೆಂಟಿಫೈಡ್ ಪ್ಲೈಯಿಂಗ್ ಆಬ್ಜೆಕ್ಟ್ (UFO) ಎಂದು ಕರೆಯಲಾಗುತ್ತದೆ. ಇವುಗಳು ಏಲಿಯನ್ ಗಳು ತಾವು ಸಂಚರಿಸಲು ಬಳಸುವ ವಿಶೇಷ ವಾಹನಗಳು ಎಂದು ಹೇಳಲಾಗಿದೆ. ಈ ಎಲ್ಲಾ ಚರ್ಚೆಗಳು ಮತ್ತು ಸಂಶೋಧನೆಗಳ ನಡುವೆ ಅಮೇರಿಕಾದ ಲಾಸ್ ವೇಗಾಸ್ ನ (Las Vegas) ಕುಟುಂಬವೊಂದು ಏಲಿಯನ್ ಗೆ ಸಂಬಂಧಿಸಿದಂತೆ ವೀಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾರೆ.

ಈ ವೀಡಿಯೋವನ್ನು ನೋಡಿದ ತಜ್ಞರ ಗುಂಪೊಂದು ಈ ವೀಡಿಯೋ ನಕಲಿ ಆಗೋದಕ್ಕೆ ಸಾಧ್ಯವೇ ಇಲ್ಲ, ಇದು ಅಸಲಿ ವೀಡಿಯೋ ಎಂದು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಕಳೆದ ವರ್ಷ ಏಪ್ರಿಲ್ 30 ಮತ್ತು ಮೇ ಒಂದರ ನಡು ರಾತ್ರಿಯ ಸಮಯದಲ್ಲಿ ಇಂಥದೊಂದು ಘಟನೆ ನಡೆದಿದೆ. ಲಾಸ್ ವೇಗಾಸ್ ನ ಕುಟುಂಬವೊಂದಕ್ಕೆ ಆಕಾಶದಲ್ಲಿ ಹಸಿರು ದೀಪವೊಂದು ಕಂಡಿದೆ. ಅದಾದ ನಂತರ ಸ್ವಲ್ಪ ಹೊತ್ತಿನಲ್ಲೇ ಮನೆಯ ಹಿಂಬದಿಯಲ್ಲಿ ಏನೋ ಬೀಳುತ್ತಿರುವುದು ಗೋಚರಿಸಿದೆ.

ಅದು ಏನೆಂದು ಪರಿಶೀಲನೆ ಮಾಡುತ್ತಿರುವಾಗ ಬೇಲಿಗಳ ಬಳಿಯಲ್ಲಿ ಒಂದು ವಿಚಿತ್ರವಾದ ಆಕೃತಿ ಕಾಣುತ್ತದೆ. ಉದ್ದವಾದ, ತೆಳ್ಳಗಿನ ಆಕಾರವು ಬೂದು ಮತ್ತು ಹಸಿರು ಬಣ್ಣದಲ್ಲಿದ್ದು, ಅದರ ಎತ್ತರ ಸುಮಾರು ಎಂಟರಿಂದ 10 ಅಡಿಗಳಾಗಿತ್ತು ಎಂಬುದಾಗಿ ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಹೊಳೆವ ಕಣ್ಣುಗಳಿಂದ ಆಕೃತಿಯು ತಮ್ಮ ಕಡೆಗೆ ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು ಎಂದು ಹೇಳಿದ್ದಾರೆ.

ಆದರೆ ಅದು ಖಂಡಿತ ಮನುಷ್ಯನಲ್ಲ ಎಂಬುದು ಖಚಿತವಾಗಿದೆ ಎನ್ನುವುದನ್ನು ತಿಳಿಸಿರುವ ಕುಟುಂಬದವರು ಆ ಎಲ್ಲಾ ದೃಶ್ಯಗಳನ್ನು ವೀಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೋವನ್ನು ನೋಡಿದ ತಜ್ಞರು ಇದು ನಕಲಿಯಲ್ಲ ಅಸಲಿ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಅಲ್ಲಿನ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ಮಾಡಿ ನೋಡಿದಾಗ ಅವರಿಗೆ ಅಲ್ಲಿ ಅಸಹಜವಾದದ್ದು ಏನು ಕಂಡುಬಂದಿಲ್ಲ ಎನ್ನಲಾಗಿದೆ. ‌

Leave a Comment