Mahanati Show: ಮಹಾನಟಿ ರಿಯಾಲಿಟಿ ಶೋ ನಲ್ಲಿ ಮುಂದಿನ ಹಂತಕ್ಕೆ ತಲುಪೋ ಸ್ಪರ್ಧಿಗಳು ಇವರೇನಾ?

Written by Soma Shekar

Published on:

---Join Our Channel---

Mahanati Show: ಕನ್ನಡ ಕಿರುತೆರೆಯಲ್ಲಿ ಹೊಚ್ಚಹೊಸದಂದು ಕಾನ್ಸೆಪ್ಟ್ ನೊಂದಿಗೆ ಆರಂಭವಾದ ರಿಯಾಲಿಟಿ ಶೋ ಮಹಾ ನಟಿ(Mahanati Show). ಈ ಕಾರ್ಯಕ್ರಮ ಆರಂಭವಾದ ನಂತರ ಪ್ರತಿಯೊಂದು ವಾರವೂ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಕಂಟೆಂಟ್ಗಳನ್ನು ಪ್ರೇಕ್ಷಕರ ಮುಂದೆ ತರುವ ಮೂಲಕ ಅದ್ಭುತವಾದ ಯಶಸ್ಸನ್ನು ಪಡೆದುಕೊಂಡಿದೆ. ಆರಂಭವಾಗಿ ಇನ್ನು ಕೆಲವೇ ವಾರಗಳಾಗಿದೆ ಎಂದು ಅನಿಸುತ್ತಿರುವಾಗಲೇ ಮಹಾನಟಿ ಕಾರ್ಯಕ್ರಮವು ಭರ್ಜರಿ 13 ವಾರಗಳನ್ನು ಪೂರೈಸಿ ಅಂತಿಮ ಘಟ್ಟದ ಕಡೆಗೆ ಹೆಜ್ಜೆಯನ್ನ ಹಾಕುತ್ತಿದೆ.

ಪ್ರಸ್ತುತ ಸ್ಪರ್ಧೆಯಲ್ಲಿರುವ 9 ಜನ ಸ್ಪರ್ಧಿಗಳು ಪ್ರತಿಭಾವಂತರೆಯಾಗಿದ್ದಾರೆ. ವಿಶೇಷ ಏನೆಂದರೆ ಯಾರ ಮುಖದಲ್ಲೂ ಭಯ, ಆತಂಕ ಅನ್ನೋದು ಕಾಣ್ತಿಲ್ಲ. ಒಬ್ಬರು ಮತ್ತೊಬ್ಬರ ಜೊತೆಗೆ ಪೈಪೋಟಿಗೆ ಇಳಿದಂತೆ ಎಲ್ಲೂ ಭಾಸವಾಗಿಲ್ಲ. ಪ್ರತಿ ವಾರ ತಮಗೆ ಸಿಗುವ ವಿಷಯಕ್ಕೆ ತಕ್ಕಂತೆ ಅದ್ಭುತವಾದ ಅಭಿನಯನವನ್ನು ನೀಡುವ ಕಡೆಗೆ ಪ್ರತಿಯೊಬ್ಬ ಸ್ಪರ್ದಿಯೂ ಗಮನವನ್ನು ಕೊಡುತ್ತಾ ಬಂದಿದ್ದು ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದೆ.

ಇನ್ನು ಈ ವಾರ ಬಹಳ ವಿಶೇಷ ಎನ್ನುವಂತೆ ವೇದಿಕೆ ಮೇಲೆ ನಟಿಸುತ್ತಿದ್ದ ಸ್ಪರ್ಧಿಗಳನ್ನು ಜನಪ್ರಿಯ ಸೀರಿಯಲ್ ಗಳಿಗೆ ಎಂಟ್ರಿ ಕೊಡಿಸಿದ್ದಾರೆ ಸೀತಾರಾಮ (SeethaRama), ಶ್ರಾವಣಿ ಸುಬ್ರಮಣ್ಯ (Shravani Subramanya), ಲಕ್ಷ್ಮೀ ನಿವಾಸ (Lakshmi Nivasa), ಸತ್ಯ, ಶ್ರೀರಸ್ತು ಶುಭಮಸ್ತು ಹೀಗೆ ಜನಪ್ರಿಯ ಧಾರಾವಾಹಿಗಳಲ್ಲಿ ಮಹಾನಟಿ ಸ್ಪರ್ಧಿಗಳು ಕಾಣಿಸಿಕೊಂಡು ಅದ್ಭುತವಾಗಿ ಅಭಿನಯಿಸಿ ಜಡ್ಜ್ ಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಈಗ ಇವೆಲ್ಲವುಗಳ ನಡುವೆ ಕ್ವಾರ್ಟರ್ ಫಿನಾಲೆ ದಾಟಿ ಮುಂದೆ ಹೋಗುವವರು ಯಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಪ್ರತಿವಾರ ಶೋ ಮಿಸ್ ಮಾಡದೇ ಮೋಡುತ್ತಾ ಬಂದಿರುವವರು ಗಗನಾ (Gagana), ಬಿಂದು ಹೊನ್ನಾಳಿ (Bindu Honnali), ಅಮೃತ, ಶ್ವೇತಾ ಭಟ್ ಮತ್ತು ಪ್ರಿಯಾಂಕ ಅವರೇ ಮುಂದಿನ ಹಂತಕ್ಕೆ ಹೋಗೋದು ಅಂತಿದ್ದಾರೆ. ಜನರ ಈ ಅನಿಸಿಕೆ ನಿಜವಾಗುತ್ತಾ ? ಕಾದು ನೋಡಬೇಕಾಗಿದೆ.

Leave a Comment