Bhagya Lakshmi: ಭಾಗ್ಯಾಳ ಕಷ್ಟ ಕರಗುವ ಸಮಯ, ಬೈದವರಿಂದಲೇ ಮೆಚ್ಚುಗೆ, ಈಗ್ಲಾದ್ರೂ ಬದಲಾಗುತ್ತಾ ಪ್ರೇಕ್ಷಕರ ಮನಸ್ಸು

Written by Soma Shekar

Updated on:

---Join Our Channel---

Bhagya Lakshmi: ಭಾಗ್ಯಲಕ್ಷ್ಮೀ (Bhagya Lakshmi) ಸೀರಿಯಲ್ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾಗಿ ಬರ್ತಿದೆ ಅನ್ನೋದು ಗೊತ್ತಿದೆ‌. ಬಹುತೇಕ ಕಿರುತೆರೆಯ ಸೀರಿಯಲ್ ಗಳಿಗೆ ಪ್ರೇಕ್ಷಕರ ಕಡೆಯಿಂದ ಅಸಮಾಧಾನದ ಮಾತು ಕೇಳಿ ಬರುತ್ತಿದೆ. ಆದರೆ ಇದೇ ವೇಳೆ ಈ ಸೀರಿಯಲ್ ಗಳನ್ನು ಮೆಚ್ಚಿ ನೋಡುವ ಪ್ರೇಕ್ಷಕರ ದೊಡ್ಡ ಬಳಗವೇ ಇದೆ ಎನ್ನುವುದು ಸಹಾ ವಾಸ್ತವ. ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್ ವಿಚಾರವಾಗಿ ಪ್ರೇಕ್ಷಕರು ಸ್ವಲ್ಪ ಹೆಚ್ಚಾಗಿಯೇ ಅಸಮಾಧಾನಗೊಂಡಿದ್ದರು ಅನ್ನೋದು ಸುಳ್ಳಲ್ಲ.‌

ಆದರೆ ಈಗ ಸೀರಿಯಲ್ ನ ಹೊಸ ತಿರುವುಗಳು ಪ್ರೇಕ್ಷಕರಿಗೆ ಖುಷಿಯನ್ನು ನೀಡಿದೆ. ಯಾವ ಫೈವ್ ಸ್ಟಾರ್ ಹೊಟೇಲ್ ನಿಂದ ಭಾಗ್ಯಳನ್ನು (Bhagya) ಬೈದು, ಕೆಲಸದಿಂದ ತೆಗೆದು ಹಾಕಲಾಗಿತ್ತೋ ಈಗ ಅದೇ ಹೊಟೇಲ್ ನಲ್ಲಿ ಬಹಳ ಗೌರವದಿಂದ ಶೆಫ್ (Shef) ಕೆಲಸವನ್ನು ನೀಡಿದ್ದಾರೆ. ಅಲ್ಲದೇ ಭಾಗ್ಯಾಗೇ ಅರ್ಥ ಆಗೋತರ ಕನ್ನಡದಲ್ಲೇ ಮಾತನಾಡಬೇಕು ಅಂತ ಕೂಡಾ ಮ್ಯಾನೇಜರ್ ಎಲ್ಲರಿಗೂ ನಿರ್ದೇಶನ ಕೊಟ್ಟಿದ್ದು ಇದೆಲ್ಲಾ ಕೇಳಿ ಭಾಗ್ಯ ಖುಷಿಯಾಗಿದ್ದಾಳೆ.‌

ಭಾಗ್ಯ ಮಾಡಿದಂತಹ ಒತ್ತು ಶ್ಯಾವಿಗೆ ಮತ್ತು ಮಾವಿನ ಹಣ್ಣಿನ ರಸಾಯನ ಸವಿದ ಪತ್ರಕರ್ತ ಭಾಗ್ಯಳ ಕೌಶಲ್ಯವನ್ನ ಹಾಡಿ ಹೊಗಳಿದ್ದಾರೆ. ಇದರಿಂದ ಹೊಟೇಲ್ ಗೆ ಎದುರಾಗಿದ್ದ ಸಮಸ್ಯೆ ದೂರಾಗಿದೆ. ಹೊಟೇಲ್ ಸಿಬ್ಬಂದಿ ರಸ್ತೆಯಲ್ಲಿ ಓಡ್ತಾ ಎದ್ದು, ಬಿದ್ದು ಭಾಗ್ಯಾನ ಹುಡುಕಿ ವಾಪಸ್ ಕರ್ಕೊಂಡು ಬಂದಿದ್ದಾರೆ. ಭಾಗ್ಯಾನ ಬೈತಾ ಇದ್ದ ಸೂಪರ್ ವೈಸರ್ ಭಾಗ್ಯಾಗಾಗಿ ರಸ್ತೆಯಲ್ಲಿ ಓಡೋ ಹಾಗಾಯ್ತು.

ಈಗ ಭಾಗ್ಯಾಗೆ ಅವಳ ಅರ್ಹತೆಗೆ ತಕ್ಕ ಉದ್ಯೋಗ ಸಿಕ್ಕಿದೆ. ಇನ್ನಾದ್ರು ಭಾಗ್ಯ ಬದುಕಲ್ಲಿ ಬೆಳಕು ಅನ್ನೋದು ಮೂಡಬಹುದು. ಇನ್ಮುಂದೆ ಆದ್ರು ಭಾಗ್ಯ ಅಳೋದನ್ನ ನಿಲ್ಲಿಸಿ ಗಂಡನಿಗೆ ಬುದ್ಧಿ ಕಲಿಸೋಂತ ಕೆಲಸ ಕೂಡಾ ನಡೀಲಿ ಅನ್ನೋದು ಪ್ರೇಕ್ಷಕರ ನಿರೀಕ್ಷೆ ಆಗಿದೆ‌. ಈ ನಿರೀಕ್ಷೆಗಳು ನಿಜವಾಗುತ್ತಾ ಅಥವಾ ಭಾಗ್ಯಾ ಮುಂದೆ ಮತ್ತೊಂದು ಹೊಸ ಸಮಸ್ಯೆಯನ್ನ ತಂದು ನಿಲ್ಲಿಸ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment