Amruthadhaare: ಬ್ಲಾಕ್ ಮೇಲ್ ಮಾಡ್ತಿದ್ದ ದೀಪಾನ್ಷು ಕೆನ್ನೆಗೆ ರಪ ರಪ ಬಾರಿಸಿದ ಭೂಮಿಕಾ, ಜೀವನ್; ಮಹಿಮಾ ನಿಟ್ಟುಸಿರು

Written by Soma Shekar

Published on:

---Join Our Channel---

Amruthadhaare serial : ಝೀ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ಅಮೃತಧಾರೆಯ (Amrurhadhaare serial) ಹೊಸ ಪ್ರೊಮೋ ಹೊರಗೆ ಬಂದಾಗಿದೆ. ಪ್ರೊಮೋ ನೋಡಿ ಪ್ರೇಕ್ಷಕರಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಮತ್ತು ಕಾಮೆಂಟ್ ಗಳನ್ನು ಮಾಡಿ ತಮ್ಮ ಮೆಚ್ಚುಗೆಗಳನ್ನು ನೀಡ್ತಾ ಇದ್ದಾರೆ. ತಪ್ಪು ಮಾಡಲು ಹೊರಟಿದ್ದವನಿಗೆ ಶಿಕ್ಷೆ ಆಗಿದ್ದು ನೋಡಿ ಪ್ರೇಕ್ಷಕರು ಖುಷಿಯಾಗಿರೋದು ಮಾತ್ರವೇ ಅಲ್ಲದೇ ಕಥೆಯಲ್ಲಿ ಈ ಪ್ರಸಂಗವನ್ನು ಜಾಸ್ತಿ ಎಳೆಯದೇ ಬೇಗ ಇದಕ್ಕೊಂದು ಉತ್ತರ ಕೊಟ್ಟಿದ್ದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಿಮಾ (Mahima) ತನ್ನ ಮಗುವನ್ನು ತೆಗೆಸಿ ಅದನ್ನು ಅಪಘಾತ ಅಂತ ಬಿಂಬಿಸಿದ್ದ ವಿಚಾರ ಗೊತ್ತಿದ್ದ ದೀಪಾನ್ಷು ಮಹಿಮಾನ ಬ್ಲಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ್ದ. ಅವಳು ಅವನ ಲವ್ ನ ಸ್ವೀಕಾರ ಮಾಡಿ, ಅವನ ಜೊತೆ ಸಂಬಂಧ ಇಟ್ಕೋಬೇಕಂತ ಬಲವಂತ ಮಾಡಿ, ಮಹಿಮಾ ಹಾಗೆ ಮಾಡ್ಲಿಲ್ಲ ಅಂದ್ರೆ ವಿಷಯಾನ ಎಲ್ಲರಿಗೂ ಹೇಳೋದಾಗಿ ಭಯ ಹುಟ್ಟಿಸಿದ್ದ.

ದೀಪಾನ್ಷು ಕೊಡೋ ಟಾರ್ಚರ್ ತಡೆಯೋಕಾಗದೇ ಮಹಿಮಾ ಎಲ್ಲಾ ವಿಚಾರವನ್ನ ಅತ್ತಿಗೆ ಭೂಮಿಕಾ ಹತ್ರ ಹೇಳ್ಕೊಂಡು ಏನಾದ್ರು ಒಂದು ಪರಿಹಾರ ಮಾಡಿ ಅಂತ ಮನವಿ ಮಾಡಿಕೊಂಡಿದ್ಲು. ಮಹಿಮಾ ಹೇಳಿದ್ದೆಲ್ಲಾ ಕೇಳಿದ ಮೇಲೆ ಭೂಮಿಕಾ ದೀಪಾನ್ಷುಗೆ ಸರಿಯಾಗಿ ಪಾಠ ಕಲಿಸೋಕೆ ನಿರ್ಧಾರ ಮಾಡಿದ್ದು, ಭೂಮಿಕಾ ಹೇಳಿದ ಹಾಗೆ ಮಹಿಮಾ ದೀಪಾನ್ಷುಗೆ ಕಾಲ್ ಮಾಡಿ ಸ್ಟುಡಿಯೋಗೆ ಕರೆಸಿದ್ದಾಳೆ.

ಮಹಿಮಾ ಕಾಲ್ ಮಾಡಿದ್ದು ನೋಡಿ ಖುಷಿಯಾದ ದೀಪಾನ್ಷು, ಓ, ನೀನಾಗೇ ಕಾಲ್‌ ಮಾಡಿದ್ದೀಯಾ, ವಾಟ್‌ ಏ ಸರ್‌ಪ್ರೈಸ್‌ ಅಂತ ಹೇಳಿ ಒಂದು ಹೂವಿನ ಬೊಕೆ ಹಿಡಿದು ಸ್ಟುಡಿಯೋಗೆ ಬಂದು ಐ ಲವ್‌ ಯು ಮಹಿ ಅಂತ ಪ್ರಪೋಸ್ ಮಾಡಿದ್ದಾನೆ. ಆಗ ಮಹಿಮಾ ಅವನನ್ನು ಬೈದಿದ್ದಾಳೆ. ದೀಪಾನ್ಷು ಆಗ ಹಾಗಾದ್ರೆ ಇಷ್ಟಪಟ್ಟು ಕರೆಸಿಕೊಂಡಿಲ್ವಾ ಅಂತ ಕೇಳ್ತಾನೆ.

ಇದೇ ವೇಳೆ ನಿನ್ನಂತವನನ್ನ ಯಾರೋ ಇಷ್ಟ ಪಡ್ತಾರೆ ಅಂತ ಅಲ್ಲಿಗೆ ಬರೋ ಭೂಮಿ ದೀಪಾನ್ಷು ಕೆನ್ನೆಗೆ ಬಾರಿಸಿದ್ದಾಳೆ. ಕೋಪದಿಂದ ದೀಪಾನ್ಷು ನಿಮ್ಮಿಬ್ಬರ ವಿಷಯವನ್ನ ಗೌತಮ್ ಗೆ ಮತ್ತೆ ಮಹಿಮಾ ಗಂಡ ಜೀವನ್ ಗೆ ಹೇಳ್ತೀನಿ ಅಂದಾಗ ಭೂಮಿಕಾ ಕೂಡಾ ತಾಕತ್ತಿದ್ರೆ ಕರೆಸು ಅಂತ ಹೇಳಿದ್ದು, ಜೀವನ್ ಗೆ ಕಾಲ್ ಮಾಡಿ ಕರೆಸಿದ್ದಾನೆ.

ಸ್ಟುಡಿಯೋಗೆ ಬಂದ ಜೀವನ್ ಬಂದ ದೀಪಾನ್ಷು ಕೆನ್ನೆಗೆ ರಪ್ ಅಂತ ಬಾರಿಸಿದ್ದಾನೆ. ಮಹಿಮಾಳ ಪರಿಸ್ಥಿತಿಯನ್ನ ದುರುಪಯೋಗ ಮಾಡಿಕೊಳ್ಳಲು ಹೋದವನಿಗೆ ತಕ್ಕ ಶಿಕ್ಷೆಯಾಗಿದೆ. ಈ ಪ್ರೊಮೋ ನೋಡಿದ ನೆಟ್ಟಿಗರು, ಒಂದು ಸುಳ್ಳನ್ನು ಮುಚ್ಚಿಡೋಕೆ ಇನ್ನಷ್ಟು ಸುಳ್ಳು ಹೇಳಬೇಕಾಗುತ್ತೆ, ಅದರ ಬದಲಿಗೆ ನಿಜ ಏನಂತ ಹೇಳಿದರೆ ಸಮಸ್ಯೆಗೆ ಉತ್ತರ ಸಿಗುತ್ತೆ ಅನ್ನೋದಕ್ಕೆ ಈ ದೃಶ್ಯ ಸಾಕ್ಷಿ ಅಂತ ಮೆಚ್ಚುಗೆ ನೀಡಿದ್ದಾರೆ.

Leave a Comment