Actor Yash: ಕೆಜಿಎಫ್ 2 (KGF 2) ಸಿನಿಮಾ ಶುರು ಆದಾಗಿನಿಂದಲೂ ನಟ ಯಶ್ (Actor Yash) ಅವರು ತಮ್ಮ ಹೇರ್ ಸ್ಟೈಲ್ ನಲ್ಲಿ ಏನೂ ಬದಲಾವಣೆ ಮಾಡಿಕೊಂಡಿರಲಿಲ್ಲ. ಅವರು ತಮ್ಮ ತಲೆ ಕೂದಲಿಗೆ ಕತ್ತರಿ ಹಾಕಿರಲಿಲ್ಲ. ಅದೇ ಸ್ಟೈಲ್ ನಲ್ಲೇ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದರು. ಕೆಜಿಎಫ್ ಸಿನಿಮಾದ ಲುಕ್ ನಲ್ಲೇ ಇದ್ದರು ರಾಕಿಂಗ್ ಸ್ಟಾರ್. ಆದರೆ ಈಗ ನಟ ತಮ್ಮ ಹೊಸ ಸಿನಿಮಾ ಟಾಕ್ಸಿಕ್ ಗಾಗಿ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.
ಅವರ ಈ ಹೊಸ ಲುಕ್ ಈಗ ಅಭಿಮಾನಿಗಳ ಮುಂದೆ ಬಂದಿದೆ. ನಟ ಯಶ್ ಅವರು ತಮ್ಮ ಪತ್ನಿ ರಾಧಿಕಾ ಜೊತೆಗೆ ಅನಂತ್ ಅಂಬಾನಿ (Anant Ambani), ರಾಧಿಕಾ ಮರ್ಚೆಂಟ್ (Radhika Merchant) ಮದುವೆಗೆ ಹಾಜರಾಗಲು ಮುಂಬೈಗೆ ತೆರಳಿದ್ದಾರೆ. ಅಂಬಾನಿ ಪುತ್ರನ ಮಗನ ಮದುವೆಯ ವಿಚಾರವು ಮೊದಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆದಾಗಿನಿಂದಲೂ ಸಹಾ ಸುದ್ದಿಯಾಗುತ್ತಲೇ ಇದೆ.
ಈಗ ಮುಂಬೈನಲ್ಲಿ ನಡೆಯುತ್ತಿರುವ ವಿವಾಹ ಸಮಾರಂಭಕ್ಕೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು, ಸಿನಿಮಾ ಹಾಗೂ ಕ್ರೀಡಾ ತಾರೆಗಳು ಅನಂತ್ ಮತ್ತು ರಾಧಿಕಾ ಮದುವೆಗೆ ಹಾಜರಾಗುವ ಮೂಲಕ ಎಲ್ಲೆಲ್ಲೂ ಇವರದ್ದೇ ಸುದ್ದಿಗಳು ಹರಿದಾಡುತ್ತಿವೆ.
ಭಾರತದ ಅತ್ಯಂತ ದುಬಾರಿ ಮದುವೆ ಎನಿಸಿರುವ ಅನಂತ್ ರಾಧಿಕಾ ಮದುವೆಗೆ ಹಾಜರಾಗಲು ಹಾಗೇ ರಾಮಾಯಣ ಸಿನಿಮಾದಲ್ಲಿ ನಟಿಸುವ ಕುರಿತಾಗಿ ಮಾತುಕತೆಯನ್ನು ನಡೆಸಲು ಯಶ್ ಅವರು ಮುಂಬೈ ತಲುಪಿದ್ದಾರೆ. ಮುಂಬೈನಲ್ಲಿ ಕ್ಯಾಮರಾ ಕಣ್ಣುಗಳಿಗೆ ಕಾಣಿಸಿಕೊಂಡ ಯಶ್ ಅವರು ತಮ್ಮ ಹೊಸ ಲುಕ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.