Spinach Juice: ನಮ್ಮ ಆರೋಗ್ಯದ ಹಿತಕ್ಕಾಗಿ ನಾವು ಹಲವಾರು ರೀತಿಯ ಸೊಪ್ಪುಗಳನ್ನು ಆಹಾರದಲ್ಲಿ ಬಳಸುತ್ತೇವೆ. ಅಂತಹ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಒಂದಾಗಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಶರೀರಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಹಾಗೂ ರೋಗ ನಿರೋಧಕ ಅಂಶಗಳು ಹೇರಳವಾಗಿದೆ.
ಪಾಲಕ್ ಸೊಪ್ಪಿನ ರಸವನ್ನು (Spinach Juice) ಕುಡಿಯುವುದರಿಂದ ಸಹಾ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸೊಪ್ಪಿನ ರಸವನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸಬಹುದೆನ್ನಲಾಗಿದೆ. ಇದರಲ್ಲಿರುವ ವಿಟಮಿನ್ ಎ ಗ್ಲುಕೋಮಾದಂತಹ ಕಣ್ಣಿನ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.
ಈ ಸೊಪ್ಪಿನ ರಸವನ್ನು ಕುಡಿಯೋದ್ರಿಂದ ರಕ್ತಹೀನತೆಯಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಋತುಮಾನದ ಸಮಸ್ಯೆಗಳನ್ನು ಎದುರಿಸಲು ಇದು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಈ ರಸವು ವೈರಸ್ ಮತ್ತು ಬ್ಯಾಕ್ಟೀರಿಯಾ ದಾಳಿಯನ್ನು ತಡೆಯುತ್ತದೆ. ಅಲ್ಲದೇ ಹೃದಯ ಸಂಬಂಧಿ ಸಮಸ್ಯೆಗಳಿಂದ ಕಾಪಾಡುತ್ತದೆ.
ನಮ್ಮ ಹೃದಯದ (Heart) ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ನಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಅಕಾಲಿಕವಾಗಿ ವಯಸ್ಸಾದಂತೆ ಕಾಣುವುದು, ಚರ್ಮದ ಸುಕ್ಕುಗಳನ್ನು ತಡೆದು ಮುಖವು ಹೊಳೆಯುತ್ತದೆ.
ಈ ಜ್ಯೂಸ್ ನಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಸ್ಟ್ರಾಂಗ್ ಆಗುತ್ತದೆ. ಈ ಸೊಪ್ಪಿನಲ್ಲಿ ರೋಗನಿರೋಧಕಗಳು ಸಮೃದ್ಧವಾಗಿದೆ. ಇವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಅಲ್ಲದೆ ಈ ಸೊಪ್ಪಿನ ರಸವನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು.