Balakrishna: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್, ಆಕ್ರೋಶಗೊಂಡ ನಂದಮೂರಿ ಬಾಲಕೃಷ್ಣ ರಿಯಾಕ್ಷನ್ ಕಂಡು ಬೆಚ್ಚಿದ ಜನ

Written by Soma Shekar

Published on:

---Join Our Channel---

Balakrishna: ಸಿನಿಮಾ ಸೆಲೆಬ್ರಿಟಿಗಳಿಗೆ ಅಭಿಮಾನಿಗಳೇ ಅವರ ಸ್ಟಾರ್ ಡಂನಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಶಕ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಟರು ತಮ್ಮ ಅಭಿಮಾನಿಗಳ ಮೇಲೆ ಅಸಹನೆಗೊಳ್ಳುವುದು ಸಹಾ ವಾಸ್ತವ. ತೆಲುಗು ಸಿನಿಮಾ ರಂಗದ ಹಿರಿಯ ನಟ ಹಿಂದೂಪುರದ ಎಂಎಲ್ಎ ಕೂಡ ಆಗಿರುವ ನಂದಮೂರಿ ಬಾಲಕೃಷ್ಣ (Balakrishna) ಅವರಿಗೆ ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ ಡಂ ಇದೆ.ಬಾಲಕೃಷ್ಣ ಅವರಿಗೆ ದೊಡ್ಡ ಅಭಿಮಾನಿಗಳ ಬಳಗ ಇದೆ.

ಆದರೆ ಈ ನಟ ಕೆಲವೊಂದು ಸಂದರ್ಭಗಳಲ್ಲಿ ಅಭಿಮಾನಿಗಳ ಮೇಲೆ ಕೋಪವನ್ನು ಮಾಡಿಕೊಂಡ ಘಟನೆಗಳ ವಿಚಾರವಾಗಿಯೂ ಕೂಡಾ ಸುದ್ದಿಯಾಗುವ ಮೂಲಕ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗುತ್ತಾರೆ. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು ಮತ್ತೊಂದು ಸಲ ಬಾಲಕೃಷ್ಣ ಅವರು ಅಭಿಮಾನಿಯ ಮೇಲೆ ಕೈ ಮಾಡಿದ್ದಾರೆ.

ಸತ್ಯಸಾಯಿ ಜಿಲ್ಲೆಯ ಕದ್ರಿಯಲ್ಲಿ (Kadri) ಬಾಲಕೃಷ್ಣ ಅವರು ಚುನಾವಣಾ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಪ್ರಚಾರದ ಭಾಗವಾಗಿ ಅವರು ಹೆಲಿಕ್ಯಾಪ್ಟರ್ ನಲ್ಲಿ ಕದ್ರಿಯನ್ನ ತಲುಪಿದ್ದರು. ಹೆಲಿಕ್ಯಾಪ್ಟರ್ ಲ್ಯಾಂಡ್ ಆದ ನಂತರ ಸಾಕಷ್ಟು ಜನ ಅಭಿಮಾನಿಗಳು ತಮ್ಮ ಅಭಿಮಾನ ನಟನನ್ನು ನೋಡುವುದಕ್ಕಾಗಿ ಅವರ ಹತ್ತಿರಕ್ಕೆ ಬಂದಿದ್ದಾರೆ. ಈ ವೇಳೆ ಒಬ್ಬ ಅಭಿಮಾನಿಯು ಸೆಲ್ಫಿಯನ್ನು ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾನೆ.

ಈ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಂಡ ಬಾಲಕೃಷ್ಣ ಅವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ವ್ಯಕ್ತಿಯ ಮೇಲೆ ಕೈ ಮಾಡಿದ್ದಾರೆ, ಅಷ್ಟೇ ಅಲ್ಲದೇ ಅಭಿಮಾನಿಗಳ ಮೇಲೆ ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸ್ವರ್ಣಾಂಧ್ರ ಸಹಕಾರ ಯಾತ್ರ ಹೆಸರಿನಲ್ಲಿ ಅನಂತಪುರಂ ಜಿಲ್ಲೆಯಲ್ಲಿ ಬಾಲಕೃಷ್ಣ ಅವರು ಇಂದಿನಿಂದ ಎರಡು ದಿನಗಳ ಕಾಲ ಬಸ್ಸಿನಲ್ಲಿ ಯಾತ್ರೆಯನ್ನ ಮಾಡಲಿದ್ದು, ಕದ್ರಿಯಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ತಮ್ಮ ಪ್ರಯಾಣ ಆರಂಭಿಸಿದ್ದಾರೆ.

Leave a Comment