Darshan: ದರ್ಶನ್, ಪವಿತ್ರ ಜೈಲು, ಇದರ ಬೆನ್ನಲ್ಲೇ ಹೊಸ ಟ್ವಿಸ್ಟ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ

Written by Soma Shekar

Published on:

---Join Our Channel---

Darshan: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವವರನ್ನು ಕೊ ಲೆ ಮಾಡಿದ ಆರೋಪದ ಅಡಿಯಲ್ಲಿ ನಟ ದರ್ಶನ್ (Darshan) ಮತ್ತು ಗ್ಯಾಂಗ್ ಪೊಲೀಸರ ಬಂಧನದಲ್ಲಿದೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರ ಗೌಡ ಅವರನ್ನು ಮತ್ತು ಎ2 ಆರೋಪಿಯಾಗಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಾದ್ಯಮಗಳಲ್ಲಿ ಈ ವಿಚಾರ ಪ್ರಮುಖ ಸುದ್ದಿಯಾಗಿ ಕಳೆದ ಕೆಲವು ದಿನಗಳಿಂದಲೂ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಮುಂದೆ ಏನಾಗಲಿದೆ ಅನ್ನೋದನ್ನ ತಿಳಿಯುವ ಕಾತುರ ಸಹಜವಾಗಿ ಎಲ್ಲರಲ್ಲೂ ಇದೆ.

ಈ ಪ್ರಕರಣದಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijaya Lakshmi) ಬಹಳ ಬೇಸರ ಮತ್ತು ಅಸಮಾಧಾನಗೊಂಡಿದ್ದಾರೆ. ಅದೇ ಕಾರಣದಿಂದಲೇ ಅವರು ತಮ್ಮ instagram ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ (Pavithra Gowda) ಮತ್ತು ದರ್ಶನ್ ಹೆಸರು ಕೇಳಿ ಬರುತ್ತಿದ್ದ ಹಾಗೆಯೇ ವಿಜಯಲಕ್ಷ್ಮಿ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದರು. ಅಲ್ಲದೇ ತಾವು ಫಾಲೋ ಮಾಡುತ್ತಿದ್ದ ಇನ್ನಿತರ ಖಾತೆಗಳನ್ನೂ ಫಾಲೋ ಮಾಡಿ ಅದನ್ನು ಶೂನ್ಯಗೊಳಿಸಿದ್ದರು.

ತಮ್ಮ instagram ಖಾತೆಯ ಡಿಪಿಯಲ್ಲಿದ್ದ ಫೋಟೋವನ್ನು ಕೂಡಾ ರಿಮೂವ್ ಮಾಡಿದ್ದರು. ಈಗ ಇವೆಲ್ಲವುಗಳ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ತಮ್ಮ instagram ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಈ ನಡೆಯನ್ನ ನೋಡಿದ ನೆಟ್ಟಿಗರಿಗೆ ಅವರು ಪ್ರಕರಣದ ವಿಚಾರದಲ್ಲಿ ಬಹಳ ಬೇಸರ ಪಟ್ಟುಕೊಂಡಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ.

ಕೊ ಲೆ ಪ್ರಕರಣದಲ್ಲಿ ಆರೋಪವನ್ನು ಹೊತ್ತು ಜೈಲನ್ನು ಸೇರಿರುವ ನಟ ದರ್ಶನ್ ರಿಂದ ವಿಜಯಲಕ್ಷ್ಮಿ ಅಂತರವನ್ನು ಕಾಯ್ದುಕೊಂಡಂತೆ ಕಾಣುತ್ತಿದೆ. ಇನ್ನು ರೇಣುಕಾ ಸ್ವಾಮಿ ಪ್ರಕರಣದ ವಿಚಾರವಾಗಿ ವಿಚಾರಣೆ ಮುಂದುವರೆದಂತೆ ದಿನಕ್ಕೊಂದು ಹೊಸ ವಿಷಯ ಹೊರಗೆ ಬರುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಗಳಿಗೆ ಇದು ಕಾರಣವಾಗಿದೆ. ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗುವಾಗಲೇ ಅಭಿಮಾನಿಗಳು ನಟನ ಪರವಾಗಿ ಮಾತನಾಡುವುದನ್ನು ಮುಂದುವರಿಸಿದ್ದಾರೆ.

Leave a Comment