Deepika Das: ಪತಿಯ ಜೊತೆಗೆ ವೆಕೇಶನ್ ಮೂಡಿಗೆ ಜಾರಿದ ದೀಪಿಕಾ ದಾಸ್: ವಿದೇಶದಲ್ಲಿ ರೋಮ್ಯಾಂಟಿಕ್ ಪೋಸ್ ಕೊಟ್ಟ ನಟಿ

Written by Soma Shekar

Published on:

---Join Our Channel---

Deepika Das : ಬಿಗ್ ಬಾಸ್ ಕನ್ನಡ ಸೀಸನ್ 7 (Bigg Boss Kannada 7) ಮತ್ತು ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಾಗಿಣಿ (Nagini) ಸೀರಿಯಲ್ ಖ್ಯಾತಿಯ ನಟಿ ದೀಪಿಕಾ ದಾಸ್ ಅವರು ಮದುವೆಯ ನಂತರ ಇದೀಗ ತಮ್ಮ ಪತಿಯ ಜೊತೆಗೆ ವೆಕೇಶನ್ ಎಂಜಾಯ್ ಮಾಡೋದಕ್ಕೆ ವಿದೇಶ ಪ್ರವಾಸಕ್ಕೆ ಹಾರಿದ್ದಾರೆ. ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಾವು ವಿದೇಶ ಪ್ರವಾಸವನ್ನು ಎಂಜಾಯ್ ಮಾಡ್ತಾ ಇರೋ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆಗೆ ತಮ್ಮ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ಪತಿ ದೀಪಕ್ (Deepak) ಅವರ ಜೊತೆಗೆ ಐಲ್ಯಾಂಡ್ ಪುಕೆಟ್ ಗೆ ದೀಪಿಕಾ ದಾಸ್ ಅವರು ಭೇಟಿ ನೀಡಿದ್ದಾರೆ. ಅಲ್ಲಿ ಬೋಟ್ ನಲ್ಲಿ ಪತಿಯ ಜೊತೆಗೆ ಕುತ್ಕೊಂಡು ಬಹಳ ರೊಮ್ಯಾಂಟಿಕ್ ಆಗಿ ಕ್ಯಾಮೆರಾ ಗೆ ಪೋಸ್ ನೀಡಿದ್ದಾರೆ. ಇದೇ ವೇಳೆ ನಟಿ ತಮ್ಮ ಕೊರಳಲ್ಲಿ ತಾಳಿಯನ್ನ ಧರಿಸದೆ ಇರೋದನ್ನ ನೋಡಿದ ಕೆಲವರು ಕಾಮೆಂಟ್ ಗಳನ್ನು ಮಾಡುತ್ತಾ, ಯಾವುದೇ ದೇಶಕ್ಕೆ ಹೋದ್ರು ಕೂಡಾ ನಮ್ಮ ಸಂಸ್ಕೃತಿಯನ್ನು ಮರಿಬೇಡಿ ಅಂತ ನಟಿಗೆ ಸಲಹೆಯನ್ನ ಕೊಟ್ಟಿದ್ದಾರೆ.

ನಟಿ ದೀಪಿಕಾ ದಾಸ್ ಅವರ ಮದುವೆ ಬಹುತೇಕ ಎಲ್ಲರಿಗೂ ಕೂಡ ಅಚ್ಚರಿಯನ್ನ ಮೂಡಿಸಿತ್ತು. ಗೋವಾದಲ್ಲಿ ಮದುವೆ ಆಗಬೇಕೆಂಬ ಕನಸನ್ನು ಕಂಡಿದ್ದ ನಟಿಯ ಆಸೆಯಂತೆ ಅವರ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ಗೋವಾದಲ್ಲಿ ನಡೆದಿತ್ತು. ಮಾರ್ಚ್ ಒಂದರಂದು ನಟಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದರು. ನಟಿ ಫೋಟೋಗಳನ್ನ ಶೇರ್ ಮಾಡಿದ್ದಾಗ ಬಹಳಷ್ಟು ಜನ ಶಾಕ್ ಆಗಿದ್ರು. ಬಹುಶಃ ಯಾವುದೋ ಶೂಟಿಂಗ್ ಫೋಟೋಗಳು ಇರಬಹುದು ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ರು.

ಅನಂತರ ಅದು ಅವರ ಮದುವೆಯ ಫೋಟೋಗಳೇ ಎನ್ನುವ ವಿಷಯ ಬಹಿರಂಗವಾಯಿತು. ಮದುವೆಯ ನಂತರ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ದೀಪಕ್ ಮತ್ತು ನಾನು 4 ವರ್ಷಗಳಿಂದ ಸ್ನೇಹಿತರಾಗಿದ್ವು, 4 ವರ್ಷಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ನಾವು ಭೇಟಿಯಾಗಿದ್ದೆವು. ಕಳೆದೊಂದು ವರ್ಷದಿಂದ ರಿಲೇಷನ್ಶಿಪ್ ನಲ್ಲಿ ಇದ್ದೆವು, ನಂತರ ಕುಟುಂಬಸ್ಥರ ಒಪ್ಪಿಗೆಯನ್ನ ಪಡೆದು ಮದುವೆ ಆಗಿದ್ದಾಗ ಹೇಳಿದ್ರು.

ಇನ್ನು ದೀಪಿಕಾ ದಾಸ್ ಅವರು ತಮ್ಮ ಪತಿಯ ಬಗ್ಗೆ ಹೇಳ್ತಾ, ಅವರ ಪತಿ ದೀಪಕ್ ಅವರು ಉದ್ಯಮಿಯಾಗಿದ್ದು ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಅವರನ್ನು ಚಿತ್ರರಂಗಕ್ಕೆ ಕರೆದಿರುವ ಯೋಜನೆ ಇದೆ ಎನ್ನುವ ಮಾತನ್ನ ಹೇಳಿದ್ರು. ದೀಪಕ್ ಅವರು ಹೆಚ್ಚಾಗಿ ಮಾತಾಡೋದಿಲ್ಲ. ನಾನೇ ಕಡಿಮೆ ಮಾತಾಡ್ತೀನಿ ಅನ್ಕೊಂಡಿದ್ದೆ ಆದ್ರೆ ಅವರು ನನಗಿಂತ ಕಡಿಮೆ ಮಾತನಾಡುವ ಹುಡುಗ ಎಂದು ದೀಪಿಕಾ ಪತಿಯ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.

Leave a Comment