Prachi Nigam: ರಾಜ್ಯಕ್ಕೆ ಟಾಪರ್ ಆದ ಹುಡುಗಿಗೆ ಇಂತ ಟ್ರೋಲ್ ಯಾಕೆ? ಕೀಳು ಮಟ್ಟದ ಜನರಿಗೆ ನೆಟ್ಟಿಗರ ಕ್ಲಾಸ್

Written by Soma Shekar

Published on:

---Join Our Channel---

Prachi Nigam: ಉತ್ತರ ಪ್ರದೇಶದ 10 ನೇ ತರಗತಿ ಬೋರ್ಡ್‌ ಪರೀಕ್ಷೆಯ ಫಲಿತಾಂಶ (10th Board Result UP) ಪ್ರಕಟವಾದ ನಂತರ ಈ ವಿಚಾರ ಇಡೀ ದೇಶದಲ್ಲಿ ಸುದ್ದಿಯಾಯಿತು. ಈ ಪರೀಕ್ಷೆಯಲ್ಲಿ ಸೀತಾಪುರದ ವಿದ್ಯಾರ್ಥಿನಿ ಪ್ರಾಚಿ ನಿಗಮ್‌ (Prachi Nigam) ಅವರು ಶೇ.98.5ರಷ್ಟು ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಲಕಿಯ ಈ ಸಾಧನೆಗೆ ದೇಶವ್ಯಾಪಿಯಾಗಿ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದವು. ಸೋಶಿಯಲ್ ಮೀಡಿಯಾಗಳಲ್ಲಿ ಬಾಲಕಿಯ ಸಾಧನೆಯನ್ನು ಮೆಚ್ಚಿ ಅನೇಕರು ಕಾಮೆಂಟ್ ಗಳನ್ನು ಸಹಾ ಮಾಡಿದ್ದರು.

ಆದರೆ ಇದೇ ವೇಳೆ ಸಮಾಜದಲ್ಲಿ ಇರುವಂತಹ ಮತ್ತೊಂದು ವರ್ಗ ಆ ಹುಡುಗಿನ ಸಾಧನೆಯನ್ನು ನೋಡುವ ಬದಲಾಗಿ ಆಕೆಯ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ (Troll) ಮಾಡಿದ್ದಾರೆ. ಕೆಲವರು ಪ್ರಾಚಿ ಅವರ ಫೋಟೋಗಳನ್ನು ಶೇರ್ ಮಾಡಿಕೊಂಡು ವ್ಯಂಗ್ಯ ಮಾಡಿದ್ದಾರೆ.‌ ಆ ವಿದ್ಯಾರ್ಥಿನಿಯು ರಾಜ್ಯಕ್ಕೆ ಟಾಪರ್ ಆಗೋದಿಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾಳೆ ಅನ್ನೋದನ್ನ ನೋಡದೇ ಆಕೆಯ ನೋಟದ ಬಗ್ಗೆ ಹೀಯಾಳಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ (Social Media) ವಿದ್ಯಾರ್ಥಿನಿಯ ಕುರಿತಾಗಿ ಟ್ರೋಲ್ ಮಾಡಿದವರನ್ನು ನೋಡಿದಾಗ ನಮ್ಮ ಸಮಾಜದಲ್ಲಿ ಇಂತಹ ಕೀಳು ಮನಸ್ಸಿನವರು ಇದ್ದಾರಾ? ಅನ್ನೋ ಒಂದು ಪ್ರಶ್ನೆ ಮೂಡುತ್ತದೆ. ಕೆಲವು ಮಹಿಳೆಯರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಾಚಿ ಫೋಟೋವನ್ನು ಹಾಕಿಕೊಂಡು ವ್ಯಂಗ್ಯ ಮಾಡಿರುವುದು ತೀರಾ ಅಸಹನೀಯ ಹಾಗೂ ಅವರ ವಿಷದ ಮನಸ್ತತ್ವಕ್ಕೆ ಸಾಕ್ಷಿಯಾಗಿದೆ.

ಆದರೆ ಪ್ರಾಚಿ ತಮ್ಮ ಫಲಿತಾಂಶದಿಂದ ಖುಷಿಯಾಗಿದ್ದಾರೆ, ತಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಾಗುತ್ತಿರುವ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಕುಟುಂಬದವರ ಜೊತೆಗೆ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಪ್ರಾಚಿ ಚಿಕ್ಕ ವಯಸ್ಸಿನಿಂದಲೇ ತಮ್ಮ ಬಗ್ಗೆ ನಕಾರಾತ್ಮಕತೆಯನ್ನು ತೋರುವವರ ಬಗ್ಗೆ ನಿರ್ಲಕ್ಷ್ಯ ವನ್ನು ವಹಿಸುತ್ತಾ ಸಮಚಿತ್ತದಿಂದ ಇರುವುದನ್ನು ಕಲಿತುಕೊಂಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಾಚಿ ಅವರಿಗೆ ದೊಡ್ಡ ಮಟ್ಟದಲ್ಲಿ ಬೆಂಬಲವು ಹರಿದು ಬರ್ತಿದೆ. ಅಲ್ಲದೇ ಪ್ರಾಚಿ ಅವರ ಲುಕ್ ಬಗ್ಗೆ ಮಾತನಾಡಿದವರಿಗೆ ನೆಟ್ಟಿಗರೇ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಲ್ಲಿ ಅನೇಕರಿಗೆ ಪ್ರತಿಭೆಗಿಂತ ಅಂದವೇ ಮುಖ್ಯವಾಗಿದೆ, ಇದು ಇಂದಿನ ಸೋಶಿಯಲ್ ಮೀಡಿಯಾಗಳಲ್ಲಿ ಮೂರ್ಖರ ಮನಸ್ಥಿತಿಯಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

Leave a Comment