Bhagyalakshmi: ತಾಂಡಬ್ ಬಯಸ್ಸಿದ್ದೊಂದು ಆಗಿದ್ದು ಮತ್ತೊಂದು, ಆದ್ರೂ ತನ್ನ ಬುದ್ಧಿ ಬದಲಾಯಿಸದ ತಾಂಡವ್

Written by Soma Shekar

Published on:

---Join Our Channel---

Bhagyalakshmi : ಭಾಗ್ಯಲಕ್ಷ್ಮೀ (Bhagyalakshmi) ಸೀರಿಯಲ್ ನಲ್ಲಿ ತಾಂಡವ್ (Tandav) ಅಂದುಕೊಂಡಿದ್ದು ಒಂದಾದ್ರೆ ಅಲ್ಲಿ ಆಗಿದ್ದು ಮತ್ತೊಂದಾಗಿದೆ. ಹೇಗಾದ್ರು ಸರಿ ಭಾಗ್ಯಾನ ತನ್ನ ತಾಯಿ ಹತ್ರ ಸಿಕ್ಕಿ ಹಾಕಿಸಬೇಕು ಅಂತ ಮಾಡಿದ ಪ್ಲಾನ್ ಉಲ್ಟಾ ಹೊಡೆದಿದೆ. ಭಾಗ್ಯಾಳ ಸಾಧನೆ ನೋಡಿ ಕುಸುಮಾ (Kusuma) ಹೆಮ್ಮೆ ಪಟ್ಟಿದ್ದಾರೆ. ಸನ್ಮಾನ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಸೊಸೆ ತನಗೆ ಸೊಸೆಯಲ್ಲ ಮಗಳು ಅಂತ ಮೆಚ್ಚುಗೆ ನೀಡ್ತಾ, ನನ್ನ ಮಗಳೇ ಆಗಿದಿದ್ರು ಇಷ್ಟು ಚೆನ್ನಾಗಿ ನೋಡಿಕೊಳ್ತಾ ಇರ್ಲಿಲ್ಲ ಅನ್ನೋ ಮಾತನ್ನ ಹೇಳಿದ್ದಾರೆ.

ಭಾಗ್ಯ ತನಗೆ ಸಿಕ್ಕಿರೋ ಗೌರವ, ಸ್ಥಾನ ಮಾನ, ತನ್ನ ಸಾಧನೆ ಎಲ್ಲದರ ಸಂಪೂರ್ಣ ಕ್ರೆಡಿಟ್ ಅನ್ನ ಎಲ್ಲರ ಮುಂದೆ ತನ್ನ ಅತ್ತೆಗೆ ನೀಡಿದ್ದಾಳೆ. ಇದು ಕುಸುಮಾರನ್ನ ಭಾವುಕರನ್ನಾಗಿ ಮಾಡಿದೆ. ಮತ್ತೊಂದು ಕಡೆ ತಾಂಡವ್ ಗೆ ಮಾತ್ರ ಇದೆಲ್ಲಾ ನುಂಗಲಾರದ ಬಿಸಿ ತುಪ್ಪ ಆಗಿ ಪರಿಣಮಿಸಿದೆ. ತಾನು ಮಾತ್ರ ಭಾಗ್ಯಳ ಸಾಧನೆಯನ್ನ ಒಪ್ಪಿಕೊಳ್ಳೋದಕ್ಕೆ ಸಿದ್ಧನಾಗಿಲ್ಲ.

ಕುಸುಮಾ ತಾಂಡವ್ ಗೆ ಭಾಗ್ಯಾ ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ದಾಳೆ, ಒಳ್ಳೆ ಉದ್ಯೋಗ ಪಡ್ಕೊಂಡು ನಿನ್ನ ಸರಿ ಸಮನಾಗಿ ನಿಂತಿದ್ದಾಳೆ. ಇನ್ನು ಡಿವೋರ್ಸ್ ವಿಚಾರವನ್ನ ಕೈ ಬಿಡಬೇಕು ಅಂತ ಹೇಳಿದ್ದಾರೆ. ಭಾಗ್ಯ ಸಹಾ ಕೈ ಜೋಡಿಸಿ ಮಕ್ಕಳಿಗಾಗಿ ಒಪ್ಪಿಕೊಳ್ಳಿ ಅಂದ್ರೂ ಕೂಡಾ ತಾಂಡವ್ ಅದಕ್ಕೆ ಸಿದ್ಧನಾಗಿಲ್ಲ.

ಅದು ಸಾಲದು ಅಂತ ಭಾಗ್ಯ ಮನೆಯವ್ರನ್ನೆಲ್ಲಾ ಆಟೋದಲ್ಲಿ ಕರ್ಕೊಂಡು ಹೋಗ್ತಾಳೇನೋ ಅಂತ ತಾಂಡವ್ ವ್ಯಂಗ್ಯ ಮಾಡುವಾಗಲ್ಲೇ ಹೊಟೇಲ್ ಕಡೆಯಿಂದ ಒಂದು ಕಾರು ಭಾಗ್ಯಳ ಪಿಕ್ ಅಪ್ ಮತ್ತು ಡ್ರಾಪ್ ಗಾಗಿ ನೀಡಲಾಗಿದೆ. ಇದನ್ನ ನೋಡಿದ ತಾಂಡವ್ ಇನ್ನಷ್ಟು ಉರ್ಕೊಂಡಿದ್ದಾನೆ. ಭಾಗ್ಯ ಎಷ್ಟೇ ಸಾಧನೆ ಮಾಡಿದರೂ ತಾಂಡವ್ ಮಾತ್ರ ಅದನ್ನ ಮೆಚ್ಚಲು ಸಿದ್ಧವಿಲ್ಲ ಅನ್ನೋದು ನಿಜ.

Leave a Comment