Vijay Devarakonda: ಟಾಲಿವುಡ್ ನ ಯುವ ಸ್ಟಾರ್ ನಟರಲ್ಲಿ ವಿಜಯ್ ದೇವರಕೊಂಡ (Vijay Devarakonda) ಒಬ್ಬರಾಗಿದ್ದಾರೆ. ರೌಡಿ ಹೀರೋ ಅಂತಾನೇ ಫೇಮಸ್ ಆಗಿರೋ ಈ ನಟನಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳೂ ಸಹಾ ಇದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎಂಟ್ರಿಯನ್ನ ಕೊಟ್ಟು ಇಂದು ಸ್ಟಾರ್ ನಟನಾಗಿ ಬೆಳೆದಿರುವ ವಿಜಯ ದೇವರಕೊಂಡ ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ.
ಸಣ್ಣಪುಟ್ಟ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಬಂದ ಈ ನಟನಿಗೆ ಅವರ ಕೆರಿಯರ್ ನಲ್ಲಿ ಅರ್ಜುನ್ ರೆಡ್ಡಿ (Arjun Reddy) ಮತ್ತು ಗೀತ ಗೋವಿಂದಂ (Gita Govindam) ಸಿನಿಮಾಗಳು ದೊಡ್ಡ ಬ್ರೇಕ್ ನೀಡಿದವು. ಈ ಸಿನಿಮಾಗಳ ನಂತರ ನಟನ ವೃತ್ತಿ ಜೀವನ ಬದಲಾಗಿ ಹೋಯಿತು. ಅಲ್ಲಿಂದ ಕ್ಲಾಸ್ ಮತ್ತು ಮಾಸ್ ಹೀರೋ ಆಗಿ ಮಿಂಚಿದ ವಿಜಯ್ ದೇವರಕೊಂಡ ಪ್ರಸ್ತುತ ಪ್ಯಾನ್ ಇಂಡಿಯಾ ಸ್ಟಾರ್ ಗಳಲ್ಲಿ ಒಬ್ಬರಾಗಿಯೂ ಹೆಸರನ್ನು ಮಾಡುತ್ತಿದ್ದಾರೆ.
ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವಾಗಲೇ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿ ಅಭಿನಯಿಸಿರುವಂತಹ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಕಲ್ಕಿ 2898 AD (Kalki 2898AD) ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ ಒಂದು ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಲ್ಲಿ ಅಚ್ಚರಿಯನ್ನ ಮೂಡಿಸಿದ್ದಾರೆ.
ಜೂನ್ 27ರಂದು ಕಲ್ಕಿ ಸಿನಿಮಾ ತೆರೆಗೆ ಬಂದಿದ್ದು ಬಿಡುಗಡೆಯ ನಂತರ ಸಿನಿಮಾ ಅದ್ಭುತವಾದ ಯಶಸ್ಸಿನ ಜೊತೆಗೆ ಸಿನಿ ಪ್ರೇಮಿಗಳ ಅಪಾರವಾದ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ. ಬಿಡುಗಡೆಯಾದ ಎರಡಢ ದಿನಗಳಲ್ಲಿ ಸಿನಿಮಾ ವಿಶ್ವದಾದ್ಯಂತ 298.5 ಕೋಟಿ ರೂಪಾಯಿಗಳ ಗಳಿಕೆಯನ್ನ ಕಂಡು ದಾಖಲೆ ಬರೆದಿದೆ.
ಕಲ್ಕಿ ಸಿನಿಮಾದಲ್ಲಿ ಮುಖ್ಯ ಪಾತ್ರಗಳ ಜೊತೆಗೆ ಹಲವು ಸ್ಟಾರ್ ಗಳು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ನಿರ್ದೇಶಕರಾದ ಎಸ್ ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಹಾಗೂ ನಟಿ ಫರಿಯಾ ಅಬ್ದುಲ್ಲಾ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ನಟ ವಿಜಯ ದೇವರಕೊಂಡ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾಗಿರುವಂತಹ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇದನ್ನ ನೋಡಿ ಥ್ರಿಲ್ ಆಗಿದ್ದಾರೆ. ಕಲ್ಕಿ ಯಲ್ಲಿನ ಈ ಪಾತ್ರವನ್ನು ಮಾಡುವುದಕ್ಕಾಗಿ ದೇವರಕೊಂಡ ಪಡೆದುಕೊಂಡಿರುವ ಸಂಭಾವನೆಯ ಮೊತ್ತ ಈಗ ಎಲ್ಲೆಡೆ ಹಾಟ್ ಟಾಪಿಕ್ ಆಗಿ ಸದ್ದನ್ನು ಮಾಡುತ್ತಿದೆ.
ಹೌದು, ಕಲ್ಕಿ ಸಿನಿಮಾದಲ್ಲಿ ಸ್ಟಾರ್ ಗಳು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಯಾರೊಬ್ಬರೂ ಯಾವುದೇ ರೀತಿಯ ಶುಲ್ಕವನ್ನು ಪಡೆಯದೇ ನಟಿಸಿದ್ದಾರೆ ಎನ್ನಲಾಗಿದ್ದು, ಅವರಲ್ಲಿ ವಿಜಯ್ ಸಹಾ ಸೇರಿದ್ದಾರೆ. ವಿಜಯ್ ತಮ್ಮ ಪಾತ್ರಕ್ಕೆ ಸಂಭಾವನೆ ಪಡೆದುಕೊಂಡಿಲ್ಲ. ಈ ಹಿಂದೆ ಅವರು ನಾಗ್ ಅಶ್ವಿನ್ ನಿರ್ದೇಶನದ ಮಹಾನಟಿ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.