Actress Sithara: ಅವರ ನೆನಪೇ ಕಾಡುತ್ತದೆ; ವಯಸ್ಸು 50 ಆದ್ರು ನಟಿ ಸಿತಾರ ಒಂಟಿ, ಮದುವೆ ಆಲೋಚನೆ ಯಾಕಿಲ್ಲ?

Written by Soma Shekar

Published on:

---Join Our Channel---

Actress Sithara: ದಕ್ಷಿಣ ಸಿನಿಮಾ ರಂಗದಲ್ಲಿ ಪ್ರಸ್ತುತ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಸಿತಾರಾ (Actress Sithara) ಅವರು ವರ್ಷಗಳ ಹಿಂದೆ ನಾಯಕಿಯಾಗಿಯೂ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಕೌಟುಂಬಿಕ ಕಥಾ ಸಿನಿಮಾ ಗಳ ಮೂಲಕವೇ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ಈ ನಟಿ ಮೂಲತಃ ಕೇರಳದವರಾಗಿದ್ದರೂ, ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿ ಸಿನಿಮಾರಂಗದಲ್ಲಿ ತನ್ನದೇ ಆದ ಖ್ಯಾತಿಯನ್ನ ಪಡೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕನ್ನಡ ಸಿನಿಮಾ ರಂಗದಲ್ಲಿ ನಟಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಜೊತೆಗೆ ಸಿತಾರಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದ ಹಾಲುಂಡ ತವರು ಸಿನಿಮಾ ಅದ್ಭುತವಾದ ವಿಜಯವನ್ನ ಪಡೆದುಕೊಂಡಿತ್ತು. ಆ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ನಟಿ ಕನ್ನಡದಲ್ಲಿ ಸಾಲು ಸಾಲು ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸ್ಟಾರ್ ಹೀರೋಯಿನ್ ಪಟ್ಟವನ್ನು ಪಡೆದುಕೊಂಡು ಮಿಂಚಿದ್ದರು ಎನ್ನುವುದು ಕೂಡಾ ವಾಸ್ತವದ ವಿಚಾರವಾಗಿದೆ.

ವೃತ್ತಿ ಜೀವನದಲ್ಲಿ ಯಶಸ್ಸು ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ ಸಿತಾರಾ ಅವರು ವೈಯಕ್ತಿಕ ಜೀವನದಲ್ಲಿ ಮಾತ್ರ ಇನ್ನೂ ಒಂಟಿಯಾಗಿ ಉಳಿದಿದ್ದಾರೆ. ಲವಯಸ್ಸು 50 ಆದರೂ ಸಿತಾರಾ ಇನ್ನು ಮದುವೆಯಾಗಿಲ್ಲ. ಸಿನಿಮಾ ಜಗತ್ತಿನಲ್ಲಿ ಮೂರು ದಶಕಗಳನ್ನು ಪೂರೈಸಿರುವ ಈ ನಟಿ ಇಂದಿಗೂ ಅವಿವಾಹಿತರಾಗಿಯೇ ಉಳಿದಿರುವುದು ಯಾಕೆ ಎನ್ನುವುದು ಅವರ ಅಭಿಮಾನಿಗಳನ್ನು ಕಾಡುವ ಪ್ರಶ್ನೆಯಾಗಿದೆ.

ನಟಿ ಸಂದರ್ಶನ ಒಂದರಲ್ಲಿ ಹೇಳಿದ ವಿಚಾರಗಳನ್ನು ಗಮನಿಸಿದರೆ, ಮನೆಯವರಿಂದ ಅವರಿಗೆ ಮದುವೆಯಾಗುವಂತೆ (Marriage) ಪ್ರಪೋಸಲ್ ಗಳು ಬರುತ್ತಿದ್ದವಂತೆ. ಆದರೆ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದ ದಿನಗಳಲ್ಲಿ ನಟನೊಬ್ಬರನ್ನ ಪ್ರೀತಿ ಮಾಡಿದ್ದರಂತೆ. ಆದರೆ ಆ ಪ್ರೀತಿ ಉಳಿಯಲಿಲ್ಲ, ಆದರೂ ಅವರ ಬಗ್ಗೆ ಆಲೋಚನೆ ಮಾಡುತ್ತಿದ್ದ ಸಿತಾರಾ, ತಾನು ಮದುವೆಯನ್ನು ಆಗುವ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ, ಬದಲಾಗಿ ಒಂಟಿಯಾಗಿ ಉಳಿದುಬಿಟ್ಟೆ ಎಂದು ಹೇಳಿದ್ದಾರೆ.

ಅವರು ಮದುವೆ ಆಗದೆ ಇರುವುದಕ್ಕೆ ಮತ್ತೊಂದು ಕಾರಣವೂ ಇದೆ, ಸಿತಾರ ಅವರಿಗೆ ಅವರ ತಂದೆ ಪರಮೇಶ್ವರನ್ ನಾಯರ್ ಅವರ ಜೊತೆಗೆ ಬಹಳ ಆತ್ಮೀಯತೆ ಇತ್ತು, ಅಪ್ಪನನ್ನು ಬಿಟ್ಟು ಅವರು ಇರುತ್ತಿರಲಿಲ್ಲ, ತಂದೆ, ತಾಯಿಯನ್ನು ಬಿಟ್ಟು ದೂರ ಉಳಿಯುವುದು ಸಾಧ್ಯವಿರಲಿಲ್ಲ. ಅದೇ ಕಾರಣಕ್ಕೆ ತಾನು ಮದುವೆಯಾಗಲಿಲ್ಲ ಎನ್ನುವ ಮಾತನ್ನು ಹೇಳಿರುವ ಸಿತಾರಾ ಅವರು ತಂದೆ ತೀರಿಕೊಂಡ ಬಳಿಕ ಮದುವೆಯಾಗಿ ಸೆಟ್ಲ್ ಆಗುವ ಆಲೋಚನೆ ಮಾಡಲಿಲ್ಲ ಎಂದು ಹೇಳಿದ್ದಾರೆ.

Leave a Comment