Hamare Barah: ಅದೊಂದು ಷರತ್ತು ಹಾಕಿ ವಿವಾದಾತ್ಮಕ ಸಿನಿಮಾ ಹಮಾರೆ ಬಾರಹ್ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟ ಕೋರ್ಟ್

Written by Soma Shekar

Published on:

---Join Our Channel---

Hamare Barah: ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎನ್ನುವ ಕಾರಣಕ್ಕೆ ಹಮಾರೆ ಬಾರಾಹ್ (Hamare Barah) ಸಿನಿಮಾದ ಬಿಡುಗಡೆಗೆ ಕರ್ನಾಟಕದಲ್ಲಿ ಸರ್ಕಾರ ಬ್ರೇಕ್ ಹಾಕಿರೋ ವಿಚಾರ ಈಗಾಗಲೇ ಸುದ್ದಿಯಾಗಿದೆ. ಆದರೆ ಸಿನಿಮಾದಲ್ಲಿ ಇದೆ ಎನ್ನಲಾಗಿರುವ ಅಂತಹ ದೃಶ್ಯಗಳನ್ನ ತೆಗೆದುಹಾಕಲು ಚಿತ್ರ ನಿರ್ಮಾಪಕರು ಒಪ್ಪಿಕೊಂಡ ಕಾರಣದಿಂದ ಬಾಂಬೆ ಹೈಕೋರ್ಟ್ (Bombay High Court) ಬುಧವಾರದಂದು ವಿ ವಾ ದಾ ತ್ಮಕ ಚಿತ್ರವಾಗಿ ಬದಲಾಗಿದ್ದ ಹಮಾರೆ ಬಾರಾಹ್ ಸಿನಿಮಾದ ಬಿಡುಗಡೆಗೆ ಅನುಮತಿಯನ್ನು ನೀಡಿದೆ.

ಕಮಲ್ ಚಂದ್ರ (Kamal Chandra) ನಿರ್ದೇಶನ ಮಾಡಿರುವ ಈ ಸಿನಿಮಾ ಮುಸ್ಲಿಂ ಮಹಿಳೆಯರ ಕುರಿತಾದ ಕಥೆಯನ್ನು ಹೊಂದಿದೆ. ಈ ಸಿನಿಮಾದ ಮೂಲಕ ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿದೆ. ಆದರೆ ಸಿನಿಮಾದಲ್ಲಿ ಇಸ್ಲಾಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳಿವೆ ಎಂದು ಅಜರ್ ಎನ್ನುವವರು ಕೋರ್ಟ್ ಮೆಟ್ಟಿಲೇರಿದ ಕಾರಣ ಸಿನಿಮಾ ಬಿಡುಗಡೆ ಮಾಡಿದಂತೆ ಬಾಂಬೆ ಹೈಕೋರ್ಟ್ ತಡೆ ಹೇರಿತ್ತು.

ಆದರೆ ಈಗ ಸಿನಿಮಾದಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಿದರೆ ಅದರಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಖುರಾನ್ ನಲ್ಲಿರುವ ಬೋಧನೆಗಳನ್ನು ಇವು ತಿರುಚುವುದಿಲ್ಲ ಎಂದು ಗಮನಿಸಿರುವ ನ್ಯಾಯಮೂರ್ತಿ ಬಿಪಿ ಕೊಲಬಾವಾಲ ಮತ್ತು ನ್ಯಾಯಮೂರ್ತಿ ಫಿರ್ದೋಸ್ ಪೂನಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಚಿತ್ರದ ಬಿಡುಗಡೆಗೆ ಅನುಮತಿಯನ್ನು ನೀಡಿದೆ.

ಹಮಾರೆ ಬಾರಾಹ್ ಸಿನಿಮಾದಲ್ಲಿ ಅನ್ನು ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆಯ ನಂತರ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿ, ವಿವಾದವನ್ನು ಹುಟ್ಟು ಹಾಕಿತ್ತು. ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿ ಆಕ್ಷೇಪಾರ್ಹ ದೃಶ್ಯಗಳೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಕ್ಕಾಗಿ ನಿರ್ಮಾಪಕರಿಗೆ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿ, ಆ ಮೊತ್ತವನ್ನ ದೇಣಿಗೆ ನೀಡುವಂತೆ ಸೂಚಿಸಿತ್ತು.

Leave a Comment