Aamir Khan: ಯಾವುದೇ ಟಿವಿ ಶೋ, ಅವಾರ್ಡ್ ಕಾರ್ಯಕ್ರಮ ಮತ್ತು ಪಾರ್ಟಿಗಳಿಗೂ ಬಾರದೇ ಇರುವ ಬಾಲಿವುಡ್ ನ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರನ್ನು ಪಡೆದುಕೊಂಡಿರುವ ನಟ ಆಮೀರ್ ಖಾನ್ (Aamir Khan) ಮೊಟ್ಟ ಮೊದಲ ಬಾರಿಗೆ ಕಪಿಲ್ ಶರ್ಮಾ (Kapik Sharma) ನಿರೂಪಣೆ ಮಾಡುವ ಜನಪ್ರಿಯ ಶೋ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಗೆ (The Great India Kapil Show) ಅತಿಥಿಯಾಗಿ ಎಂಟ್ರಿ ನೀಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ಶೋ ನಲ್ಲಿ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಶೋ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಅಮೀರ್ ಖಾನ್ ಅವರು ಪಂಜಾಬಿನ ಜನರ ಬಗ್ಗೆ ಒಂದಷ್ಟು ಮೆಚ್ಚುಗೆಗಳನ್ನು ನೀಡಿದ್ದಾರೆ. ನಾನು ಮುಸ್ಲಿಂನಾಗಿರುವುದರಿಂದ ನನಗೆ ಕೈ ಜೋಡಿಸಿ ನಮಸ್ಕಾರ ಮಾಡುವ ಅಭ್ಯಾಸ ಇರಲಿಲ್ಲ. ಆದರೆ ಪಂಜಾಬ್ ನಲ್ಲಿ ದಿನಗಳನ್ನು ಕಳೆದಾಗ ನಮಸ್ಕಾರ ಮಾಡುವುದರ ಶಕ್ತಿ ಏನೆಂದು ಅರ್ಥ ವಾಯಿತು ಎನ್ನುವ ಮಾತುಗಳನ್ನು ಹೇಳುತ್ತಾ ಒಂದಷ್ಟು ವಿಷಯಗಳನ್ನು ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ.
ದಂಗಲ್ (Dangal) ಸಿನಿಮಾದ ಚಿತ್ರೀಕರಣಕ್ಕೆಂದು ಪಂಜಾಬ್ ನ ಒಂದು ಸಣ್ಣ ಹಳ್ಳಿಗೆ ಹೋಗಿದ್ದೆವು. ನಾವು ಅಲ್ಲಿ ಸುಮಾರು ಎರಡು ತಿಂಗಳುಗಳಿಗಿಂರ ಹೆಚ್ಚು ಕಾಲ ಇದ್ದೆವು. ಆಗ ಚಿತ್ರೀಕರಣಕ್ಕೆಂದು ಬೆಳಿಗ್ಗೆ ಐದು ಗಂಟೆಗೆ ಕಾರಿನಲ್ಲಿ ಸ್ಥಳವನ್ನು ತಲುಪಿದಾಗ ಅಲ್ಲಿನ ಜನರು ನನಗೆ ಕೈ ಮುಗಿದು ಸ್ವಾಗತವನ್ನು ನೀಡುತ್ತಿದ್ದರು. ಶೂಟಿಂಗ್ ಮುಗಿದು ಪ್ಯಾಕ್ ಅಪ್ ಆಗಿ ಹೊರ ಬರುವಾಗಲೂ ಜನರು ಕೈ ಮುಗಿದು ಗುಡ್ ನೈಟ್ ಹೇಳುತ್ತಿದ್ದರು.
ನಾನು ಮುಸ್ಲಿಂ ಆಗಿರುವುದರಿಂದ ನಾನು ಕೈ ಜೋಡಿಸಿ ಜನರಿಗೆ ನಮಸ್ಕಾರ ಹೇಳುವ ಪದ್ಧತಿಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ಪಂಜಾಬ್ ನಲ್ಲಿ ದಿನಗಳನ್ನು ಕಳೆದ ಮೇಲೆ ನನಗೆ ನಮಸ್ತೆಯ ಶಕ್ತಿಯ ಅರ್ಥವಾಯಿತು. ಪಂಜಾಬ್ ನ ಜನರನ್ನು ನಾನು ತುಂಬಾ ಇಷ್ಟಪಟ್ಟೆ ಮತ್ತು ಪಂಜಾಬ್ ನ ಸಂಸ್ಕೃತಿ ಬಹಳ ಪ್ರೀತಿಯಿಂದ ತುಂಬಿದೆ ಎನ್ನುವ ಮಾತುಗಳನ್ನು ಅಮೀರ್ ಖಾನ್ ಅವರು ಹೇಳಿದ್ದಾರೆ.