Mamta Mohandas: ರಜನೀಕಾಂತ್ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ, ಅದಕ್ಕೆಲ್ಲಾ ಅವರೇ ಕಾರಣ; ನಟಿಯ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Mamta Mohandas: ಸೂಪರ್ ಸ್ಟಾರ್ ರಜನೀಕಾಂತ್ (Rajanikanth) ಸಿನಿಮಾದಲ್ಲಿ ಅವಕಾಶ ಸಿಕ್ಕುತ್ತೆ ಎಂದರೆ ಯಾವ ಕಲಾವಿದರು ತಾನೇ ಬೇಡ ಅಂತ ಹೇಳ್ತಾರೆ. ಅಂತಹ ಮೇರು ನಟನ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಅದೆಷ್ಟೋ ಜನ ಕಲಾವಿದರು ಕಾಯುತ್ತಾರೆ. ಆದರೆ ರಜನೀಕಾಂತ್ ಅವರ ಸಿನಿಮಾದಲ್ಲಿ ನಟಿಸಿ ತನಗೆ ಕಹಿ ಅನುಭವ ಆಗಿದೆಯೆಂಬ ಶಾಕಿಂಗ್ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ ನಟಿ ಮಮತಾ ಮೋಹನ್ ದಾಸ್ (Mamta Mohandas).

ಸೌತ್ ಸಿನಿಮಾಗಳಲ್ಲಿ ಹೆಸರನ್ನು ಮಾಡಿರುವ ಮಮತಾ ಮೋಹನ್ ದಾಸ್ ಅವರಿಗೆ ರಜನೀಕಾಂತ್ ಅವರ ಕುಚೇಲನ್ (Kuchelan) ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿ, ಎರಡು ದಿನ ಚಿತ್ರೀಕರಣ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿದಾಗ ಬೇರೊಂದು ಸಿನಿಮಾದ ಚಿತ್ರೀಕರಣಕ್ಕಾಗಿ ದುಬೈ ಗೆ ಹೋಗಿದ್ದ ನಾನು ಆ ಚಿತ್ರತಂಡದ ಅನುಮತಿ ಪಡೆದು ಚೆನ್ನೈಗೆ ಬಂದೆ.

ಆದರೆ ನಟಿಯನ್ನು ಚಿತ್ರತಂಡ ಅಷ್ಟಾಗಿ ಸ್ಪಂದಿಸಲಿಲ್ಲ. ಮೊದಲ ದಿನ ಚಿತ್ರೀಕರಣ ನಡೆಯಲಿಲ್ಲ, ಎರಡನೇ ದಿನ ಸಣ್ಣ ಪುಟ್ಟ ಶಾಟ್ಸ್ ತೆಗೆದು ಸುಮ್ಮನಾದರು. ಎರಡು ಮೂರು ದಿನ ಹೀಗೆ ಆಯಿತು. ಅನಂತರ ಸಿನಿಮಾ ರಿಲೀಸ್ ಆದಾಗ ನಾನು ಮಾಡಿದ್ದ ಹಾಡಾಗಲೀ, ಸಣ್ಣ ಪುಟ್ಟ ಶಾಟ್ಸ್ ಆಗಲೀ ಯಾವುದೂ ಸಿನಿಮಾದಲ್ಲಿ ಇರಲಿಲ್ಲ. ಅನಂತರ ಗೊತ್ತಾದ ವಿಚಾರ ಇದಕ್ಕೆ ಕಾರಣ ನಟಿ ನಯನತಾರಾ ಎಂದು.

ಆ ಸಿನಿಮಾದಲ್ಲಿ ನಯನತಾರಾ (Nayanthara) ಸಹಾ ನಾಯಕಿಯಲ್ಲ. ಒಂದೆರಡು ಹಾಡು ಮತ್ತು ಕೆಲವೊಂದು ದೃಶ್ಯಗಳಲ್ಲಿ ಮಾತ್ರವೇ ಅವರು ಕಾಣಿಸಿಕೊಳ್ಳುತ್ತಾರೆ. ಅವರಿಗೆ ಸಿಕ್ಕಿರುವ ಸಣ್ಣ ಸ್ಕ್ರೀನ್ ಸ್ಪೇಸ್ ಅನ್ನು ಬೇರೆ ಅವರೊಂದಿಗೆ ಶೇರ್ ಮಾಡಿಕೊಳ್ಳುವುದು, ನಾನು ಡ್ಯಾನ್ಸ್ ಮಾಡುವುದು ಅವರಿಗೆ ಇಷ್ಟವಿರಲಿಲ್ಲ.‌ ನಾನು ಬಂದರೆ ತಾನು ಬರೋದಿಲ್ಲ ಅಂತ ಪಟ್ಟು ಹಿಡಿದ ಕಾರಣ ಮೊದಲ ದಿನ ಚಿತ್ರೀಕರಣ ನಡೆದಿರಲಿಲ್ಲ ಎಂದಿದ್ದಾರೆ ಮಮತಾ ಮೋಹನ್ ದಾಸ್.

ಕುಚೇಲನ್ ಸಿನಿಮಾ ತೆಲುಗಿನಲ್ಲಿ ಕಥಾನಾಯಕುಡು ಹೆಸರಿನಲ್ಲಿ ಬಿಡುಗಡೆ ಆಗಿತ್ತು. ಇದರಲ್ಲಿ ಜಗಪತಿ ಬಾಬು, ಮೀನಾ ಮುಖ್ಯ ಪಾತ್ರಗಳಲ್ಲಿ ಇದ್ದರು. ಈ ಸಿನಿಮಾ ಕೃಷ್ಣ ಹಾಗೂ ಆತನ ಬಾಲ್ಯದ ಗೆಳೆಯನ ನಡುವಿನ ಕಥೆಯಾಗಿದ್ದು, ಕೃಷ್ಣನ ಗೆಳೆಯ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಿರುತ್ತಾನೆ. ಆದರೆ ಅವನಿಗೆ ಕೃಷ್ಣ ಎಲ್ಲಿದ್ದಾನೆಂದು ತಿಳಿದಿರುವುದಿಲ್ಲ. ಚಿತ್ರದ ಕೊನೆಗೆ ಇಬ್ಬರು ಸ್ನೇಹಿತರ ಭೇಟಿಯಾಗುತ್ತದೆ.

Leave a Comment