Justin Bieber: ಅನಂತ್ ರಾಧಿಕಾ ಮದುವೇಲಿ ಹಾಡೋಕೆ ಜಸ್ಟಿನ್ ಬೈಬರ್ ಪಡೆದ ಹಣವೆಷ್ಟು? ಸ್ಟಾರ್ ನಟರ ಸಂಭಾವನೆ ಕೂಡಾ ಇಷ್ಟಿಲ್ಲ

Written by Soma Shekar

Published on:

---Join Our Channel---

Anant Ambani Wedding: ಮುಖೇಶ್ ಅಂಬಾನಿ (Mukhesh Ambani) ಮತ್ತು ನೀತಾ ಅಂಬಾನಿ (Nita Ambani) ದಂಪತಿಯ ಪುತ್ರ ಅನಂತ್ ಅಂಬಾನಿ (Anant Ambani) ಮದುವೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯುವ ವಿಚಾರವು ಈಗಾಗಲೇ ಎಲ್ಲರಿಗೂ ತಿಳಿದಂತಹ ವಿಚಾರವಾಗಿದೆ. ಮದುವೆಗೆ ಮೊದಲು ಈಗಾಗಲೇ ಎರಡು ಬಾರಿ ವೈಭವೋಪೇತವಾಗಿ ವಿವಾಹ ಪೂರ್ವ ಸಮಾರಂಭವು ನಡೆದಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈಗಾಗಲೇ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಹಾಡಿ, ಕುಣಿದಿದ್ದರು. ಈಗ ಮತ್ತೊಬ್ಬ ಜನಪ್ರಿಯ ಪಾಪ್ ಗಾಯಕ ಜಸ್ಟಿನ್ ಬೈಬರ್ (Justin Bieber) ಭಾರತಕ್ಕೆ ಆಗಮಿಸಿದ್ದು, ಜುಲೈ 5 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಸಂಗೀತ್ ಕಾರ್ಯಕ್ರಮದಲ್ಲಿ ತನ್ನ ಹಾಡಿನ ಮೂಲಕ ಎಲ್ಲರನ್ನ ರಂಜಿಸಲಿದ್ದಾರೆ.

ಗುಜರಾತ್ ನ ಜಾಮ್ ನಗರದಲ್ಲಿ ನಡೆದ ಪ್ರೀವೆಡ್ಡಿಂಗ್ ಸಮಾರಂಭದಲ್ಲಿ ಪಾಪ್ ಗಾಯಕಿ ರಿಹಾನಾ ಹಾಡಿದ್ದರು. ಆಗ ರಿಹಾನಾ ಹಾಡಲು ಬರೋಬ್ಬರಿ 72 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದ ವಿಚಾರವು ದೊಡ್ಡ ಸುದ್ದಿಯಾಗಿತ್ತು.

ಈಗ ಜಸ್ಟಿನ್ ಬೈಬರ್ ಸಂಗೀತ್ ಸಮಾರಂಭದಲ್ಲಿ ಹಾಡಲು ಪಡೆಯಲಿರುವ ಭಾರೀ ಸಂಭಾವನೆ ವಿಚಾರ ಸಾಕಷ್ಟು ಸದ್ದು ಮಾಡಿದ್ದು, ಜಸ್ಟಿನ್ ಬೈಬರ್ ತಮ್ಮ ಪ್ರದರ್ಶನಕ್ಕಾಗಿ ಪಡೆಯಲಿರುವ ಸಂಭಾವನೆ ಎಷ್ಟು ಅನ್ನೋದಕ್ಕೆ ಇಲ್ಲಿದೆ ಉತ್ತರ.

ಜಸ್ಟಿನ್ ಬೈಬರ್ ಈಗಾಗಲೇ ವಿಶ್ವ ಮಟ್ಟದಲ್ಲಿ ಹೆಸರನ್ನು ಪಡೆದಿರುವ ಸ್ಟಾರ್ ಸಿಂಗರ್ ಆಗಿದ್ದು, ಈಗ ಅವರು ಅನಂತ್ ರಾಧಿಕಾ ಮದುವೆ ಸಂದರ್ಭದಲ್ಲಿ ಕಾರ್ಯಕ್ರಮ ನೀಡಲು ಭರ್ಜರಿ 83 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Leave a Comment