Bollywood Actress: ನಾನಿನ್ನು ತಾಯಿ ಆಗಲ್ಲ ಅಂತಾನೇ ಸಲ್ಮಾನ್ ಖಾನ್ ಗೆ ಧನ್ಯವಾದ ಹೇಳಿದ ಬಾಲಿವುಡ್ ನಟಿ

Written by Soma Shekar

Published on:

---Join Our Channel---

Bollywood Actress: ಬಾಲಿವುಡ್ ನಲ್ಲಿ (Bollywood Actress) ಡ್ರಾಮಾ ಕ್ವೀನ್‌ ಅಂತಾನೇ ಹೆಸರನ್ನು ಪಡೆದಿರುವ ನಟಿ ಹಾಗೂ ಡ್ಯಾನ್ಸರ್ ಆಗಿ ಹೆಸರನ್ನ ಪಡೆದಿರುವ ರಾಖಿ ಸಾವಂತ್ (Rakhi Sawant) ಹೆಚ್ಚು ಜನಪ್ರಿಯತೆ ಪಡೆದಿರುವುದು ಮಾತ್ರ ತಾನು ನೀಡುವ ಚಿತ್ರ ವಿಚಿತ್ರ ಹೇಳಿಕೆಗಳಿಂದ ಹಾಗೂ ವಿವಾದಗಳಿಂದ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮದುವೆ, ಅಫೇರ್, ವಿಚ್ಚೇದನ, ಬಿಗ್ ಬಾಸ್ ಶೋ ಹೀಗೆ ಒಂದಲ್ಲಾ ಒಂದು ವಿಚಾರವಾಗಿ ರಾಖಿ ಸುದ್ದಿಗಳಲ್ಲಿ ಇರುವುದು ಸಾಮಾನ್ಯ.

ಈಗ ರಾಖಿ ಮಾದ್ಯಮಗಳ ಮುಂದೆ ಒಂದು ಹೊಸ ಹಾಗೂ ನೋವಿನ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಾತೃತ್ವ ಅನ್ನೋದೊಂದು ದೊಡ್ಡ ವರ. ಎಲ್ಲರಿಗೂ ದೇವರು ಆ ಅದೃಷ್ಟವನ್ನ ಕೊಡೋದಿಲ್ಲ. ಅದಕ್ಕೆ ತಾಯಿ ಆಗೋದಕ್ಕೆ ದೇವರಿಗೆ ನಾನಾ ರೀತಿಯ ಪೂಜೆಗಳನ್ನು ಕೂಡಾ ಮಾಡ್ತಾರೆ. ಸಾಮಾನ್ಯ ಮಹಿಳೆಯರಿಂದ, ಸೆಲೆಬ್ರಿಟಿಗಳವರೆಗೆ ಮದುವೆ ನಂತರ ತಾಯಿ ಆಗಿ ಮಗು ಪಡೆಗೋಕೆ ಕಾತುರದಿಂದ ಕಾಯ್ತಾರೆ.

ಆದರೆ ಈಗ ನನ್ನ ಜೀವನದಲ್ಲಿ ನನಗೆ ಅಂತದೊಂದು ಅದ್ಭುತವಾದ ಅವಕಾಶ ಕೈತಪ್ಪಿ ಹೋಗಿದೆ ಅನ್ನೋ ವಿಚಾರವನ್ನು ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ.‌ ನಟಿಯು ತಾನು ಮಾತೃತ್ವ ಭಾಗ್ಯವನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ… ಸ್ವತಃ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ರಾಖಿ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.

ತನ್ನ ಹೊಟ್ಟೆಯಲ್ಲಿ ಟ್ಯೂಮರ್ ಇತ್ತು ಶಸ್ತ್ರ ಚಿಕಿತ್ಸೆ ಮಾಡಿ ಅದನ್ನ ತೆಗೆದರು. ಅನಂತರ ವೈದ್ಯರು ನಾನು ಇನ್ನೆಂದೂ ತಾಯಿ ಆಗುವುದಿಲ್ಲ ಎನ್ನುವ ಮಾತನ್ನು ಹೇಳಿದಾಗ ನನಗೆ ಬಹಳ ನೋವಾಯಿತು ಎಂದಿರುವ ರಾಖಿ ತಾನು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಬಯಸುವುದಾಗಿ ಹೇಳಿದ್ದಾರೆ.

ಇದೇ ವೇಳೆ ನಟಿಯು ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ ಶಸ್ತ್ರ ಚಿಕಿತ್ಸೆಗೆ ಆದ ಬಿಲ್ ಅನ್ನು ಸಲ್ಮಾನ್ ಖಾನ್ (Salman Khan) ಅವರೇ ಪಾವತಿ ಮಾಡಿದ್ದಾರೆ. ಅವರ ಈ ಸಹಾಯವನ್ನು ನಾನು ಎಂದೂ ಕೂಡಾ ಮರೆಯುವುದಿಲ್ಲ ಎನ್ನುವ ಮಾತನ್ನು ಸಹಾ ರಾಖಿ ಸಾವಂತ್ ಹೇಳಿದ್ದಾರೆ.

Leave a Comment