Deepika Padukone: ಬಾಲಿವುಡ್ ನ ಸ್ಟಾರ್ ಜೋಡಿ ರಣ್ವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ತಮ್ಮ ಮೊದಲ ಮಗುವಿನ ಆಗಮನದ ಸುಳಿವನ್ನು ನೀಡಿದ್ದರು. ಈ ವಿಚಾರವನ್ನು ಕೇಳಿ ಅವರ ಅಭಿಮಾನಿಗಳಂತೂ ತುಂಬಾ ಖುಷಿ ಪಟ್ಟಿದ್ದರು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಅವರಿಗೆ ಶುಭ ಹಾರೈಸಿದ್ದರು. 2024 ರ ಸೆಪ್ಟೆಂಬರ್ ನಲ್ಲಿ ಮಗುವಿನ ಆಗಮನದ ನಿರೀಕ್ಷೆ ಇದೆ ಎನ್ನುವ ಮಾತನ್ನು ಹೇಳಿದ್ದರು.
![](https://news9kannada.com/wp-content/uploads/2024/04/images-2024-04-20T102556.789-jpeg.webp)
ದೀಪಿಕಾ ಪಡುಕೋಣೆ ಗರ್ಭಿಣಿ (Pregnant) ಎನ್ನುವ ವಿಚಾರ ಅವರ ಅಭಿಮಾನಿಗಳಿಗೆ ಖುಷಿಯ ವಿಷಯವಾಗಿದೆ. ಅಲ್ಲದೇ ನಟಿ ಬೆಂಗಳೂರಿನಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಈಗ ಇವೆಲ್ಲವುಗಳ ನಡುವೆ ಮತ್ತೊಂದು ವಿಚಾರವು ಮುನ್ನೆಲೆಗೆ ಬಂದಿದೆ. ಹೌದು, ನಟಿ ದೀಪಿಕಾ ಪಡುಕೋಣೆ ಇದುವರೆಗೂ ಎಲ್ಲೂ ಕೂಡಾ ತಾನೂ ಗರ್ಭಿಣಿ ಎಂದು ಅಧಿಕೃತವಾಗಿ ಹೇಳಿಕೊಂಡಿಲ್ಲ.
![](https://news9kannada.com/wp-content/uploads/2024/04/images-2024-04-20T102613.956-jpeg.webp)
ಅಲ್ಲದೇ ನಟಿ ಬೇಬಿ ಬಂಪ್ ನ ಫೋಟೋ ಶೂಟ್ ಮಾಡಿಸಿಲ್ಲ ಹಾಗೂ ಅಂತಹ ಯಾವುದೇ ಫೋಟೋ ವನ್ನು ಇಲ್ಲಿಯವರೆಗೆ ಶೇರ್ ಮಾಡಿಲ್ಲ. ಇದನ್ನೆಲ್ಲಾ ಗಮನಿಸಿರುವ ಕೆಲವರು ಈಗ, ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ವಾ ಎನ್ನುವ ಅನುಮಾನವನ್ನು ಸಹಾ ವ್ಯಕ್ತಪಡಿಸಿದ್ದಾರೆ. ಇಂತಹ ಅನುಮಾನಕ್ಕೆ ಕಾರಣಗಳು ಇವೆ ಅಂತಾನೇ ಹೇಳಬಹುದು.
![](https://news9kannada.com/wp-content/uploads/2024/04/399463-deepika-padukone-2-jpg.webp)
ದೀಪಿಕಾ ಪಡುಕೋಣೆ ತಮ್ಮ ಹೊಸ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿರೋ ನಟಿ ಹೀಗೆ ಚಿತ್ರೀಕರಣದಲ್ಲಿ ಇಷ್ಟು ಬ್ಯುಸಿಯಾಗಿರೋದು ಸಾಧ್ಯಾನಾ ಅಂತಿದ್ದಾರೆ ನೆಟ್ಟಿಗರು. ಸಿನಿಮಾವೊಂದರ ಚಿತ್ರೀಕರಣದ ಸ್ಪಾಟ್ ನಿಂದ ಹೊರ ಬಂದಿರುವ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಈಗಾಗಲೇ ವೈರಲ್ ಆಗಿದೆ.
![](https://news9kannada.com/wp-content/uploads/2024/04/399462-deepika-padukone-1-jpg.webp)
ನಟಿ ಗರ್ಭಣಿಯಾಗಿದ್ದರೆ ಸ್ವಲ್ಪ ಆದ್ರು ಹೊಟ್ಟೆ ಕಾಣಿಸ್ತಾ ಇತ್ತು. ಆದ್ರೆ ಫೋಟೋದಲ್ಲಿ ನಟಿ ನಾರ್ಮಲ್ ಆಗಿ ಕಾಣುತ್ತಿದ್ದಾರೆ. ಬಹುಶಃ ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ಲ ಅನಿಸುತ್ತೆ. ಅಲ್ಲದೇ ರಣ್ವೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ನಿರ್ಧಾರವನ್ನು ಮಾಡಿರಬಹುದು ಎನ್ನುವುದು ಕೆಲವರ ಅನಿಸಿಕೆಯಾಗಿದೆ.