Actor Anirudh: ಅವನನ್ನು ತುಂಬಾ ಇಷ್ಟ ಪಟ್ಟಿದ್ದೆವು ಆದರೆ, ದರ್ಶನ್ ಬಗ್ಗೆ ನಟ ಅನಿರುದ್ಧ್ ಹೇಳಿದ್ದಿಷ್ಟು

Written by Soma Shekar

Published on:

---Join Our Channel---

Actor Anirudh : ತಮ್ಮ ಗೆಳತಿ ಪವಿತ್ರ ಗೌಡಗೆ ಅ ಶ್ಲೀ ಲ ಮೆಸೇಜ್ ಕಳಿಸಿದ ಎನ್ನುವ ಕಾರಣಕ್ಕೆ ದರ್ಶನ್ ಮತ್ತು ಗ್ಯಾಂಗ್ (Darshan & Gang) ರೇಣುಕಾ ಸ್ವಾಮಿಯನ್ನು ಬ ರ್ಬ ರವಾಗಿ ಹತ್ಯೆ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಬ್ಯಾಂಕ್ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದು, ಇದು ಸ್ಯಾಂಡಲ್ವುಡ್ ಗೆ ದೊಡ್ಡ ಶಾಕ್ ಅನ್ನು ನೀಡಿದೆ. ಈಗಾಗಲೇ ಟಿವಿ ಮಾದ್ಯಮಗಳಲ್ಲಿ ಈ ವಿಷಯವಾಗಿ ದೊಡ್ಡ ಚರ್ಚೆ ನಡೆದಿದ್ದು, ಸ್ಟಾರ್ ನಟರು, ಕಲಾವಿದರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಹಿಂದೇಟು ಹಾಕಿದ್ದುಂಟು. ಆದರೆ ಈಗ ಒಬ್ಬೊಬ್ಬರಾಗಿ ಪ್ರತಿಕ್ರಿಯೆ ನೀಡುತ್ತಿದ್ದು ನ್ಯಾಯ ಸಿಗಬೇಕು ಎನ್ನುತ್ತಿದ್ದಾರೆ.

ಗುಡ್ ನೈಟ್ ಹಾಗೂ ಕಿರುತೆರೆಯಲ್ಲೂ ಅಪಾರವಾದ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಅನಿರುದ್ಧ್ (Actor Anirudh) ಅವರು ಈ ವಿಚಾರವಾಗಿ ತಮ್ಮ ಪ್ರತಿಕ್ರಿಯೆ ನೀಡುತ್ತಾ, ಈ ಪ್ರಕರಣ ಕನ್ನಡ ಚಿತ್ರರಂಗಕ್ಕೆ ತಪ್ಪು ಚುಕ್ಕೆ ಅಲ್ಲ, ಇದೊಂದು ದುರ್ಘಟನೆ, ದುರಂತ ಎಂದು ಹೇಳಿದ್ದಾರೆ. ರೇಣುಕಾ ಸ್ವಾಮಿ ಹ ತ್ಯೆ ಬಳಿಕ ಅವರ ಕುಟುಂಬ ಸಂಕಟ ಅನುಭವಿಸುತ್ತಿದೆ. ಇನ್ನು ಕನ್ನಡ ಚಿತ್ರರಂಗದ ಮೇರು ನಟರೆನಿಸಿದ್ದ ದರ್ಶನ್ ರನ್ನು ನಾವೆಲ್ಲರೂ ತುಂಬಾ ಇಷ್ಟ ಪಟ್ಟಿದ್ದೆವು.

ಆದರೆ ದರ್ಶನ್ ಜೀವನದಲ್ಲಿ ಈ ರೀತಿ ನಡೆಯುತ್ತಿರುವುದು ಸಂಕಟವನ್ನು ತಂದಿದೆ. ಪ್ರಕರಣದ ಬಗ್ಗೆ ಈಗಾಗಲೇ ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈಗಲೇ ತೀರ್ಮಾನಕ್ಕೆ ಬರೋದಕ್ಕೆ ಸಾಧ್ಯವಿಲ್ಲ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ತಪ್ಪಿಸಸ್ಥರೆಂದು ಸಾಬೀತಾದರೆ ಶಿಕ್ಷೆಯಾಗಲಿ ಎನ್ನುವ ಮಾತನ್ನು ನಟ ಅನಿರುದ್ಧ್ ಅವರು ಹೇಳುವ ಮೂಲಕ ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ

ದರ್ಶನ್ ಅವರ ಪ್ರಕರಣ ಮತ್ತು ಬಂಧನದ ನಂತರ ಸ್ಯಾಂಡಲ್ ವುಡ್ ನ ಕೆಲವು ಸೆಲೆಬ್ರಿಟಿಗಳು ಮಾತ್ರವೇ ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಸ್ಟಾರ್ ನಟರು ಹಾಗೂ ಆಪ್ತರು ದರ್ಶನ್ ಅವರಈ ವಿಷಯವಾಗಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಜಾರಿಕೊಂಡಿದ್ದಾರೆ ಎನ್ನುವುದು ಸಹಾ ವಾಸ್ತವದ ವಿಚಾರವಾಗಿದೆ.

Leave a Comment