Mollywood : ಮಾಲಿವುಡ್ ನ (Mollywood) ಇತ್ತೀಚಿನ ಬ್ಲಾಕ್ ಬಸ್ಟರ್ ಗಳಲ್ಲಿ ಮಂಜುಮ್ಮೆಲ್ ಬಾಯ್ಸ್ (Manjummel Boys) ಕೂಡಾ ಸೇರಿದೆ. ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಕಮಾಲ್ ಮಾಡಿದೆ. ಸಿನಿಮಾ ಕಥೆ ನೈಜ ಘಟನೆಯಾಧಾರಿತ ಎನ್ನಲಾಗಿದ್ದು, ಸಿನಿ ಪ್ರೇಮಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ಮುಂದೆ ಓಡುತ್ತಾ, ಬರೋಬ್ಬರಿ 200 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ.
ಈ ಸಿನಿಮಾ ಮಲೆಯಾಳಂ ಮಾತ್ರವೇ ಅಲ್ಲದೇ ಅನ್ಯ ಭಾಷೆಯ ಸಿನಿ ಪ್ರೇಮಿಗಳ ಮೆಚ್ಚುಗೆಗಳನ್ನು ಸಹಾ ಪಡೆದುಕೊಂಡಿದ್ದು ಮತ್ತೊಂದು ವಿಶೇಷ. ಮೊದಲು ಥಿಯೇಟರ್ ನಲ್ಲಿ ಅನಂತರ ಓಟಿಟಿಯಲ್ಲಿ ಎರಡೂ ಕಡೆ ಸಿನಿಮಾ ಸಕ್ಸಸ್ ಪಡೆದುಕೊಂಡಿದೆ. ಇಷ್ಟೆಲ್ಲಾ ಸದ್ದು ಸುದ್ದಿ ಮಾಡಿದ ಸಿನಿಮಾಕ್ಕೆ ಒಂದು ಕಂಟಕ ಎದುರಾಗಿತ್ತು. ಸಿನಿಮಾ ಮೇಲೆ ಸಂಗೀತ ನಿರ್ದೇಶಕ ಇಳಯರಾಜ ಅವರ ಅಸಮಾಧಾನಗೊಂಡಿದ್ದರು.
ಈ ಸಿನಿಮಾದಲ್ಲಿ ತೊಂಬತ್ತರ ದಶಕದ ಗುಣ ಸಿನಿಮಾದಲ್ಲಿ ಇಳಯರಾಜ (Ilayaraja) ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಮೆಲೋಡಿ ಕಣ್ಮಣಿ ಹಾಡನ್ನ ಬಳಸಿಕೊಂಡಿದ್ದರು. ಹಾಡನ್ನ ಬಳಸಿಕೊಳ್ಳುವ ಮೊದಲು ಚಿತ್ರತಂಡ ಇಳಯರಾಜ ಅವರ ಅನುಮತಿಯನ್ನು ಪಡೆದುಕೊಂಡಿರಲಿಲ್ಲ. ತನ್ನ ಅನುಮತಿಯಿಲ್ಲದೇ ಹಾಡು ಬಳಸಿಕೊಂಡಿದ್ದರೆ ಎರಡು ಕೋಟಿ ಪರಿಹಾರ ಕೇಳಿ ಇಳಯರಾಜ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಈಗ ಕೊನೆಗೂ ಈ ವಿವಾದಕ್ಕೆ ತೆರೆ ಬಿದ್ದಿದೆ. ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡವು ಎರಡು ಕೋಟಿ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದ ಇಳಯರಾಜ ಅವರಿಗೆ 60 ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಪ್ರಕರಣವನ್ನು ಕೊನೆಗೊಳಿಸಿದೆ. ಕಾನೂನು ಹೋರಾಟದ ಬದಲು ಮಾತುಕತೆಯ ಮೂಲಕವೇ ಪ್ರಕರಣಕ್ಕೊಣಕ್ಕೊಂದು ಸುಖಾಂತ್ಯವನ್ನು ಕಂಡುಕೊಂಡಿದ್ದಾರೆ.
Mohan Lal: ವಯನಾಡು ದುರಂತ, ಸ್ಥಳಕ್ಕೆ ಧಾವಿಸಿದ ನಟ, ಲೆಫ್ಟಿನೆಂಟ್ ಕರ್ನಲ್ ಮೋಹನ್ ಲಾಲ್, ₹3 ಕೋಟಿ ನೆರವು ಕೊಟ್ಟ ನಟ