Bhagyalakshmi: ಶ್ರೇಷ್ಠಾ ಕೆನ್ನೆ ಮೇಲೆ ಬಾಸುಂಡೆ, ಬಡ್ಡಿ ಸಮೇತ ಕಜ್ಜಾಯ ಕೊಟ್ಟ ಭಾಗ್ಯಳ ರೌದ್ರ ರೂಪ, ಫ್ಯಾನ್ಸ್ ಖುಷಿ

Written by Soma Shekar

Published on:

---Join Our Channel---

Bhagya Lakshmi: ಭಾಗ್ಯಲಕ್ಷ್ಮಿ (Bhagya Lakshmi) ಸೀರಿಯಲ್ ನಲ್ಲಿ ಶ್ರೇಷ್ಠ ಮಾಡಿದಂತಹ ಮೋಸ ಏನು ಅನ್ನೋದು ಭಾಗ್ಯಾಳಿಗೆ ತಂಗಿ ಪೂಜಾ ವಿವರಿಸಿ ಅರ್ಥ ಮಾಡಿಸಿದ್ದಾಳೆ. ಸತ್ಯವನ್ನ ತಿಳಿದುಕೊಂಡ ಭಾಗ್ಯ ಕೋಪದಿಂದ ಸಿಡಿದೆದ್ದಾಳೆ. ಶ್ರೇಷ್ಠ ಎಲ್ಲಿದ್ದಾಳೆ ಎಂದು ತಿಳಿದುಕೊಂಡು ಅವಳಿದ್ದ ಜಾಗಕ್ಕೆ ಬಂದು ರಪ ರಪ ಅಂತ ಶ್ರೇಷ್ಠ (Shreshtha) ಕಪಾಳಕ್ಕೆ ಬಾರಿಸಿದ್ದಾಳೆ. ಸದಾ ಅಳ್ತಾ, ದುಃಖ ಪಡ್ತಾ, ಗಂಡನ ಮಾತುಗಳನ್ನು ಕೇಳ್ತಾ, ಮೌನವಾಗಿದ್ದ ಭಾಗ್ಯ ಇದ್ದಕ್ಕಿದ್ದ ಹಾಗೆ ರೌದ್ರ ರೂಪ ತಾಳಿದ್ದನ್ನ ನೋಡಿ ಕೊನೆಗೂ ಪ್ರೇಕ್ಷಕರು ಖುಷಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ನೀಡುತ್ತಿದ್ದಾರೆ.

ಭಾಗ್ಯಾ(Bhagya) ತನ್ನ ತಂಗಿಯ ಮದುವೆ ಸಮಯದಲ್ಲಿ 2 ಲಕ್ಷ ರೂಪಾಯಿಗಳನ್ನು ಇಟ್ಟಿರ್ತಾಳೆ. ಆಗ ಇನ್ನೊಬ್ಬ ತಂಗಿ ಪೂಜಾ ಅದನ್ನ ಕದಿಯೋದು ಶ್ರೇಷ್ಠಳ ದೃಷ್ಟಿಗೆ ಬಿದ್ದಿರುತ್ತೆ. ಪೂಜಾ ಕದ್ದು ಇಟ್ಟಿರೋ ಹಣವನ್ನು ಶ್ರೇಷ್ಠ ಕದೀತಾಳೆ. ಅಲ್ಲದೇ ದುಡ್ಡಿಲ್ಲದೇ ಪರದಾಡ್ತಾ ಇದ್ದಂತಹ ಭಾಗ್ಯಗೆ ಅದೇ ಹಣವನ್ನು ಸಾಲವಾಗಿ ಕೊಟ್ಟಿರ್ತಾಳೆ. ಅನಂತರ ಭಾಗ್ಯ ಕಷ್ಟದಲ್ಲಿರುವಾಗಲೇ ನನ್ನ ಹಣ ನನಗೆ ಬೇಕು, ಮದುವೆ ಖರ್ಚುಗಳಿದೆ ಅಂತ ಹೇಳಿ ಮುಂದೆ ದೊಡ್ಡ ಸಮಸ್ಯೆಯನ್ನು ತಂದಿರ್ತಾಳೆ.

ಕಳ್ಳತನದ ವಿಚಾರ ಗೊತ್ತಿಲ್ಲದ ಭಾಗ್ಯ ಹೋಟೆಲ್ ನಲ್ಲಿ ಕೆಲಸ ಸಿಕ್ಕ ಮೇಲೆ ತನಗೆ ಸಿಕ್ಕಿದ ಅಡ್ವಾನ್ಸ್ ಹಣವನ್ನು ತಂದು ಶ್ರೇಷ್ಠಾ ಕೈಗೆ ಕೊಟ್ಟು ಉಳಿದಿರೋ ಹಣ ಬೇಗ ಕೊಡ್ತೀನಿ ಅಂತ ಭರವಸೆ ಕೊಡ್ತಾಳೆ. ಆದರೆ ತಾನು ಮಾಡಿದ್ದು ತಪ್ಪು ಅಂತ ಗೊತ್ತಾಗಿರೋ ಪೂಜಾ ಅಕ್ಕನ ಕಾಲು ಹಿಡ್ಕೊಂಡು ನಡೆದ ಅಸಲಿ ವಿಷಯ ಏನು ಅನ್ನೋದನ್ನ ತಿಳಿಸುತ್ತಾಳೆ. ಇನ್ನೊಂದು ಕಡೆ ತಾಂಡವ್ ಮತ್ತು ಶ್ರೇಷ್ಠಾ ಪ್ರೀ ವೆಡ್ಡಿಂಗ್ ಶೂಟಿಂಗ್ ಗೆ ಎಲ್ಲಾ ತಯಾರಿ ಮಾಡಿಕೊಂಡಿರುತ್ತಾರೆ.

ಅದು ನಡೆಯುವ ಜಾಗಕ್ಕೆ ಬಂದ ಭಾಗ್ಯ ಶ್ರೇಷ್ಠಾ ಮುಂದೆ ತನ್ನ ಉಗ್ರ ರೂಪವನ್ನು ಪ್ರದರ್ಶನ ಮಾಡಿದ್ದಾಳೆ. ಶ್ರೇಷ್ಠಾ ಕೆನ್ನೆಗೆ ಒಂದರ ನಂತರ ಮತ್ತೊಂದು ಎನ್ನುವಂತೆ ಸರಿಯಾಗಿ ಏಟುಗಳನ್ನು ಕೊಟ್ಟು ನನ್ನ ಹಣವನ್ನು ನನಗೆ ಸಾಲ ಕೊಟ್ಟಿದ್ದೀಯಾ ಅಂತ ಬಾರಿಸಿದ್ದಾಳೆ. ಅಲ್ಲದೇ ನನಗೆ ದುಡ್ಡು ಸಿಗೋವರೆಗೂ ಸುಮ್ಮನೆ ಇರುವುದಿಲ್ಲ ಅಂತ ಭಾಗ್ಯ ಪಟ್ಟು ಹಿಡಿದಿದ್ದಾಳೆ. ಈಗ ಶ್ರೇಷ್ಠಾ ತಾನು ಕದ್ದಿದ್ದ ಹಣವನ್ನ ಭಾಗ್ಯಾಗೆ ವಾಪಸ್ಸು ಕೊಡ್ತಾಳಾ ಅಥವಾ ಅದಕ್ಕೂ ಏನಾದರೂ ಕಾರಣವನ್ನು ಹೇಳ್ತಾಳಾ ನೋಡಬೇಕಾಗಿದೆ.

ಇಷ್ಟು ದಿನ ಅಳ್ತಿದ್ದ ಭಾಗ್ಯ ಮುಖದಲ್ಲಿ ಕೆಲಸ ಸಿಕ್ಕ ಮೇಲೆ ನಗು ನೋಡಬಹುದು, ಭಾಗ್ಯ ಇನ್ನಾದ್ರು ಬದಲಾಗಬಹುದು ಅಂತ ಕಾಯ್ತಿದ್ದ ಪ್ರೇಕ್ಷಕರ ನಿರೀಕ್ಷೆಗಳನ್ನು ನಿರ್ದೇಶಕರು ಪೂರ್ತಿ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಭಾಗ್ಯಲಕ್ಷ್ಮೀ ಸೀರಿಯಲ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆದರೆ ಈಗ ಅದು ಬದಲಾಗೋ ಹಾಗೆ ಕಾಣ್ತಿದೆ.

Leave a Comment