Isha Koppikar: ಒಂಟಿಯಾಗಿ ಬಾ ಎಂದಿದ್ದ ಆ ಸ್ಟಾರ್ ನಟ; ಸೂರ್ಯವಂಶ ನಟಿಯ ಶಾಕಿಂಗ್ ಮಾತುಗಳು

Written by Soma Shekar

Published on:

---Join Our Channel---

Isha Koppikar: ಸಿನಿಮಾ ರಂಗದಲ್ಲಿರುವ ಕಾಸ್ಟಿಂಗ್ ಕೌಚ್ ವಿಚಾರವಾಗಿ ಆಗಾಗ ಒಂದಲ್ಲಾ ಒಂದು ವಿಷಯ ಹೊರಗೆ ಬರುವ ಮೂಲಕ ಚರ್ಚೆಗೆ ಕಾರಣವಾಗುತ್ತಲೇ ಇರುತ್ತದೆ. ಕಾಸ್ಟಿಂಗ್ ಕೌಚ್ ವಿಚಾರವಾಗಿ ಸ್ಟಾರ್ ನಟಿಯರೂ ಇತ್ತೀಚಿನ ವರ್ಷಗಳಲ್ಲಿ ತಮಗಾದ ಕಹಿ ಅನುಭವ ಶೇರ್ ಮಾಡಿಕೊಳ್ಳುವ ಮೂಲಕ ಸಿನಿಮಾರಂಗದಲ್ಲಿ ಇಂತದೊಂದು ಅಸಹನೀಯ ಪದ್ಧತಿ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಆದರೆ ಬಹಳಷ್ಟು ಜನ ನಟಿಯರು ತಮಗೆ ಯಾರಿಂದ ತೊಂದರೆಯಾಯಿತು ಎನ್ನುವ ವಿಚಾರವಾಗಿ ಆ ವ್ಯಕ್ತಿಗಳ ಹೆಸರನ್ನು ಹೇಳುವುದಕ್ಕೆ ಹಿಂದೇಟು ಹಾಕಿದ್ದಾರೆ.

ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲಿ ಸೂರ್ಯವಂಶ (Suryavamsha) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಇಶಾ ಕೊಪ್ಪಿಕರ್ (Isha Koppikar) ದಕ್ಷಿಣದ ಸಿನಿಮಾಗಳಿಗಿಂತ ಹೆಚ್ಚು ಹೆಸರನ್ನ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಬಾಲಿವುಡ್ ನಲ್ಲಿ. ಈಗ ಇಶಾ ಕೊಪ್ಪಿಕರ್ ಅವರು ಬಾಲಿವುಡ್ ನ ಒಬ್ಬ ನಾಯಕ ನಟನ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ನಟಿಯು ತಮಗಾಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.‌ ಹಾಗಾದರೆ ನಟಿ ಹೇಳಿದ್ದೇನು? ತಿಳಿಯೋಣ ಬನ್ನಿ

ಇಶಾ ಸಿನಿಮಾ ರಂಗಕ್ಕೆ 1998ರಲ್ಲಿ ಎಂಟ್ರಿಯನ್ನ ಕೊಟ್ಟರು. ತೆಲುಗಿನಲ್ಲಿ ಚಂದ್ರಲೇಖ ಅವರು ನಟಿಸಿದ ಮೊದಲ ಸಿನಿಮಾ ಆಗಿದೆ. ಬಾಲಿವುಡ್ ನಲ್ಲಿ (Bollywood) ಬ್ಯುಸಿಯಾಗಿದ್ದ ನಟಿ ಅಷ್ಟಾಗಿ ದಕ್ಷಿಣದ ಸಿನಿಮಾಗಳ ಕಡೆಗೆ ಒಲವನ್ನ ತೋರಲಿಲ್ಲ. ನಟಿಯು ತಮಗಾದ ಅನುಭವದ ಬಗ್ಗೆ ಹೇಳುತ್ತಾ, ನನಗೆ ಆಗ 18 ವರ್ಷ ವಯಸ್ಸು. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದ್ದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎನ್ನುವ ಬೇಡಿಕೆ ಇದೆ ಎನ್ನುವ ಮಾತುಗಳನ್ನು ಹೇಳಿದರು.

ಕೆಲಸ ಸಿಗಬೇಕಾದರೆ ನಟನ ಜೊತೆಗೆ ಫ್ರೆಂಡ್ಲಿಯಾಗಿ ಇರಬೇಕು ಎಂದು ಅವರು ಹೇಳಿದರು. 23 ನೇ ವಯಸ್ಸಿನಲ್ಲೂ ಹಾಗೆ ಆಗಿತ್ತು. ಒಂಟಿಯಾಗಿ ಸಿಗುವಂತೆ ಒಬ್ಬ ನಟ ಕೇಳಿದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ. ಆತನ ಹೆಸರು ಆಗಲೇ ಕೆಲವು ನಟಿಯರ ಜೊತೆಗೆ ತಳಕು ಹಾಕಿಕೊಂಡಿತ್ತು. ವಿಶೇಷವೆಂದರೆ ಆ ರೀತಿ ಬೇಡಿಕೆ ಇಟ್ಟವರು ಬಾಲಿವುಡ್ ನ ಎ-ಲಿಸ್ಟ್ ನಟ ಎಂದು ಹೇಳಿದ್ದಾರೆ ಇಶಾ.

Leave a Comment