Amruthadhaare: ಭೂಮಿಕಾ ಪ್ರಶ್ನೆಗೆ ತಡಬಡಿಸಿದ ಶಕುಂತಲಾ ದೇವಿ, ಮತ್ತೆ ಯಾವ ಕುತುಂತ್ರಕ್ಕೆ ಫ್ಲಾನ್ ಮಾಡ್ತಾಳೆ ಅಂದ್ರು ಪ್ರೇಕ್ಷಕರು

Written by Soma Shekar

Published on:

---Join Our Channel---

Amruthadhaare: ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆಯ ನಾಗಾಲೋಟವನ್ನು ಮಾಡುತ್ತಿರುವ ಸೀರಿಯಲ್ ಗಳಲ್ಲಿ ಅಮೃತಧಾರೆ (Amruthadhaare) ಸಹಾ ಸೇರಿದೆ. ಗೌತಮ್ ದೀವಾನ್ ಮತ್ತು ಭೂಮಿಕಾ ನಡುವಿನ ಅಪರೂಪದ ಪ್ರೇಮ ಕಥೆಯಾಗಿದೆ ಅಮೃತಧಾರೆ. ಗೌತಮ್ ಮತ್ತು ಭೂಮಿಕಾ ಸಂಬಂಧಕ್ಕೆ ಅಡ್ಡಗಾಲಾಗಿ, ಸಿಹಿ ಮಾತುಗಳಿಂದಲೇ ಗೌತಮ್ ಮನಸ್ಸಿನಲ್ಲಿ ಭಯ ಹುಟ್ಟಿಸಿ, ಆತಂಕ ಮೂಡಿಸಿ ಹೆಂಡತಿಯಿಂದ ದೂರ ಇಡಲು ಶಕುಂತಲಾ ದೇವಿ ಮಾಡುವ ಕುತಂತ್ರಗಳು ಸಹಾ ಇಲ್ಲಿ ಕಡಿಮೆ ಏನಿಲ್ಲ ಅಂತಾನೇ ಹೇಳಬಹುದು.

ಗೌತಮ್ (Gowtham) ಭೂಮಿಕಾಗೆ ಹತ್ತಿರ ಆಗ್ತಿದ್ದಾನೆ, ಭೂಮಿಕಾಗೆ ಹೆಚ್ಚು ಒತ್ತು ನೀಡ್ತಿದ್ದಾನೇ ಹೀಗೆ ಆದ್ರೆ ತನ್ನ ಎಲ್ಲಾ ಅಧಿಕಾರ ಎಲ್ಲಿ ಭೂಮಿಕಾ ಕೈಗೆ ಹೋಗಿ ಬಿಡುತ್ತೋ ಅನ್ನೋ ಆತಂಕದಿಂದ ಶಕುಂತಲಾ ದೇವಿ ಒಂದು ಕುತಂತ್ರ ಮಾಡಿ, ಗುರುಗಳ ಬಳಿ ಜಾತಕದ ವಿಚಾರವಾಗಿ ಸುಳ್ಳು ಹೇಳಿಸಿ, ಇಬ್ಬರ ಜಾತಕ ಸರಿ ಇಲ್ಲವೆಂದು, ಹತ್ತಿರವಾದ್ರೆ ಪ್ರಾಣವೇ ಹೋಗಬಹುದು ಎಂದು ಹೇಳಿಸಿದ್ದಳು.

ಗೌತಮ್ ಜಾತಕ ವಿಚಾರ ತಿಳಿದು ಚಿಂತೆಗೆ ಈಡಾಗಿ, ವ್ರತ ಮಾಡಿ ಅನಾರೋಗ್ಯಕ್ಕೆ ಗುರಿಯಾದ. ಅನಂತರ ಮಲ್ಲಿಯಿಂದ ಇದೆಲ್ಲಾ ಶಕುಂತಲಾ ದೇವಿ ಮಾಡಿರೋ ಕುತಂತ್ರ, ಕುಟಿಲ ಆಟ ಅಂತ ತಿಳ್ಕೊಂಡ ಭೂಮಿಕಾ, ಯುಗಾದಿ ದಿನ ತಮ್ಮ ಗುರುಗಳನ್ನು ಕರೆಸಿ ಜಾತಕ ತೋರಿಸಿದ್ದು, ಗುರುಗಳು ಜಾತಕದಲ್ಲಿ ಯಾವುದೇ ದೋ಼ಷವಿಲ್ಲ ಅಂತ ಹೇಳಿದ್ದಾರೆ.‌ ಗೌತಮ್ ಮನಸ್ಸಿಗೆ ಸಮಾಧಾನ ಸಿಕ್ಕಿದೆ ಆದರೆ ಆ ಮಾತುಗಳಿಂದ ಶಕುಂತಲಾ ದೇವಿ ಚಿಂತೆಗೀಡಾಗಿದ್ದಾಳೆ.

ಗುರುಗಳು ಬಂದು ಹೋದ ಮೇಲೆ ಭೂಮಿಕಾ (Bhumika) ಶಕುಂತಲಾದೇವಿ ಹತ್ರ ಬಂದು ಹೇಗಿತ್ತು ಸರ್ಪ್ರೈಸ್ ಶಾಕಿಂಗ್ ಆಗಿತ್ತಾ? ಅಂತ ಕೇಳಿದ್ದಾಳೆ. ಆಗ ತಡಬಡಿಸಿದ ಶಕುಂತಲಾ ದೇವಿ ಒಳ್ಳೆ ಕೆಲಸ ಮಾಡಿದ್ಯಾ ಭೂಮಿಕಾ, ಹಳೇ ಕಹಿಗಳೆಲ್ಲಾ ಮರೆತೇ ಹೋಯ್ತು ನೋಡು ಅಂದಾಗ, ಭೂಮಿಕಾ ಒಳ್ಳೆ ಕೆಲಸ ಮಾಡ್ದೆ ಅಂತ ಹೇಗೆ ಹೇಳ್ತೀರಾ ಅತ್ತೆ ಅಂತ ಶುಕುಂತಲಾ ದೇವಿಗೆ ದೊಡ್ಡ ಶಾಕ್ ನೀಡಿದ್ದಾಳೆ.

ನಾನು ಗೌತಮ್ ಅವ್ರು ಯಾವತ್ತೂ ಒಂದಾಗಬಾರದು ಅಂತ ತಾನೇ ನೀವು ಗುರುಗಳ ಹತ್ರ ಸುಳ್ಳನ್ನ ಹೇಳಿಸಿದ್ದು ಅಂತ ಮತ್ತೊಂದು ಶಾಕ್ ಅನ್ನ ಸಹಾ ಭೂಮಿಕಾ ಕೊಟ್ಟಿದ್ದು, ಭೂಮಿಕಾ ಮಾತುಗಳಿಗೆ ಶಕುಂತಲಾ ದೇವಿ ತಬ್ಬಿಬ್ಬಾಗಿದ್ದಾಳೆ. ಭೂಮಿಕಾ ಮುಂದೆ ತನ್ನ ಅದಲಿ ಬಣ್ಣ ಬಯಲಾಯ್ತು ಅಂತ ಶಕುಂತಲಾ ದೇವಿ ಮತ್ತೇನಾದ್ರು ಯೋಜನೆ ಮಾಡ್ತಾಳಾ?? ಕಾದು ನೋಡಬೇಕಾಗಿದೆ.

Leave a Comment