Vijay Sethupathi: ಅಲ್ಲು ಅರ್ಜುನ್ ಸಿನಿಮಾ ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ, ನಟನ ನಿರ್ಧಾರ ಸೂಪರ್ ಅಂದ ಫ್ಯಾನ್ಸ್

Written by Soma Shekar

Published on:

---Join Our Channel---

Vijay Sethupathi : ತಮಿಳು ಸಿನಿಮಾ ರಂಗದ ಸ್ಟಾರ್ ನಟ ವಿಜಯ ಸೇತುಪತಿ (Vijay Sethupathi) ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ. ನಾಯಕನಾಗಿ, ಖಳನಟನಾಗಿ, ಪೋಷಕ ನಟನಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ನಟ ಬಹುಭಾಷಾ ನಟನಾಗಿದ್ದಾರೆ. ಕೇವಲ ನಾಯಕನ ಪಾತ್ರಕ್ಕೆ ಸೀಮಿತವಾಗಿರದೆ ನಟನೆಗೆ ಅವಕಾಶವಿರುವಂತಹ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಈ ನಟ ಸದಾ ಸಿದ್ಧರಾಗಿರುತ್ತಾರೆ. ತೆಲುಗಿನಲ್ಲಿ ಉಪ್ಪೆನಾ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ ವಿಜಯ್ ಸೇತುಪತಿ.

ಉಪ್ಪೆನಾ (Uppena) ಸಿನಿಮಾದಲ್ಲೂ ನೆಗೆಟಿವ್ ಷೇಡ್ ಇರುವ ಪಾತ್ರವನ್ನು ಮಾಡುವ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡವರು ಈ ನಟ. ಇದಾದ ನಂತರ ವಿಜಯ್ ಸೇತುಪತಿ ಅವರ ತಮಿಳು ಸಿನಿಮಾ ನಿರ್ಮಾಪಕರು ನಟನ ಸಿನಿಮಾಗಳನ್ನ ತೆಲುಗಿನಲ್ಲೂ ಬಿಡುಗಡೆ ಮಾಡಿದರು. ಆದರೆ ಆ ಸಿನಿಮಾಗಳು ತೆಲುಗಿನಲ್ಲಿ ದೊಡ್ಡ ಯಶಸ್ಸನ್ನ ಪಡೆದುಕೊಳ್ಳುವಲ್ಲಿ ಎಡವಿದವು.

ಇತ್ತೀಚೆಗೆ ವಿಜಯ್ ಸೇತುಪತಿ ಅವರು ನಟಿಸಿದ ಮಹಾರಾಜ ಸಿನಿಮಾ ಉತ್ತಮವಾದ ಕಲೆಕ್ಷನ್ ಕಾಣುತ್ತಿದೆ. ಸಿನಿಮಾಕ್ಕೆ ವ್ಯಾಪಕವಾಗಿ ಮೆಚ್ಚುಗೆ ಹರಿದು ಬರುತ್ತಿದೆ. ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ. ತೆಲುಗಿನಲ್ಲಿ ಸಿನಿಮಾ ಯಶಸ್ಸನ್ನು ಕಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಕ್ಸಸ್ ಮೀಟ್ ಅನ್ನು ಸಹಾ ಏರ್ಪಡಿಸಲಾಗಿತ್ತು.‌

ಇವೆಲ್ಲವುಗಳ ನಡುವೆಯೇ ನಟ ಪುಷ್ಪ (Pushpa) ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ವಿಚಾರ ಮುನ್ನೆಲೆಗೆ ಬಂದಿದೆ. ಪುಷ್ಪ ಸಿನಿಮಾದಲ್ಲಿ ಭನ್ವರ್ ಶೇಖಾವತ್ ಪಾತ್ರಕ್ಕೆ ವಿಜಯ್ ಸೇತುಪತಿ ಅವರನ್ನು ಪರಿಗಣಿಸಲಾಗಿತ್ತು. ಆದರೆ ಆ ಪಾತ್ರವೂ ಅವರಿಗೆ ಹೆಚ್ಚು ಇಮೇಜ್‌ ಅನ್ನ ತರೋದಿಲ್ಲ ಎಂದು ಭಾವಿಸಿ ಅವರು ಅದನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗಿದೆ. ಪುಷ್ಪ ಸಿನಿಮಾದಲ್ಲಿ ಮಲೆಯಾಳಂ ನಟ ಫಹಾದ್ ಪಾಸಿಲ್ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆಗಳು ಹರಿದು ಬಂತು ಎನ್ನುವುದು ವಾಸ್ತವದ ವಿಚಾರವಾಗಿದೆ.

ತೆಲುಗಿನಲ್ಲಿ ಈ ಹಿಂದೆ ಅವರು ನಟಿಸಿದ್ದ ಒಂದೆರಡು ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ಅಂತಹ ಪ್ರಾಧಾನ್ಯತೆ ಇರಲಿಲ್ಲ. ಸೈರಾ ನರಸಿಂಹಾರೆಡ್ಡಿ ಸಿನಿಮಾದಲ್ಲಿ ವಿಜಯ್ ಸೇತುಪತಿ ಇದ್ದಾರೆ ಎನ್ನುವುದೇ ಅನೇಕರಿಗೆ ತಿಳಿದಿಲ್ಲ. ಇಂತಹ ಪಾತ್ರಗಳು ಸಿಗಬಹುದೆನ್ನುವ ಕಾರಣಕ್ಕೆ ನಟ ತೆಲುಗು ಸಿನಿಮಾಗಳ ಕಡೆಗೆ ಹೆಚ್ಚು ಆಸಕ್ತಿ ತೋರಿಸಿಲ್ಲ ಎನ್ನುತ್ತವೆ ವರದಿಗಳು..

Leave a Comment