Amruthadhaare: ಜೈದೇವ್ ಆಟಕ್ಕೆ ಕೊನೆ ಹಾಡೋ ಸಮಯ ಬಂದಾಯ್ತು, ಗೌತಮ್ ಭೂಮಿಕಾ ಇಬ್ಬರ ಗುರಿ ಒಬ್ಬನೇ

Written by Soma Shekar

Published on:

---Join Our Channel---

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಮತ್ತೆ ಹೊಸ ಟ್ವಿಸ್ಟ್ ಗಳು ಕಥೆಯಲ್ಲಿ ರೋಚಕತೆಯನ್ನು ಮೂಡಿಸಿದೆ. ಗೌತಮ್ (Gowtham) ಮತ್ತು ಭೂಮಿಕಾ (Bhumika) ಚಿಕ್ಕಮಗಳೂರಿಗೆ ಹೋದ ಸಂದರ್ಭದಲ್ಲಿ ಭೂಮಿಕಾ ಪ್ರಾಣಕ್ಕೆ ಸಂಚಕಾರವನ್ನು ತಂದ ಕೆಂಚ ಜೈಲಿನಿಂದ ಬಿಡುಗಡೆ ಆಗೋದಕ್ಕೆ ಭೂಮಿಕಾ ಸಹಾಯವನ್ನು ಪಡೆದಿದ್ದಾನೆ. ತಮಗೆ ಸಹಾಯ ಮಾಡಿದ ಭೂಮಿಕಾಗೆ ಎಲ್ಲ ಸತ್ಯವನ್ನು ಹೇಳಬೇಕು ಅಂತ ನಿರ್ಧಾರ ಮಾಡಿ, ಭೂಮಿಕಾನ ಬೇಟಿಯಾಗಿ ಎಲ್ಲದಕ್ಕೂ ಕಾರಣ ಜೈದೇವ್ ಅಂತ ತಿಳಿಸಿದ್ದಾನೆ. ಅದಕ್ಕೆ ಬೇಕಾದಂತಹ ಸಾಕ್ಷಿಗಳು ತನ್ನ ಹತ್ರ ಇದೆ ಅನ್ನೋ ಮಾತನ್ನು ಹೇಳುತ್ತಾನೆ.

ಮತ್ತೊಂದು ಕಡೆ ಗೌತಮ್ ತನ್ನ ಕಂಪನಿಗೆ ಆಗಿರುವ ಮೋಸವನ್ನು ತಿಳಿದುಕೊಳ್ಳೋದಕ್ಕೆ ಜೀವನ ಗೆಳೆಯನ ಜೊತೆಗೆ ಮಾತನಾಡಿದ್ದು, ಅವರ ಕಂಪನಿಗೆ ತನ್ನ ಕಂಪನಿಯಿಂದ ಮಾಹಿತಿ ಲೀಕ್ ಮಾಡಿದ್ದು ಯಾರಂತ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಜೀವನ ಗೆಳೆಯ ಗೌತಮ್ ಗೆ ಕಾಲ್ ಮಾಡಿ ಕಂಪನಿಯಿಂದ ದೊಡ್ಡ ಅಮೌಂಟ್ ಡ್ರಾ ಆಗಿದೆ, ಬಹುಶಃ ಅದು ಮಾಹಿತಿ ಲೀಕ್ ಮಾಡಿದವರಿಗೆ ಕೊಡೋದಕ್ಕೆ ಅಂತ ಕಾಣ್ಸುತ್ತೆ ಎಂದಾಗ, ಗೌತಮ್ ಆ ವಾಹನದ ಲೊಕೇಶನ್ ತಿಳಿಸೋದಕ್ಕೆ ಸಾಧ್ಯವಾಗುತ್ತಾ ಅಂತ ಕೇಳ್ತಾನೆ.

ಆದ್ರೆ ಆ ವ್ಯಕ್ತಿ ಅದರಿಂದ ನನ್ನ ಕೆಲಸಕ್ಕೆ ಕುತ್ತು ಬರುತ್ತೆ ಅಂದಾಗ, ಕೆಲಸ ಹೋದ್ರೆ ನನ್ನ ಕಂಪನಿಯಲ್ಲಿ ಒಳ್ಳೆ ಪೋಸ್ಟ್ ಕೊಡ್ತೀನಿ ಅಂತ ಗೌತಮ್ ಆಫರ್ ನೀಡಿದ್ದು, ಒಂದು ಜಿಪಿಎಸ್ ಟ್ರಾಕರ್ ಅನ್ನು ಕಳಿಸಿ, ಅದನ್ನು ಹಣ ತಗೊಂಡು ಹೋಗೋ ವಾಹನಕ್ಕೆ ಸಿಕ್ಕಿಸಿ ಅಂತ ಹೇಳ್ತಾನೆ. ಗೌತಮ್ ಹೇಳಿದಂತೆ ಜೀವನ ಗೆಳೆಯ ಮಾಡಿದ್ದಾನೆ. ಅಲ್ಲಿಗೆ ಜೈದೇವ್ ನ ಹಿಡಿಯೋದಕ್ಕೆ ಒಂದು ಪ್ಲಾನ್ ರೆಡಿಯಾಗಿದೆ. ಗೌತಮ್ ಆ ವ್ಯಕ್ತಿ ಯಾರು ಅಂತ ಪತ್ತೆ ಹಚ್ಚಲು ಹೊರಡೋದಕ್ಕೆ ಸಿದ್ದನಾಗಿದ್ದಾನೆ.

ಇದೇ ವೇಳೆ ಭೂಮಿಕಾ ಗೌತಮ್ ಹತ್ರ ಕೆಂಚನ ವಿಷಯ ಮತ್ತು ಅವನು ಹಾಗೆ ಮಾಡೋದಕ್ಕೆ ನಮ್ಮ ಹತ್ತಿರದವರೇ ಕಾರಣ ಅಂತ ಹೇಳಿ, ಕೆಂಚ ಎಲ್ಲಾ ಸಾಕ್ಷಿಗಳನ್ನು ತಗೊಂಡು ಬರ್ತಾನೆ ನಾವು ಜೊತೆಯಾಗಿ ಹೋಗೋಣ ಎಂದಾಗ, ಗೌತಮ್ ತಾನು ಕಂಪನಿಯ ವಿಷಯದಲ್ಲಿ ಮೋಸ ಮಾಡಿದವರನ್ನು ಯಾರು ಅಂತ ಪತ್ತೆ ಹಚ್ಚೋದಕ್ಕೆ ಹೋಗ್ತಾ ಇರೋದಾಗಿ ಹೇಳ್ತಾನೆ.‌ ಆದರೆ ಎರಡು ವಿಷಯದಲ್ಲಿ ಹತ್ತಿರದವರೇ ಹೀಗೆ ಮಾಡಿದ್ದಾರೆ ಅನ್ನೋ ವಿಷಯ ಹೇಳಿದ ಭೂಮಿಕಾ ಇಬ್ರು ಯಾಕೆ ಒಬ್ಬರೇ ಆಗಿರಬಾರದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾಳೆ. ಈಗ ಇಬ್ಬರೂ ಜೊತೆಯಾಗಿ ಹೋಗಿ ಜೈದೇವ್ ನ ಆಟಕ್ಕೆ ಬ್ರೇಕ್ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment