Health Tips: ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಬದುಕಿನ ಮಧ್ಯೆ ಜನರಿಗೆ ತಮ್ಮ ಆರೋಗ್ಯದ (Health Tips) ಬಗ್ಗೆ ಕಾಳಜಿ ವಹಿಸಲು ಸಮಯವೇ ಇಲ್ಲ ಎನ್ನುವಂತೆ ಆಗಿದೆ. ಈಗ ಜನರಲ್ಲಿ ಇರುವ ಬಹುಮುಖ್ಯ ಆಸಕ್ತಿ ಏನು ಎನ್ನುವುದಾದರೆ ಅದು ಹಣ ಗಳಿಸುವುದಾಗಿದೆ ಮತ್ತು ತನ್ನ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳುವ ಉದ್ದೇಶವೂ ಅವರ ಜೀವನದ ಒಂದು ಭಾಗವಾಗಿದೆ. ಆರೋಗ್ಯಕ್ಕಾಗಿ ಸರಿಯಾದ ಸಮಯಕ್ಕೆ ಊಟ, ನಿಯಮಿತ ವ್ಯಾಯಾಮ ಎನ್ನುವ ಮನಸ್ಸು ಯಾರಿಗೂ ಇಲ್ಲ.
ಆದರೆ ಹಣದ ಹಿಂದೆ ಓಡುವುದು, ದುಡಿಯುವುದು, ಈ ಒತ್ತಡದಲ್ಲಿ (Stress) ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಏನೋ ಒಂದು ತಿನ್ನುವುದು ಕೊನೆಗೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು, ಆರೋಗ್ಯ ಹದಗೆಟ್ಟಾಗ ಕಷ್ಟಪಟ್ಟು ದುಡಿದ ಹಣವನ್ನೂ ಆಸ್ಪತ್ರೆಯಲ್ಲಿ ವ್ಯಯಿಸುವುದು ಇಂದಿನ ನಿತ್ಯದ ಜೀವನಶೈಲಿಯಾಗಿಬಿಟ್ಟಿದೆ.
ಇತ್ತೀಚಿನ ದಿನಗಳಲ್ಲಿ ತಜ್ಞರು ಸಹಾ ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಸಲಹೆಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೆಲವೊಮ್ಮೆ ನಾವು ದಿನನಿತ್ಯ ಮಾಡುವ ಕೆಲಸಗಳು ಸಹಾ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತುಗಳನ್ನು ಹೇಳುವುದನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಈಗ ನಾವು ನಿಮಗೆ ಅಂತಹುದೇ ಒಂದು ವಿಚಾರವನ್ನು ಹೇಳಲು ಹೊರಟಿದ್ದೇವೆ.
ಒಟ್ಟಿಗೆ ಚಪ್ಪಾಳೆ (clapping) ತಟ್ಟುವುದು ಕೂಡಾ ನಮಗೆ ಬಹಳಷ್ಟು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎನ್ನಲಾಗಿದೆ. ಇದು ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಚಪ್ಪಾಳೆ ತಟ್ಟುವುದರಿಂದ ಸ್ನಾಯುಗಳಲ್ಲಿ ರಕ್ತ ಪರಿಚಲನೆಯು (Blood Circulation) ಹೆಚ್ಚುತ್ತದೆ ಮತ್ತು ಸಂಧಿವಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
ಇದು ಕುತ್ತಿಗೆ ಮತ್ತು ಬೆನ್ನಿನ ಕೀಲುಗಳ ನೋವನ್ನು ಸಹಾ ನಿವಾರಿಸಲು ನೆರವನ್ನು ನೀಡುತ್ತದೆ ಎನ್ನಲಾಗಿದೆ. ಒತ್ತಡದ ಜತೆಗೆ ಹೃದಯ ಸಂಬಂಧಿ ಕಾಯಿಲೆಗಳ ಪರಿಣಾಮವೂ ಕೂಡಾ ಈ ಅಭ್ಯಾಸದಿಂದ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಸೊಂಟವನ್ನು ನೇರವಾಗಿಟ್ಟುಕೊಂಡು ದೇಹವನ್ನು ಮೇಲಕ್ಕೆತ್ತಿ ಚಪ್ಪಾಳೆ ತಟ್ಟುವುದು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.