Naga Chaitanya: ಟಾಲಿವುಡ್ ನ ಮುದ್ದಾದ ಜೋಡಿ ಎಂದೇ ಹೆಸರನ್ನು ಪಡೆದಿದ್ದ ನಾಗಚೈತನ್ಯ (Nagachaitanya) ಮತ್ತು ಸಮಂತಾ (Samantha) ವಿಚ್ಚೇದನದ ವಿಚಾರ ಹೊರ ಬಂದಾಗ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಪ್ರೀತಿಸಿ ಮದುವೆಯಾದ ಜೋಡಿ ಹೀಗೆ ಬೇರೆ ಆಗೋದು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಇಬ್ಬರೂ ವಿಚ್ಚೇದನ (Divorce) ಪಡೆದು ದೂರವಾದರೂ ಸಹಾ ಅವರ ಈ ವಿಚ್ಚೇದನಕ್ಕೆ ಕಾರಣವೇನು ಅನ್ನೋದು ಮಾತ್ರ ಇದುವರೆಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.ಆದರೆ ಅವರ ವಿಚ್ಚೇದನಕ್ಕೆ ಕಾರಣ ಏನು ಎನ್ನುವ ವಿಚಾರವಾಗಿ ಒಂದಷ್ಟು ಸುದ್ದಿಗಳು ಹರಿದಾಡಿದ್ದವು.
ಈಗಲೂ ಸಹಾ ಇವರ ವಿಚ್ಚೇದನದ ಕುರಿತಾಗಿ ಒಂದಷ್ಟು ಕಥೆಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿ ಒಂದು, ನಾಗಚೈತನ್ಯ ಅವರು ಸಮಂತಾಗೆ ಮೋಸ ಮಾಡಿದ್ರು ಮಾಡಿರಬಹುದು ಅನ್ನೋ ಕಾರಣವೂ ಸಹಾ ಒಂದು. ಈಗ ಅದಕ್ಕೆ ಪೂರಕವಾಗಿರೋ ಒಂದು ವೀಡಿಯೋ ಸಹಾ ಹರಿದಾಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. 2018 ರಲ್ಲಿ ನಾಗ ಚೈತನ್ಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು.
ಅನು ಇಮ್ಯಾನ್ಯುಯೆಲ್ (Anu Immanuel) ಮತ್ತು ನಾಗಚೈತನ್ಯ ಇಬ್ಬರೂ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರನ್ನು ಸಂಬಂಧದಲ್ಲಿ ಯಾವಾಗಲಾದರೂ ಮೋಸ ಮಾಡಿದ್ದೀರಾ ಅಂತ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಅನು ಅವರು ನೋ ಅಂತ ಹೇಳಿದ್ರೆ ನಾಗಚೈತನ್ಯ ಅವರು ಮಾತ್ರ ಎಸ್ ಎನ್ನುವ ಮೂಲಕ ಎಲ್ಲರಿಗೂ ಶಾಕ್ ಅನ್ನು ನೀಡಿತ್ತು.
ಜೀವನದಲ್ಲಿ ಎಲ್ಲರೂ ಎಲ್ಲದರ ಅನುಭವವನ್ನ ಪಡೆಯಬೇಕು. ಆಗಲೇ ನೀವು ಬೆಳೆಯೋದು. ಅರ್ಥ ಮಾಡಿಕೊಳ್ಳೋದು. ನಾನು ಎಲ್ಲದರ ಅನುಭವವನ್ನು ಪಡೆದುಕೊಂಡಿದ್ದೇನೆ. ಆದರೆ ಈಗ ಸೆಟಲ್ ಆಗೋ ಸಮಯ ಎನ್ನುವ ಮಾತನ್ನ ನಾಗಚೈತನ್ಯ ಹೇಳಿದ್ರು. ಈ ಹಳೆಯ ವೀಡಿಯೋವನ್ನು ನೆಟ್ಟಿಗರು ಈಗ ಶೇರ್ ಮಾಡಿಕೊಂಡು, ನಾಗಚೈತನ್ಯ ಅವರ ಇಂತಹ ಒಂದು ಗುಣದಿಂದಲೇ ಸಮಂತಾ ಅವರಿಂದ ದೂರವಾದ್ರು ಅಂತ ಹೇಳ್ತಿದ್ದಾರೆ.