Nagarjuna: ಅನುಷ್ಕಾ ಶೆಟ್ಟಿ ಜೊತೆ ನಾಗಾರ್ಜುನ ಸಂಬಂಧ, ನೇರವಾಗಿ ಉತ್ತರ ಕೊಟ್ಟ ನಟ ನಾಗಾರ್ಜುನ

Written by Soma Shekar

Published on:

---Join Our Channel---

Nagarjuna: ಸಿನಿಮಾ ರಂಗದಲ್ಲಿ ಸ್ಟಾರ್ ನಟ ನಟಿಯರ ಕುರಿತಾಗಿ ಸುದ್ದಿಗಳು ಹರಿದಾಡುವುದು ಸಾಮಾನ್ಯವಾಗಿರುತ್ತೆ. ಹಲವು ಸ್ಟಾರ್ ನಟರ ಹೆಸರುಗಳು ನಟಿಯರ ಜೊತೆಗೆ ತಳಕು ಹಾಕಿಕೊಂಡು ಸುದ್ದಿಗಳಾಗುತ್ತದೆ. ತೆಲುಗು ಸಿನಿಮಾ ರಂಗದಲ್ಲಿ ನಟ ನಾಗಾರ್ಜುನ (Nagarjuna) ಯಶಸ್ಸಿನ ನಾಗಾಲೋಟವನ್ನು ಮಾಡುವಾಗ ಅವರ ಹೆಸರು ಕೂಡಾ ಒಂದಷ್ಟು ಜನ ನಟಿಯರ ಜೊತೆಗೆ ತಳಕು ಹಾಕಿಕೊಂಡಿತ್ತು ಹಾಗೂ ಆ ವಿಚಾರವಾಗಿ ಸಾಕಷ್ಟು ವದಂತಿಗಳು ಹರಿದಾಡಿದ್ದವು.

ಹಾಗೆ ನಟ ನಾಗಾರ್ಜುನ ಜೊತೆಗೆ ತಳಕು ಹಾಕಿಕೊಂಡ ಹೆಸರುಗಳಲ್ಲಿ ಅನುಷ್ಕಾ ಶೆಟ್ಟಿ (Anushka Shetty) ಅವರ ಹೆಸರು ಸಹಾ ಸೇರಿದೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ನಟ ನಾಗಾರ್ಜುನ ಅವರು ಅನುಷ್ಕಾ ಶೆಟ್ಟಿ ಜೊತೆಗಿನ ತಮ್ಮ ಸಂಬಂಧದ ಕುರಿತಾಗಿ ಹರಿದಾಡಿದ ಸುದ್ದಿಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹೇಳಿ, ಎಲ್ಲರ ಗಮನ ಸೆಳೆದಿದ್ದಾರೆ.

ನಾನು ನನ್ನ ಸಿನಿಮಾಗಳಿಗೆ ಎತ್ತರವಾಗಿರುವ ಹೀರೋಯಿನ್ ಗಳನ್ನು ಸೆಲೆಕ್ಟ್ ಮಾಡುವಂತೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಶಿಫಾರಸ್ಸನ್ನು ಮಾಡುತ್ತಿದ್ದೆ. ಅನುಷ್ಕಾ ಮತ್ತು ನನ್ನ ಜೋಡಿ ಚೆನ್ನಾಗಿದೆ ಎನಿಸಿ ಅದನ್ನ ರಿಪೀಟ್ ಮಾಡುತ್ತಿದ್ದರು. ಈ ಕಾರಣಕ್ಕೆ ಅನುಷ್ಕಾ ಶೆಟ್ಟಿ ಜೊತೆ ಏನೋ ನಡೀತಿದೆ ಎನ್ನುವ ವದಂತಿಯೊಂದು ಹಬ್ಬಿತ್ತು ಎನ್ನುವ ವಿಷಯವನ್ನ ನಾಗಾರ್ಜುನ ಹೇಳಿದ್ದಾರೆ.

ಕೇವಲ ನಾನು ಅಷ್ಟೇ, ಅಲ್ಲ ನನ್ನ ಮಗ ನಾಗಚೈತನ್ಯ (Nagachitanya) ಹೆಸರಿನ ಜೊತೆಗೂ ಅನುಷ್ಕಾ ಹೆಸರು ತಳಕು ಹಾಕಿಕೊಂಡಿತ್ತು. ನಾಗಚೈತನ್ಯ ಜೊತೆಗೆ ಅನುಷ್ಕಾ ಮದುವೆ ಆಗುತ್ತಾರೆ ಅನ್ನೋ ಸುದ್ದಿಯನ್ನು ಸಹಾ ಹಬ್ಬಿಸಿದ್ದರು ಎನ್ನುವ ಮಾತನ್ನ ನಾಗಾರ್ಜುನ ಹೇಳಿಕೊಂಡಿದ್ದಾರೆ. ಟಾಲಿವುಡ್ ನಲ್ಲಿ ನಾಗಚೈತನ್ಯ ಮತ್ತು ಅನುಷ್ಕಾ ಮದುವೆ ವಿಚಾರ ಆಗ ದೊಡ್ಡ ಸುದ್ದಿ ಆಗಿತ್ತು.

ಅವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂದೂ ವದಂತಿಗಳು ಹರಿದಾಡಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಆದರೆ ಅನಂತರ ಅವೆಲ್ಲವೂ ಕೇವಲ ಸುಳ್ಳು ಸುದ್ದಿಗಳು ಎನ್ನುವುದು ಸ್ಪಷ್ಟವಾಗಿತ್ತು. ಈಗ ಅದಕ್ಕೆ ಪೂರಕ ಎನ್ನುವಂತೆ ನಟ ನಾಗಾರ್ಜುನ ಸತ್ಯವಾದ ವಿಚಾರ ಏನು ಎನ್ನುವುದನ್ನು ಹೇಳಿದ್ದಾರೆ.

Leave a Comment