Kalki 2898 AD : ಪ್ರಭಾಸ್ ಅಮ್ಮನಾಗಿ ದೀಪಿಕಾ, ಎರಡನೇ ಭಾಗದ ಸುಳಿವು ಕೊಟ್ಟ ಟ್ರೇಲರ್, ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Kalki 2898 AD : ಬಾಲಿವುಡ್ ನ (Bollywood) ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದೇ ವೇಳೆ ನಟಿ ಪ್ರಭಾಸ್ (Prabhas) ಜೊತೆಗೆ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಕಲ್ಕಿ 2898 AD (Kalki 2898 AD) ತೆರೆಗೆ ಬರಲು ಸಜ್ಜಾಗಿದೆ. ಮೊನ್ನೆಯಷ್ಟೇ ಸಿನಿಮಾದ ಹೊಸ ಟ್ರೇಲರ್ ಬಿಡುಗಡೆ ಆಗಿದ್ದು ಬಿರುಗಾಳಿ ಎಬ್ಬಿಸಿದ್ದು, ಈ ವೇಳೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಭಾಸ್ ಗೆ ತಾಯಿ ಪಾತ್ರದಲ್ಲಿ ಮಿಂಚೋದಕ್ಕೆ ಸಜ್ಜಾಗಿದ್ದಾರೆ ಎನ್ನುವ ವಿಷಯ ಎಲ್ಲರ ಕುತೂಹಲ ಕೆರಳಿಸಿದೆ.

ಟ್ರೇಲರ್ ನ ಆರಂಭದಲ್ಲೇ ಕಾಶಿಯನ್ನು ವಿಶ್ವದ ಮೊದಲ ಮತ್ತು ಕೊನೆಯ ನಗರ ಎಂದು ಹೇಳುತ್ತಾ ಕುತೂಹಲವನ್ನು ಕೆರಳಿಸಿದೆ ಸಿನಿಮಾ. ‌ಅಸ್ತವ್ಯಸ್ತಗೊಂಡ ಕೂದಲಿನಲ್ಲಿ, ಅಸಮಾಧಾನದಿಂದ ಇರೋ ದೀಪಿಕಾ ಪಡುಕೋಣೆ ತನ್ನ ಹೊಟ್ಟೆ ಮೇಲೆ ಕೈ ಇಟ್ಟುಕೊಂಡಿರೋದನ್ನ ನೋಡಬಹುದು. ಇದು ಆ ಪಾತ್ರ ಗರ್ಭಿಣಿ ಅನ್ನೋದಕ್ಕೆ ಸಾಕ್ಷಿ ಅಂತಾನೇ ಹೇಳಬಹುದಾಗಿದೆ.

ಅಲ್ಲದೇ ತನ್ನ ಮೊದಲ ಉಸಿರನ್ನೇ ತೆಗೆದುಕೊಳ್ಳದ ವ್ಯಕ್ತಿ ಕೊನೆ ಉಸಿರಿಗೆ ಹೇಗೆ ಕಾರಣವಾಗ್ತಾನೇ ಅಂತ ದೀಪಿಕಾ ಕೇಳೋ ಮಾತಿಗೆ ಕಮಲ ಹಾಸನ್ (Kamal Hassan) ಮಾಡಿರೋ ಕಲಿ ಪಾತ್ರವು ಹೆದರಬೇಡ, ಹೊಸ ಯುಗ ಬರ್ತಿದೆ ಅನ್ನೋ ಉತ್ತರವನ್ನು ನೀಡುತ್ತೆ. ಈ ಡೈಲಾಗ್ ನಿಂದಲೇ ಈಗ ಅನೇಕ ಹೊಸ ಪ್ರಶ್ನೆಗಳು ಹುಟ್ಟುಕೊಂಡಿವೆ. ದೀಪಿಕಾ ಜನ್ಮ ಕೊಡೋ ಮಗು ಪ್ರಭಾಸ್ ಆಗಿರಬಹುದಾ ಅನ್ನೋ ಪ್ರಶ್ನೆ ಅದರಲ್ಲಿ ಮೊದಲನೆಯದು.

ನಂತರ ಕಮಲ ಹಾಸನ್ ಹೊಸ ಯುಗ ಆರಂಭದ ಬಗ್ಗೆ ಕೊಡೋ ಸೂಚನೆ ಸಿನಿಮಾಕ್ಕೆ ಎರಡನೇ ಭಾಗ ಸಹಾ ಇದ್ಯಾ ಅನ್ನೋ ಕುತೂಹಲವನ್ನು ಸಹಾ ಕೆರಳಿಸಿದೆ.. 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ವೈಜಯಂತಿ ಮೂವೀಸ್ ಬಂಡವಾಳವನ್ನು ಹೂಡಿದೆ. ಇದೇ ಜೂನ್ 27 ರಂದು ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

Leave a Comment