Tejaswi Madivada: ಅಂತದ್ದು ತೋರ್ಸಿ ನನ್ನ ಜೀವನ ಹಾಳು ಮಾಡಿದ: ರಾಮ್ ಗೋಪಾಲ್ ವರ್ಮಾ ಮೇಲೆ ನಟಿ ಆರೋಪ

Written by Soma Shekar

Published on:

---Join Our Channel---

Tejaswi Madivada : ಟಾಲಿವುಡ್ (Tollywood) ನಟಿ ತೇಜಸ್ವಿ ಮಡಿವಾಡ (Tejaswi Madivada) ಈಗಾಗಲೇ ಒಂದಷ್ಟು ಜನ ಸ್ಟಾರ್ ಹೀರೋಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದಲ್ಲದೇ ಬಿಗ್ ಬಾಸ್ ನಲ್ಲಿ (Bigg Boss) ಸ್ಪರ್ಧಿಯಾಗಿ ಭಾಗವಹಿಸಿ ಮತ್ತಷ್ಟು ಹೆಸರುವಾಸಿಯಾಗಿದ್ದಾರೆ. ಎಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಂಡರೂ ಸಹಾ ಇತ್ತೀಚಿನ ದಿನಗಳಲ್ಲಿ ಈ ನಟಿಗೆ ಸಿನಿಮಾಗಳಿಂದ ಯಾವುದೇ ಆಫರ್‌ ಗಳು ಸಿಗದ ಕಾರಣ ನಟಿ ಕೈಯಲ್ಲಿ ಕೆಲಸವಿಲ್ಲದೇ ಕುಳಿತಿದ್ದಾರೆ.

ಇತ್ತೀಚೆಗೆ ನಟಿ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿ ತೇಜಸ್ವಿ ತಮ್ಮ ಜೀವನದ ಇಂತಹುದೊಂದು ಸಮಸ್ಯೆಗೆ ಕಾರಣಗಳಾದರೂ ಏನು ಎನ್ನುವ ವಿಚಾರಗಳನ್ನು ಅವರು ಬಹಿರಂಗ ಪಡಿಸುತ್ತಾ ಶಾಕಿಂಗ್ ವಿಚಾರಗಳನ್ನು ತಿಳಿಸಿದ್ದಾರೆ. ನಟಿಯು ಮಾತನಾಡುತ್ತಾ, ನಾನು ವೃತ್ತಿ ಜೀವನದಲ್ಲಿ ನಾನು ಸಾಕಷ್ಟು ರೋಮ್ಯಾಂಟಿಕ್ ದೃಶ್ಯಗಳಲ್ಲಿ ಮತ್ತು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇ‌ನೆ.‌ ಆದರೆ ಆರ್ ಜಿ ವಿ (Ram Gopal Varma) ನಿರ್ದೇಶನದ ಐಸ್ ಕ್ರೀಂ ಸಿನಿಮಾ ಮಾಡುವಾಗ ಅದರಲ್ಲಿ ನನ್ನ ನ್ಯೂಡ್ ಫೋಟೋವೊಂದು ಹೊರಬಿದ್ದಿತ್ತು.

ಸುಮಾರು 10 ವರ್ಷಗಳ ಹಿಂದೆ ಆ ಫೋಟೋ ವೈರಲ್ ಆಗಿದ್ದರಿಂದ, ನಾನು ಮಾಡಿದ ದೃಶ್ಯವು ತಪ್ಪು ಅರ್ಥದಲ್ಲಿ ಜನರ ಮುಂದೆ ಪ್ರೊಜೆಕ್ಟ್ ಆಯಿತು. ಏಕೆಂದರೆ ಸೆನ್ಸಾರ್ ಮಂಡಳಿ ಅಂತ ಸೀನ್ ಗಳನ್ನು ಪ್ರದರ್ಶನ ಮಾಡದಂತೆ ನಿರ್ಬಂಧ ಹೇರುತ್ತದೆ. ಸಿನಿಮಾದಲ್ಲಿ ನ್ಯೂಡ್ ಸೀನ್ ಗಳನ್ನು ಹಾಕುವಂತಿಲ್ಲ ಎನ್ನುವ ಕಾರಣಕ್ಕೆ ಹಾಗೆ ಮಾಡ್ತಾರೆ. ಆದರೆ ಆರ್‌ ಜಿ ವಿ ಬಿಡುಗಡೆ ಮಾಡಿದ ನಗ್ನ ಫೋಟೋದಿಂದ ಸಾಕಷ್ಟು ಸಮಸ್ಯೆ ಆಯ್ತು.

ಆ ಫೋಟೋ ಎಲ್ಲೆಡೆ ಹರಿದಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತಾಗಿ ಬಂದಂತಹ ಲೇಖನಗಳು ನನ್ನ ಮತ್ತು ನನ್ನ ವೃತ್ತಿಜೀವನದ ಮೇಲೆ ತೀರಾ ಕೆಟ್ಟ ಪರಿಣಾಮವನ್ನು ಬೀರಿದವು. ಅಲ್ಲಿಯವರೆಗೂ ಪಕ್ಕದ್ಮನೆ ಹುಡುಗಿ ಅಂತ ಇದ್ದ ನನ್ನ ಇಮೇಜ್ ಅನ್ನ ಅವರು ಸಂಪೂರ್ಣವಾಗಿ ಡ್ಯಾಮೇಜ್ ಮಾಡಿದರು. ಒಂದು ಲೇಖನದಿಂದಾಗಿ ರಾತ್ರೋರಾತ್ರಿ ನಾಯಕಿಯಾಗಿದ್ದ ನಾನು ಪೋಷಕ ಪಾತ್ರಗಳಿಗೆ ಬಂದು ಬಿಟ್ಟೆ ಎಂದು ತೇಜಸ್ವಿ ಬೇಸರ ಹೊರಹಾಕಿದ್ದಾರೆ.

Leave a Comment