Bhavyashree: ಭೂಮಿ ಗುಂಡಗಿದೆ ಮತ್ತೆ ಸಿಗೋಣ ಎಂದು ಸೀರಿಯಲ್ ನಿಂದ ಹೊರ ಬಂದ ಜನಪ್ರಿಯ ನಟಿ; ಅಸಲಿಗೆ ಏನಾಯ್ತು?

Written by Soma Shekar

Published on:

---Join Our Channel---

Bhvyashree : ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಭವ್ಯಶ್ರೀ ಪೂಜಾರಿ (Bhvyashree) ಅವರು ಕಿರುತೆರೆ ಪ್ರೇಕ್ಷಕರಿಗೆ ಬಹಳ ಚಿರಪರಿಚಿತರಾದ ನಟಿಯಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸ್ಯಾಂಡಲ್ವುಡ್ ನ ಹಿರಿಯ ನಟ ರಮೇಶ್ ಅರವಿಂದ್ (Ramesh Arvind) ಅವರ ನಿರ್ಮಾಣದ ನೀನಾದೆ ನಾ (Neenade Naa) ಸೀರಿಯಲ್ ನಲ್ಲಿ ಭವ್ಯಶ್ರೀ ಅವರು ನಾಯಕನ ಅತ್ತಿಗೆ ಶೈಲು ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಈಗ ನಟಿ ತಾವು ಸೀರಿಯಲ್ ನಿಂದ ಹೊರ ಬಂದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಕೆಲವೊಂದು ವೈಯಕ್ತಿಕ ಕಾರಣಗಳಿಂದ ತಾನು ನೀನಾದೆ ನಾ ಸೀರಿಯಲ್ ನ ಶೈಲು ಪಾತ್ರದಿಂದ ಹೊರ ಬಂದಿರುವ ವಿಚಾರವನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಈ ವಿಚಾರವಾಗಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರ ಜೊತೆಗೆ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದು, ಅದರಲ್ಲಿ ತಾವು ಸೀರಿಯಲ್ ಬಿಟ್ಟು ಹೊರ ನಡೆದಿರುವ ವಿಷಯದ ಮಾಹಿತಿಯನ್ನು ನೀಡಿದ್ದಾರೆ.

ನಟಿಯು ತಮ್ಮ ಪೋಸ್ಟ್ ನಲ್ಲಿ, ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿಯಲ್ಲಿ ನನ್ನ ‘ಶೈಲೂ’ ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ… ಇದೀಗ ನನ್ನ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ.

ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್ ಅರವಿಂದ್ ಸರ್ ಮತ್ತು ಸ್ಟಾರ್ ಸುವರ್ಣಗೆ ಹೃದಯಂತರಾಳದ ಧನ್ಯವಾದಗಳು. ನನ್ನ ಈ ಪಯಣದಲ್ಲಿ ಜೊತೆಯಾದ ಧಾರಾವಾಹಿಯ ಎಲ್ಲಾ ತಾಂತ್ರೀಕ ಕುಟುಂಬಕ್ಕೆ ಹಾಗೂ ಕಲಾವಿದ ಸ್ನೇಹಿತರಿಗೆ ನನ್ನ ನಮನ. ಇಷ್ಟು ದಿನ ನೀವೆಲ್ಲರೂ ನನ್ನ ‘ಶೈಲೂ’ ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ.

ಭೂಮಿ ದುಂಡಗಿದೆ…ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೆನೆ. ಆಗ ಮತ್ತೆ ಭೇಟಿಯಾಗೋಣ.. ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟಿಯು ತಾವು ನೀನಾದೆ ನಾ ಸೀರಿಯಲ್ ನಿಂದ ಹೊರ ಬಂದಿರುವ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Leave a Comment