Aishwarya : ನಾನು ಮತ್ತು ನನ್ನ ಚಿಕ್ಕಪ್ಪ ಮಾಡಿರುವಂತಹ ಕೆಲಸಗಳನ್ನು ಜನರಿಗೆ ತಿಳಿಸುವ ಸಲುವಾಗಿ ನಾನು ಕೊರಿಯರ್ ಗರ್ಲ್ ಆಗಿ ಪ್ರಚಾರವನ್ನು ಮಾಡಿದ್ದೇನೆ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಮಗಳು ಐಶ್ವರ್ಯಾ ಅವರು ಹೇಳಿದ್ದಾರೆ. ನಿನ್ನೆ ಮತದಾನದ ನಂತರ ಮಾದ್ಯಮಗಳ ಮುಂದೆ ಮಾತನಾಡಿದ ಐಶ್ವರ್ಯ ಅವರು ಒಂದಷ್ಡು ವಿಚಾರಗಳನ್ನು ಹಂಚಿಕೊಂಡಿದ್ದು, ಅವರಾಡಿದ ಮಾತುಗಳು ಸುದ್ದಿಯಾಗಿದೆ.
ಚುನಾವಣಾ ಕಣದಲ್ಲಿದ್ದ ತಮ್ಮ ಚಿಕ್ಕಪ್ಪನ ಪರವಾಗಿ ಐಶ್ವರ್ಯ (Aishwarya) ಅವರು ಅಪಾರ್ಟ್ ಮೆಂಟ್ ಗಳಲ್ಲಿ ಮತಪ್ರಚಾರವನ್ನು ಮಾಡಿದ್ದರು. ಈ ಕುರಿತಾಗಿ ಅವರು ಮಾದ್ಯಮಗಳ ಮುಂದೆ ಮಾತಾಡುತ್ತಾ, ಕೆಲವೊಂದು ಸಲ ನಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಅನ್ನೋದನ್ನ ನಾವು ಮರೆತಿರುತ್ತೇವೆ. ಹೀಗಾಗಿ ನಾನು ಕೊರಿಯರ್ ಗರ್ಲ್ ಆಗಿ ಅವರು ಮಾಡಿರೋ ಕೆಲಸಗಳನ್ನು ಜನಕ್ಕೆ ತಿಳಿಸುವ ಕೆಲಸವನ್ನು ಮಾಡಿದ್ದೇನೆ ಎಂದಿದ್ದಾರೆ.
ನಮ್ಮ ಸಂಸದನ ಮೇಲೆ ನನಗೂ ಹೆಮ್ಮೆ ಇದೆ. ಅವರು ಮಾಡಿರುವ ಕೆಲಸದ ಮೇಲೆ ಮಗಳಿಗಿಂತ ಹೆಚ್ಚಾಗಿ ಒಬ್ಬ ವಿದ್ಯಾವಂತೆಯಾಗಿ ನನಗೆ ಗೊತ್ತಿರೋದನ್ನ ಜನಕ್ಕೆ ಹೇಳೋದು ನನ್ನ ಕರ್ತವ್ಯ ಎಂದುಕೊಂಡು ಹೋಗಿ ಪ್ರಚಾರವನ್ನು ಮಾಡಿದ್ದೇನೆ. ಈ ಪ್ರಚಾರಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತೆ. ಚಿಕ್ಕಪ್ಪ ಗೆದ್ದೇ ಗೆಲ್ತಾರೆ ಎನ್ನುವ ಆತ್ಮವಿಶ್ವಾಸ ಕುಟುಂಬಕ್ಕಿದೆ.
ಇದೇ ವೇಳೆ ಅವರು ಮತದಾನ ಎನ್ನುವುದು ಹಕ್ಕು ಪ್ರತಿಯೊಬ್ಬರು ಬಂದು ತಮ್ಮ ಹಕ್ಕನ್ನು ಚಲಾಯಿಸಿ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದರು. ಮುಂದೆ ಏನಾದ್ರು ತಪ್ಪು ಮಾಡಿದ್ರೆ ಆಗ ಪ್ರಶ್ನೆ ಮಾಡುವ ಹಕ್ಕಿರುತ್ತದೆ ಎಂದು ಸಹಾ ಹೇಳಿದ್ದರು. ನಿನ್ನೆ ಕರ್ನಾಟಕದಲ್ಲಿ ಮೊದಲ ನಂತರ ಚುನಾವಣೆ ನಡೆದಿದೆ. ಹಲವು ಸೆಲೆಬ್ರಿಟಿಗಳು ಮತದಾನ ಮಾಡಿ, ಎಲ್ಲರೂ ಮತದಾನ ಮಾಡುವಂತೆ ಮನವಿಯನ್ನು ಮಾಡಿದ್ದರು.