Pooja Hegde: ಬೇಡಿಕೆ ಇಲ್ಲ ಅಂತಿದ್ದ ಪೂಜಾ ಹೆಗ್ಡೆ ಹೊಸ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ? ಶಾಕ್ ನಲ್ಲಿ ನೆಟ್ಟಿಗರ

Written by Soma Shekar

Published on:

---Join Our Channel---

Pooja Hegde: ಕರಾವಳಿ ಸುಂದರಿ ನಟಿ ಪೂಜಾ ಹೆಗ್ಡೆ (Pooja Hegde) ಪ್ರಸ್ತುತ ದಿನಗಳಲ್ಲಿ ತೆಲುಗು ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೆಲವೊಂದು ವರದಿಗಳ ಪ್ರಕಾರ ಸತತ ಸೋಲುಗಳ ಕಾರಣದಿಂದ ತೆಲುಗಿನಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರು ಪೂಜಾ ಹೆಗ್ಡೆ ಕಡೆಗೆ ಅಷ್ಟಾಗಿ ಗಮನ ನೀಡುತ್ತಿಲ್ಲ ಎನ್ನುವ ಸುದ್ದಿ ಒಂದು ಕಡೆಯಾದರೆ, ಮತ್ತೊಂದು ಕಡೆ ನಟಿ ಬಾಲಿವುಡ್ ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿರೋದ್ರಿಂದ ತೆಲುಗು ಸಿನಿಮಾಗಳನ್ನ ಮಾಡುತ್ತಿಲ್ಲವೆಂದು ಸಹಾ ಹೇಳಲಾಗುತ್ತಿದೆ.

ಆದರೆ ಸಿನಿಮಾಗಳು ಸೋತರೂ ಕೂಡಾ ಪೂಜಾ ಹೆಗ್ಡೆಗೆ ಇರೊ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ ಅನ್ನೋ ಹಾಗೆ, ನಟಿಯ ಡಿಮ್ಯಾಂಡ್ ಹೇಗಿದೆ ಅನ್ನೋದಕ್ಕೆ ಈಗ ತಮಿಳಿನಲ್ಲಿ ಅಲ್ಲಿನ ಸ್ಟಾರ್ ನಟ ಸೂರ್ಯ (Suriya) ಜೊತೆಗೆ ನಟಿಸೋದಕ್ಕೆ ನಟಿ ಪಡೆಯುತ್ತಿರೋ ಸಂಭಾವನೆ ಸಾಕ್ಷಿಯಾಗಿದೆ. ಹೌದು, ಹೊಸ ಸಿನಿಮಾದಲ್ಲಿ ನಟಿಸುವುದಕ್ಕೆ ಪೂಜಾ ಹೆಗಡೆ ತಮ್ಮ ಸಂಭಾವನೆಯ ಮೊತ್ತವನ್ನು ಹೆಚ್ಚಿಸಿಕೊಂಡಿದ್ದಾರೆ.‌

ಬಾಲಿವುಡ್ ನಲ್ಲಿ (Bollywood) ಪೂಜಾ ಹೆಗ್ಡೆ ಶಾಹಿದ್ ಕಪೂರ್ ಜೊತೆ ದೇವಾ ಮತ್ತು ಅಹಾನ್ ಶೆಟ್ಟಿ ಜೊತೆ ಸಂಖಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಎರಡು ಸಿನಿಮಾಗಳ ಬೆನ್ನಲ್ಲೇ ತಮಿಳಿನಲ್ಲಿ ನಟ ಸೂರ್ಯ ಜೊತೆಗೆ ಹೊಸ ಸಿನಿಮಾಕ್ಕೆ ನಾಯಕಿಯಾಗುವ ಅವಕಾಶ ಪಡೆದಿದ್ದಾರೆ ಪೂಜಾ. ಇಲ್ಲಿಯವರೆಗೆ ನಟಿ ಸಿನಿಮಾವೊಂದಕ್ಕೆ 3.5 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಸೂರ್ಯ ಜೊತೆ ನಟಿಸಲು ನಟಿ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದ ಪೂಜಾಗೆ ಟಾಲಿವುಡ್ ನಲ್ಲಿ ಅದೃಷ್ಟ ಕೈ ಕೊಟ್ಟ ಹಾಗೆ ಕಾಣುತ್ತಿದೆ. ಪ್ರಭಾಸ್ ಜೊತೆಗಿನ ರಾಧೇಶ್ಯಾಮ್, ರಾಮ್ ಚರಣ್ ಜೊತೆ ಆಚಾರ್ಯ ಮಾತ್ರವಲ್ಲದೇ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ನಟಿಸಿದ ಬೀಸ್ಟ್ ಸಿನಿಮಾ ಸೋಲನ್ನು ಕಂಡು, ಈ ಸೋಲುಗಳ ನಂತರ ನಟಿ ಬಾಲಿವುಡ್ ಕಡೆಗೆ ಹೆಚ್ಚು ಗಮನ ನೀಡಿದ್ದು, ಅಲ್ಲಿ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿವೆ.

Leave a Comment