Ira Khan: ಮದುವೆಯಾದ ನಾಲ್ಕೇ ತಿಂಗಳಿಗೆ ಭಯ ಆಗ್ತಿದೆ ಅಂತ ಸಂಚಲನ ಪೋಸ್ಟ್ ಮಾಡಿದ ಅಮೀರ್ ಖಾನ್ ಪುತ್ರಿ

Written by Soma Shekar

Published on:

---Join Our Channel---

Ira Khan: ಬಾಲಿವುಡ್‌ (Bollywood) ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಂಡಿರುವ ಅಮೀರ್ ಖಾನ್ (Amir Khan) ಅವರಂತೆಯೇ ಅವರ ಮಗಳು ಇರಾ ಖಾನ್ (Ira Khan) ಕೂಡಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಗಳ ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇರಾ ಖಾನ್ ನಾಲ್ಕು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಇರಾ ತನ್ನ ಗೆಳೆಯ ನೂಪುರ್ ಶಿಖಾರೆ (Nupur Shikare) ಜೊತೆಗೆ ದಾಂಪತ್ಯ ಜೀವನದ ಶುಭಾರಂಭವನ್ನು ಮಾಡಿದ್ದಾರೆ. ನೂಪುರ್ ಇರಾ ಮದುವೆಯ ಹಲವು ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.

ಈಗ ಮದುವೆಯ ನಾಲ್ಕು ತಿಂಗಳ ನಂತರ ಇರಾ ಶೇರ್ ಮಾಡಿಕೊಂಡಿರುವ ಒಂದು ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಪೋಸ್ಟ್ ನೋಡಿದ ಮೇಲೆ ಇರಾ ಮತ್ತು ಅಮೀರ್ ಖಾನ್ ಅಭಿಮಾನಿಗಳು ಕೂಡಾ ಗೊಂದಲ ಪಡುವಂತಾಗಿದೆ ಮತ್ತು ಇಂತಹ ಪೋಸ್ಟ್ ಹಾಕಿದ್ದಾದ್ರು ಏಕೆ ಅಂತ ಪ್ರಶ್ನೆಯನ್ನ ಮಾಡ್ತಾ ಇದ್ದಾರೆ. ಅಸಲಿಗೆ ಇರಾ ಮಾಡಿದ ಪೋಸ್ಟ್‌ನಲ್ಲಿ ನಿಜವಾಗಿ ಏನಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಇರಾ ಖಾನ್ ತಮ್ಮ Instagram ಖಾತೆಯಲ್ಲಿ ಸುದೀರ್ಘವಾದ ಒಂದು ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಇರಾ ತಮ್ಮ ಪೋಸ್ಟ್ ನಲ್ಲಿ, ‘ನನಗೆ ಭಯವಾಗಿದೆ. ಒಬ್ಬಂಟಿಯಾಗಿರಲು ನಾನು ಹೆದರುತ್ತೇನೆ. ನಾನು ಅಸಹಾಯಕಳಾಗುತ್ತೇನೆ ಎಂದು ಹೇಳಿದ್ದಾರೆ. ಪ್ರಪಂಚದ ಎಲ್ಲಾ ದುಷ್ಟತನ (ಹಿಂಸೆ, ರೋಗ, ಕ್ರೌರ್ಯ), ನೋವಿನ ಭಯಕ್ಕೆ ನಾನು ಹೆದರುತ್ತೇನೆ. ನಾನು ಮೌನವಾಗಿರಲು ಹೆದರುತ್ತೇನೆ, ನಾನು ನಗೋದು, ಕೆಲಸ ಮಾಡೋದು, ದಿನನಿತ್ಯ ಬದುಕನ್ನ ನೀವು ನೋಡೋದಿಲ್ಲ, ಆದರೆ ನಾನು ಭಯಗೊಂಡಾಗ ಅದು ನನ್ನನ್ನು ಕಾಡುತ್ತೆ.

ನಾನು ಯಾವಾಗಲಾದರೂ ದುಃಖದಲ್ಲಿದ್ದಾಗ ನನ್ನನ್ನು ನೋಡಿಕೊಳ್ಳೋದಕ್ಕೆ ನನ್ನ ಸುತ್ತಲೂ ಜನರು ಇದ್ದಾರೆ ಅನ್ನೋದನ್ನ ನಾನು ಮರೆತು ಹೋಗ್ತೀನಿ. ನಾನು ಸಮರ್ಥಳಾಗಿದ್ದೇನೆ ಅನ್ನೋದನ್ನ ಮರೆತುಬಿಡ್ತೇನೆ ಎಂದು ಕೆಲವು ಸಾಲುಗಳನ್ನು, ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದಾರೆ ಇರಾ. ಇರಾ ಮಾಡಿದ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳಲ್ಲದೇ ಇರಾ ಅವರ ಪತಿ ನೂಪುರ್ ಶಿಕಾರೆ ಸಹಾ ಈ ಪೋಸ್ಟ್ ಗೆ ರಿಪ್ಲೈ ಕೊಡ್ತಾ, ‘ನಾನು ಇಲ್ಲೇ ಇದ್ದೇನೆ’ ಎಂದಿದ್ದಾರೆ.

Leave a Comment