Vastu Tips: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಮಾಡಿದ್ರೆ ದರಿದ್ರ ಬಾಗಿಲಿಗೆ ಬರುತ್ತೆ

Written by Soma Shekar

Published on:

---Join Our Channel---

Vastu Tips: ವಾಸ್ತು ಶಾಸ್ತ್ರ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಸಹಾ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಪ್ರತಿಯೊಬ್ಬರ ಜೀವನದೊಂದಿಗೆ ಬೆಸೆದುಕೊಂಡಿರುವ ವಿಷಯಗಳು ಹಾಗೂ ಕೆಲವೊಂದು ವಸ್ತುಗಳು, ಸ್ಥಾನಗಳು ಇರಬೇಕಾದ ವಿಧಾನದ ಕುರಿತಾದ ನಿಯಮಗಳನ್ನು ಇದು ವಿವರಿಸಿ ಹೇಳುತ್ತದೆ. ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಅನಿರೀಕ್ಷಿತವಾಗಿ ಎದುರಾದಾಗ ಅನೇಕರು ಮೊದಲು ವಾಸ್ತುಶಾಸ್ತ್ರದ (Vastu Tips) ಮೊರೆ ಹೋಗುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ ಸಂಜೆ ಅಂದರೆ ಸೂರ್ಯಾಸ್ತದ (Sunset) ನಂತರ ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ಅಶುಭ ಫಲಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ನಂತರ ಮನೆಯಲ್ಲಿ ಕಸವನ್ನು ಗುಡಿಸಬಾರದು ಎಂದು ಹೇಳಲಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ ಎನ್ನಲಾಗಿದೆ.

ಜೀವನದಲ್ಲಿ ಆರ್ಥಿಕ ಸಮಸ್ಯೆಗಳ ತೀವ್ರತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.‌ ಸೂರ್ಯಾಸ್ತದ ನಂತರ ಕಸವನ್ನು ಗುಡಿಸಿದರೆ ಹಣದ ಮಾತೆ ಶ್ರೀಮಹಾಲಕ್ಷ್ಮಿ ಅಂತಹ ಕಡೆಗಳಲ್ಲಿ ವಾಸ ಮಾಡುವುದಿಲ್ಲ ಎನ್ನುವುದು ನಂಬಿಕೆಯಾಗಿದ್ದು, ಲಕ್ಷ್ಮೀ ವಾಸವಿಲ್ಲದ ಕಡೆ ಸುಖ,ಶಾಂತಿ ಮತ್ತು ಸಮೃದ್ಧಿ ಎನ್ನುವುದು ಖಂಡಿತ ಇರುವುದು ಅಸಾಧ್ಯ ಎನ್ನಲಾಗಿದೆ.

ಸೂರ್ಯಾಸ್ತದ ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು. ನೀರು ಹಾಕಿದರೆ ಮನೆಯಲ್ಲಿ ದಾರಿದ್ರ್ಯ ಮನೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಮನೆಯಿಂದ ಸೂರ್ಯಾಸ್ತದ ನಂತರ ಹಣ ವ್ಯವಹಾರ ಮಾಡಬಾರದು, ಹಣ ಕೊಡು, ಕೊಳ್ಳುವುದು ನಿಷೇಧ. ಇದಲ್ಲದೇ ಸೂರ್ಯಾಸ್ತದ ನಂತರ ಮನೆ ಬಾಗಿಲಲ್ಲಿ ಅಡ್ದವಾಗಿ ಕೂರಬಾರದು ಎನ್ನಲಾಗಿದೆ ಇದರಿಂದ ಮಾತೆ ಲಕ್ಷ್ಮೀ ಮನೆಯನ್ನು ಪ್ರವೇಶ ಮಾಡುವುದಿಲ್ಲ ಎನ್ನುವುದು ನಂಬಿಕೆ.

Leave a Comment