Actress Prema: ಅದೊಂದು ನೋವಿನಿಂದ ಡಿಪ್ರಶನ್ ಗೆ ಜಾರಿದ್ದೆ; ನಟಿ ಪ್ರೇಮ ಹೇಳಿದ್ದು ಯಾವ ನೋವಿನ ಬಗ್ಗೆ

Written by Soma Shekar

Published on:

---Join Our Channel---

Actress Prema: ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಪ್ರೇಮ (Actress Prema) ತಮ್ಮ ಅದ್ಭುತ ಅಭಿನಯದ ಮೂಲಕ ದೊಡ್ಡ ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ. ಹಲವು ವರ್ಷಗಳ ನಂತರ ಕಾರ್ಯಕ್ರಮವೊಂದರಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಕನ್ನಡದ ಹೊಚ್ಚ ಹೊಸ ರಿಯಾಲಿಟಿ ಶೋ ಮಹಾನಟಿಯಲ್ಲಿ (Mahanati Reality Show) ತೀರ್ಪುಗಾರ್ತಿಯಾಗಿ ಪ್ರೇಮ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮಹಾ ನಟಿ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಪ್ರೇಮ ಅವರು ಇಷ್ಟು ದಿನ ಎಲ್ಲಿದ್ರು, ಏನು ಮಾಡ್ತಿದ್ರು, ಅವರ ಅನಾರೋಗ್ಯ ಮತ್ತು ಡಿಪ್ರೆಶನ್ ವಿಚಾರವಾಗಿ ಹರಿದಾಡಿದ್ದಂತಹ ಒಂದಷ್ಟು ಸುದ್ದಿಗಳಿಗೆ ಈಗ ನಟಿ ತಮ್ಮದೇ ಉತ್ತರವನ್ನು ನೀಡಿದ್ದಾರೆ.

ನನ್ನ ಆರೋಗ್ಯದ ಕುರಿತಾಗಿ ಬಹಳಷ್ಟು ವಿಚಾರಗಳು ಹೊರಗಡೆ ಬಂದವು. ನಾನು ನಿರೀಕ್ಷೆ ಮಾಡಿದ್ದು ನನಗೆ ಸಿಗಲಿಲ್ಲ ಅಂದಾಗ ನಾನು ಡಿಪ್ರೆಶನ್ ಗೆ (Depression) ಜಾರಿದೆ ಅನ್ಸುತ್ತೆ. ಎಲ್ಲ ಹೆಣ್ಣು ಮಕ್ಕಳಿಗೂ ಹಾಗೆ ಆಗುತ್ತೆ. ನನಗೆ ಅಬಾರ್ಷನ್ ಆಗಿ ಆಸ್ಪತ್ರೆಯಲ್ಲಿದ್ದೆ, ನಾನು ಡಿಪ್ರೆಶನ್ ಗೆ ಜಾರಲು ಅದೇ ಕಾರಣವಾಗಿತ್ತು. ಮಗುವನ್ನ ಕಳೆದುಕೊಂಡೆ ಅನ್ನೋ ನೋವು ಮತ್ತು ಸೆಂಟಿಮೆಂಟ್ ಅನ್ನೋದು ಎಲ್ಲರಿಗೂ ಇರುತ್ತೆ. ಅದಕ್ಕೆ ಕೊರಗಿ ಖಿನ್ನತೆಗೆ ಜಾರಿದೆ.

ಪ್ರೇಮಾ ಗೆ ಕ್ಯಾನ್ಸರ್ ಎನ್ನುವ ಸುದ್ದಿಯನ್ನು ಹಬ್ಬಿಸಿದರು. ತಂದೆ ತಾಯಿ ಮತ್ತು ದೇವರ ಆಶೀರ್ವಾದದಿಂದ ನಾನು ಬಹಳ ಬೇಗ ಅದರಿಂದ ಹೊರಗೆ ಬಂದೆ. ಇಪ್ಪತ್ತೈದು ವರ್ಷಗಳಿಂದ ವೈದ್ಯರು ಪರಿಚಯವಿದ್ದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಮನೆಯಲ್ಲಿ ಇದ್ರೆ ಗುಣ ಆಗೋದಿಲ್ಲ ಅನ್ನೋ ಕಾರಣಕ್ಕೆ ಹೊರಗೆ ಬರಲು, ಹೊರಗೆ ಕಾಣಿಸಿಕೊಳ್ಳಲು ಪ್ರಾರಂಭ ಮಾಡಿದೆ ಎಂದು ಪ್ರೇಮ ಅವರು ಯೂಟ್ಯೂಬ್ ಚಾನೆಲ್ ನ ಸಂದರ್ಶನ ಒಂದರಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ನಟಿ ಮಾತನಾಡುತ್ತಾ ತನಗೆ ಧ್ಯಾನ ಬಹಳ ಸಹಾಯವನ್ನು ಮಾಡಿತ್ತು. ಸ್ನೇಹಿತರು ನನ್ನನ್ನು ಓಷೋ ಸಂಸ್ಥೆಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ ನಾನು ಆಶ್ರಮ ಸೇರಿಕೊಂಡೆ ಎಂದು ಅನೇಕರು ಹೇಳೋದಕ್ಕೆ ಪ್ರಾರಂಭ ಮಾಡಿದರು. ನಾಲ್ಕು ದಿನ ಕ್ಯಾಂಪ್ ಮುಗಿಸಿಕೊಂಡು ಬಂದೆ. ಈಗ ಮನೆಯಲ್ಲೇ ಯೋಗವನ್ನು ಮಾಡುತ್ತೇನೆ ಎನ್ನುವ ಮಾತುಗಳನ್ನು ಸಹಾ ಪ್ರೇಮ ಅವರು ಹೇಳಿದ್ದಾರೆ.

Leave a Comment