Kalki 2898AD: ಬೇಬಿ ಬಂಪ್ ನಲ್ಲಿ ದೀಪಿಕಾ, ಸ್ಟೈಲಿಶ್ ಲುಕ್ ನಲ್ಲಿ ಪ್ರಭಾಸ್, ಕಲ್ಕಿ ಪ್ರೀ ರಿಲೀಸ್ ಈವೆಂಟ್ ಅಬ್ಬರ, ಪ್ಯಾನ್ಸ್ ಖುಷಿ

Written by Soma Shekar

Published on:

---Join Our Channel---

Kalki 2898AD : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಾಯಕ ನಟನಾಗಿ, ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ (Nag Aswin) ನಿರ್ದೇಶನದಲ್ಲಿ ವೈಜಯಂತಿ ಮೂವೀಸ್ ಅದ್ದೂರಿಯಾಗಿ ನಿರ್ಮಿಸಿರುವ ಕಲ್ಕಿ 2898 ಎಡಿ (Kalki 2989 AD) ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಟಾರ್ ನಟ ಪ್ರಭಾಸ್, ಹಿರಿಯ ಲೆಜೆಂಡರಿ ನಟರೆನಿಸಿಕೊಂಡಿರುವ ಅಮಿತಾ ಬಚ್ಚನ್, ಕಮಲ ಹಾಸನ್ ಮತ್ತು ದೀಪಿಕಾ ಪಡುಕೋಣೆ ಭಾಗಿಯಾಗಿ ವೇದಿಕೆಯ ಮೇಲೆ ಎಂಜಾಯ್ ಮಾಡಿದ್ದಾರೆ.

ರಾಣಾ ದಗ್ಗುಬಾಟಿ ನಿರೂಪಣೆಯ ಕಲ್ಕಿ 2898 ಎಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿವೆ.

ಜೂನ್ 27ರಂದು ಕಲ್ಕಿ ಸಿನಿಮಾ ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದ್ದು, ಈಗಾಗಲೇ ಟ್ರೈಲರ್ ಹೊಸ ಬಿರುಗಾಳಿಯೊಂದನ್ನು ಎಬ್ಬಿಸಿದೆ. ಸದ್ಯಕ್ಕಂತೂ ಭಾರತದಲ್ಲಿ ಅತಿ ನಿರೀಕ್ಷಿತ ಸಿನಿಮಾ ಆಗಿ ಸದನ್ನು ಮಾಡುತ್ತಿದೆ ಕಲ್ಕಿ 2898 ಎಡಿ.

ಕಲ್ಕಿ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡಿದ್ದು, ಪ್ರೀ ರಿಲೀಸ್ ಈವೆಂಟ್ ನಲ್ಲಿ ಬೇಬಿ ಪಂಪ್ ನಲ್ಲಿ ನಟಿ ಎಲ್ಲರ ಎದುರು ಬಂದಿದ್ದು, ಬಹಳ ವಿಶೇಷವಾಗಿದ್ದು, ಅಭಿಮಾನಿಗಳಿಗೆ ಇದು ಖುಷಿಯನ್ನು ನೀಡಿತ್ತು.‌

ಬ್ಲಾಕ್ ಡ್ರೆಸ್ ಹೈ ಹೀಲ್ಸ್ ಧರಿಸಿ ದೀಪಿಕಾ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ನಟಿ ವೇದಿಕೆಗೆ ಬರುವಾಗ ಅವರಿಗೆ ನೆರವನ್ನು ನೀಡುವುದಕ್ಕೆ ಬಹಳಷ್ಟು ಜನ ಮುಂದೆ ಬಂದರೂ ನಟಿ ತಾವೇ ಆರಾಮವಾಗಿ ಹೆಜ್ಜೆ ಹಾಕುತ್ತ ವೇದಿಕೆಗೆ ಬಂದರು.

ರೆಬೆಲ್ ಸ್ಟಾರ್ ಪ್ರಭಾಸ್ ಅವರು ಕಪ್ಪು ಶರ್ಟ್, ಕಪ್ಪು ಪ್ಯಾಂಟ್ ಮತ್ತು ಧರಿಸಿ ಅದಕ್ಕೆ ಸೂಟ್ ಆಗುವಂತಹ ಶೇಡ್ಸ್ ಅನ್ನ ಹಾಕಿಕೊಂಡು ತಮ್ಮ ಸ್ಟೈಲಿಶ್ ಲುಕ್ ನಿಂದ ಎಲ್ಲರ ವಿಶೇಷ ಗಮನವನ್ನು ಸೆಳೆದಿದೆ.

ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಮಾತನಾಡುತ್ತಾ, ಈ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ನ ಹೊಗಳಿದ್ದು ಕಲ್ಕಿ ಸಿನಿಮಾದಲ್ಲಿ ತನಗೊಂದು ಅದ್ಭುತ ಪಾತ್ರ ಸಿಕ್ಕದ್ದಕ್ಕೆ ಬಹಳ ಅದೃಷ್ಟಶಾಲೆ ಎನ್ನುವ ಮಾತನ್ನು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಒಂದು ವಿಶೇಷವಾದ ಲುಕ್ ನಲ್ಲಿ ವೀಕ್ಷಕರ ಮುಂದೆ ಬರುತ್ತಿರುವಂತಹ ಹಿರಿಯ ನಟ ಕಮಲ ಹಾಸನ್ ಸಿನಿಮಾ ಕುರಿತಾಗಿ ಮಾತನಾಡಿ ತಮ್ಮ ಮೆಚ್ಚುಗೆಯನ್ನು ಸಹಾ ನೀಡಿದ್ದಾರೆ.

Leave a Comment