Kannada Serial TRP: ಊಹಿಸಿರದ ಹೊಸ ಸೀರಿಯಲ್ ಗೆ ಭರ್ಜರಿ TRP; ನಿಮ್ಮ ಮೆಚ್ಚಿನ ಸೀರಿಯಲ್ಗೆ ಯಾವ ಸ್ಥಾನ ?

Written by Soma Shekar

Published on:

---Join Our Channel---

Kannada Serial TRP: ಕನ್ನಡ ಕಿರುತೆರೆ ಎಂದಾಗ ಮೊದಲು ನೆನಪಾಗುವುದು ಸೀರಿಯಲ್ ಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊಸ ಹೊಸ ಸೀರಿಯಲ್ ಗಳು ಪ್ರಸಾರ ಆರಂಭಿಸಿವೆ ಮತ್ತೊಂದು ಕಡೆ ಹಳೆ ಸೀರಿಯಲ್ ಗಳು ಯಶಸ್ಸಿನ ಹಾದಿಯಲ್ಲಿ ತಮ್ಮ ಓಟ ಮುಂದುವರೆಸಿದೆ. ಈಗ 25 ನೇ ವಾರದ ಟಿ ಆರ್ ಪಿ (Kannada Serial TRP) ವಿವರವು ಸಿಕ್ಕಿದ್ದು, ಯಾವ ಸೀರಿಯಲ್ ಯಾವ ಸ್ಥಾನದಲ್ಲಿದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಹೊಸ ಸೀರಿಯಲ್ ಗಳು ಎಷ್ಟೇ ಬಂದರೂ ಕೂಡಾ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಹಿಂದಿಕ್ಕಲು ಆಗಿಲ್ಲ. ಸೀರಿಯಲ್ ಹಲವು ಟ್ವಿಸ್ಟ್ ಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಪರಿಣಾಮವಾಗಿ ಈ ವಾರವೂ ಸಹಾ ಪುಟ್ಟಕ್ಕನ ಮಕ್ಕಳು ಮೊದಲನೇ ಸ್ಥಾನದಲ್ಲೇ ಮುಂದುವರೆದಿದೆ.

ಕೂಡು ಕುಟುಂಬದ ಕಥೆಯನ್ನು ಹೊಂದಿರುವ ಲಕ್ಷ್ಮೀ ನಿವಾಸಕ್ಕೆ (Lakshmi Nivasa) ಆರಂಭದಿಂದಲೂ ಪ್ರೇಕ್ಚಕರ ಮೆಚ್ಚುಗೆ ಸಿಕ್ಕಿದೆ. ಈ ಧಾರವಾಹಿಗೂ ಉತ್ತಮವಾದ ಟಿ ಆರ್ ಪಿ ದೊರೆಯುತ್ತಿದ್ದು ಸಾಕಷ್ಟು ವಾರಗಳಿಂದಲೂ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದು, ಈ ವಾರವೂ ಎರಡನೇ ಸ್ಥಾನದಲ್ಲೇ ಇದೆ.

ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಕಳೆದ ವಾರದ ಹಾಗೆ ಈ ವಾರವೂ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. ಸೀರಿಯಲ್ ನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ.‌ ಕಥೆಯಲ್ಲಿ ಶೀಘ್ರದಲ್ಲೇ ಹೊಸ ತಿರುವು ಮೂಡಿ ಬರಲಿರುವ ಸುಳಿವನ್ನು ನೀಡಿದ್ದು, ಅದು ಇನ್ನಷ್ಟು ರೋಚಕತೆಯನ್ನು ಮೂಡಿಸಿದೆ.

ನಾಲ್ಕನೇ ಸ್ಥಾನದಲ್ಲಿ ಸೀತಾ ರಾಮ (SeethaRama) ಸೀರಿಯಲ್ ಇದ್ದು, ರಾಮ್ ಮತ್ತು ಸೀತಾ ಮದುವೆಯ ಎಪಿಸೋಡ್ ಗಳು, ಅದರ ನಡುವೆಯೇ ವಿಲನ್ ಗಳ ಆಟ ಹೀಗೆ ಒಂದಷ್ಟು ಟ್ವಿಸ್ಟ್ ಗಳು ಕಥೆಯನ್ನು ಉತ್ಕಟವಾದ ತಿರುವಿನ ಕಡೆಗೆ ಕರೆದೊಯ್ಯುತ್ತಿದ್ದು ಸೀರಿಯಲ್ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ ವಾರ ಐದನೇ ಸ್ಥಾನದಲ್ಲಿದ್ದ ಅಮೃತಧಾರೆ ಈ ವಾರ ಆರನೇ ಸ್ಥಾನಕ್ಕೆ ಕುಸಿದಿದ್ದು, ಈ ವಾರ ಐದನೇ ಸ್ಥಾನವನ್ನು ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಪಡೆದುಕೊಂಡಿರುವುದು ವಿಶೇಷವಾಗಿದೆ. ಟಾಪ್ ಐದರಲ್ಲಿ ಕಲರ್ಸ್ ವಾಹಿನಿಯ ಒಂದೇ ಒಂದು ಸೀರಿಯಲ್ ಮಾತ್ರವೇ ಪಡೆದುಕೊಂಡಿದೆ.

Leave a Comment