Bhagyalakshmi: ಅತ್ತೆಗಾಗಿ ಓಡೋಡಿ ಬಂದ ಭಾಗ್ಯ, ತಾಂಡವ್ ಪ್ಲಾನ್ ಮತ್ತೆ ಫ್ಲಾಪ್ ಆಗುತ್ತಾ ?

Written by Soma Shekar

Published on:

---Join Our Channel---

BhagyaLakshmi: ಭಾಗ್ಯಲಕ್ಷ್ಮೀ (Bhagyalakshmi) ಸೀರಿಯಲ್ ನಲ್ಲಿ ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಚಕರ ಮನಸ್ಸಿಗೆ ಮುದವನ್ನು ನೀಡುತ್ತಿದೆ. ಭಾಗ್ಯ ಪ್ರತಿ ಸವಾಲನ್ನು ಧೈರ್ಯವಾಗಿ ಸ್ವೀಕರಿಸಿ, ವಹಿಸಿದ ಶ್ರಮದಿಂದಾಗಿ ಒಳ್ಳೆ ಪ್ರತಿಫಲ ಸಿಕ್ಕಾಗಿದೆ. ಭಾಗ್ಯ ಈಗ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಶೆಫ್ ಆಗಿದ್ದಾಳೆ. ಭಾಗ್ಯಾಳ ಸಾಧನೆಯ ಕಥೆ ಸ್ಪೂರ್ತಿ ಅಂತ ಟಿವಿಗಳಲ್ಲಿ ಸುದ್ದಿಯಾಗಿದೆ. ಆದರೆ ಭಾಗ್ಯ ಮಾತ್ರ ತನಗೆ ಕೆಲಸ ಸಿಕ್ಕಿರುವ ವಿಚಾರವನ್ನ ಮನೆಯಲ್ಲಿ ಹೇಳಿಕೊಂಡಿರಲಿಲ್ಲ.‌

ಭಾಗ್ಯಾ ಮನೆಯಲ್ಲಿ ಯಾರಿಗೂ ಹೇಳದೆ ಇದ್ದ ವಿಷಯ ಈಗ ಟಿವಿ ನ್ಯೂಸ್ ಮೂಲಕ ಎಲ್ಲಾ ಕಡೆ ಸುದ್ದಿಯಾಗಿದೆ. ಭಾಗ್ಯಾಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗ್ತಿದ್ದು, ಅದಕ್ಕೆ ಹಿರಿಯ ನಟ ಶ್ರೀನಾಥ್ (Srinath) ಅವರು ಅತಿಥಿಯಾಗಿ ಆಗಮಿಸಿದ್ದಾರೆ. ಎಲ್ಲಾ ಸುದ್ದಿಯನ್ನ ಟಿವಿ ಯಲ್ಲಿ ನೋಡಿದ ಕುಸುಮಾ ಸೊಸೆಯನ್ನ ಹುಡ್ಕೊಂಡು ನೇರವಾಗಿ ಫೈವ್ ಸ್ಟಾರ್ ಹೊಟೇಲ್ ಗೆ ಬಂದಿದ್ದಾರೆ. ನಾನು ಭಾಗ್ಯಾಳ ಅತ್ತೆ ಅಂತ ಹೇಳಿದ್ದಾರೆ. ಅದಕ್ಕೆ ಅಲ್ಲಿದ್ದ ಸೀನಿಯರ್ ಸಿಬ್ಬಂದಿ ನಾನು ಭಾಗ್ಯ ಅಣ್ಣ ಅಂತ ವ್ಯಂಗ್ಯ ಮಾಡಿದ್ದಾರೆ.‌

ಅಲ್ಲದೇ ಮಹಿಳಾ ಸಿಬ್ಬಂದಿಯನ್ನ ಕರೆಸಿ ಕುಸುಮಾನ ಅಲ್ಲಿಂದ ಹೊರಗೆ ಕಳಿಸಿ ಅಂತ ಹೇಳಿದ್ದು, ಅಲ್ಲಿ ಕುಸುಮಾ ತಾನು ಭಾಗ್ಯ ಅತ್ತೆ ಅಂತ ಹೇಳಿದ್ರು ಯಾರೂ ಕೂಡಾ ಅದನ್ನ ನಂಬೋದಕ್ಕೆ ಸಿದ್ಧವಾಗಿಲ್ಲ. ಮಹಿಳಾ ಸಿಬ್ಬಂದಿ ಕುಸುಮಾನ ಎಳ್ಕೊಂಡು ಹೋಗುವಾಗಲೇ ಅತ್ತೆ ದನಿ ಕೇಳಿಸಿದ್ದು, ತನಗೆ ಕೊಡ್ತಿದ್ದ ಪ್ರಶಸ್ತಿಯನ್ನು ಸ್ವೀಕರಿಸಿದೇ ವೇದಿಕೆಯಿಂದ ಕೆಳಗೆ ಇಳಿದು ಓಡೋಡಿ ಬಂದಿದ್ದಾಳೆ.

ಭಾಗ್ಯ ತನ್ನ ಅತ್ತೆಯನ್ನ ವೇದಿಕೆಗೆ ಕರ್ಕೊಂಡು ಬಂದು ತನ್ನ ಸಾಧನೆಗೆ ಕಾರಣ ತನ್ನ ಅತ್ತೆ ಅಂತ ಹೇಳಿದ್ದಾಳೆ. ತಾನು ಈಗ ಏನೇ ಆಗಿದ್ರು ಅದಕ್ಕೆ ಅತ್ತೆ ಕಾರಣ ಅಂತ ಹೇಳಿ ತನಗೆ ಸಲ್ಲಬೇಕಾದ ಗೌರವ, ಸನ್ಮಾನವನ್ನು ಅತ್ತೆಗೆ ಸಿಗುವಂತೆ ಮಾಡಿದ್ದಾಳೆ. ಕುಸುಮಾ ಸಹಾ ತನ್ನ ಸೊಸೆಯ ಮಾತು ಕೇಳಿ ಹಿರಿ ಹಿರಿ ಹಿಗ್ಗಿದ್ದಾಳೆ. ತಾಂಡವ್ ಭಾಗ್ಯ ಕೆಲಸದ ಬಗ್ಗೆ ಹೇಳದೇ ಇರೋದ್ರಿಂದ ತನ್ನ ಅಮ್ಮ ಭಾಗ್ಯ ಮೇಲೆ ಸಿಟ್ಟಾಗ್ತಾಳೆ ಅನ್ನೋ ಆಸೆ ಇಟ್ಕೊಂಡಿದ್ದ. ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment