Kaustubha Mani: ಮದುವೆಯ ಖುಷಿಯಲ್ಲಿ ಲಿಪ್ ಲಾಕ್ ಫೋಟೋ ಶೇರ್ ಮಾಡಿದ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ

Written by Soma Shekar

Published on:

---Join Our Channel---

Kaustubha Mani: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕೌಸ್ತುಭ ಮಣಿ (Kaustubha Mani) ಅವರು ಸದ್ಯಕ್ಕಂತೂ ತಮ್ಮ ಮದುವೆಯ ವಿಚಾರವಾಗಿ ಖುಷಿ ಮತ್ತು ಸಂಭ್ರಮದಲ್ಲಿ ಇದ್ದಾರೆ. ಶೀಘ್ರದಲ್ಲೇ ಸಪ್ತಪದಿಯ‌ನ್ನ ತುಳಿಯಲು ನಟಿ ಸಜ್ಜಾಗಿದ್ದು ಅವರ ಮನೆಯಲ್ಲಿ ಮದುವೆ ಸಿದ್ಧತೆಗಳು ಬಹಳ ಜೋರಾಗಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಹಂಚಿಕೊಂಡಿರುವ ಹೊಸ ಫೋಟೋಗಳೀಗ ವೈರಲ್ ಆಗಿದ್ದು ಇದು ಎಲ್ಲರ ಗಮನವನ್ನು ಸೆಳೆಯುವ ಜೊತೆಗೆ, ಅನೇಕರು ಅಚ್ಚರಿಯನ್ನು ಸಹಾ ವ್ಯಕ್ತಪಡಿಸಿದ್ದಾರೆ.

ನನ್ನರಸಿ ರಾಧೆ (Nannarasi Radhe) ಸೀರಿಯಲ್ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡ ನಟಿ ಕೌಸ್ತುಭ ಮಣಿಯವರು ಅನಂತರ ಗೌರಿ ಶಂಕರ ಸೀರಿಯಲ್ ನಲ್ಲೂ ನಟಿಸುತ್ತಿದ್ದರಾದರೂ, ಕೆಲವು ದಿನಗಳ ನಂತರ ಅವರು ತಮ್ಮ ಪಾತ್ರದಿಂದ ಹೊರ ಬಂದಿದ್ದರು. ನಟಿಯ ಮನೆಯಲ್ಲಿ ಮದುವೆ ಸಿದ್ಥತೆಗಳು ಜೋರಾಗಿ ನಡೆಯುವಾಗಲೇ ನಟಿ ತಮ್ಮ ಭಾವೀ ಪತಿ ಸಿದ್ಧಾಂತ್ ಸತೀಶ್ ಅವರ ಜೊತೆಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ.

ಪ್ರೀ ವೆಡ್ಡಿಂಗ್ ಶೂಟ್ ನಲ್ಲಿ ಬಗೆಬಗೆಯ ಪೋಸ್ ಗಳನ್ನು ನೀಡಿರುವ ನಟಿ, ತಮ್ಮ ಭಾವೀ ಪತಿಯ ಜೊತೆಗೆ ರೊಮ್ಯಾಂಟಿಕ್ ಮೂಡ್ ಗೆ ಜಾರಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಕೌಸ್ತುಭ ಮಣಿ ಅವರ ನಿಶ್ಚಿತಾರ್ಥವು ಸಾಫ್ಟ್‌ವೇರ್ ಡೆವಲಪರ್ ಆಗಿರುವ ಸಿದ್ಧಾಂತ್ ಸತೀಶ್ (Siddhant Satish) ಅವರ ಜೊತೆ ಅದ್ದೂರಿಯಾಗಿ ನಡೆದಿತ್ತು. ನಟಿ ಆಗ ನಿಶ್ಚಿತಾರ್ಥದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ನಟಿ ಅರ್ಜುನ್ ಜನ್ಯಾ 45 ಸಿನಿಮಾದಲ್ಲೂ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಆದಷ್ಟು ಮುಗಿದಿದೆ ಎನ್ನಲಾಗಿದೆ. ಗೌರಿ ಶಂಕರ ಸೀರಿಯಲ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ತಮ್ಮ ಕೆಲಸದ ಕಮಿಟ್ಮೆಂಟ್ ಗಳ ಕಾರಣದಿಂದ ಸೀರಿಯಲ್ ನಿಂದ ಹೊರಗೆ ಬಂದಿದ್ದರು. ಅದರ ನಡುವೆಯೇ ಅವರ ಮದುವೆ ಫಿಕ್ಸ್ ಆಗಿದ್ದು, ಶೀಘ್ರದಲ್ಲೇ ನಟಿ ಸಪ್ತಪದಿ ತುಳಿಯಲಿದ್ದಾರೆ.

Leave a Comment