Auto News: 20km ಮೈಲೇಜ್, 4.5 ಸೆಕೆಂಡ್ ಗಳಲ್ಲಿ 60 km ವೇಗ: ಭಾರತದಲ್ಲಿ ಬಿಡುಗಡೆಯಾದ ಮಹೀಂದ್ರಾ ಹೊಸ ಕಾರು ಬಿಡುಗಡೆ

Written by Soma Shekar

Published on:

---Join Our Channel---

Auto News: ಮಹೀಂದ್ರಾ (Mahindra) ತನ್ನ ಬಹು ನಿರೀಕ್ಷಿತ XUV 3XO ಬೆಲೆಯನ್ನು ಇಂದು ಅಂದರೆ ಏಪ್ರಿಲ್ 29, 2024 ರಂದು ಬಹಿರಂಗಪಡಿಸಲಿದೆ. ಆದಾಗ್ಯೂ ಅದಕ್ಕಿಂತಲೂ ಮೊದಲೇ ವಾಹನ ತಯಾರಕರು ಅದರ ವೈಶಿಷ್ಟ್ಯಗಳು, ಮೈಲೇಜ್ ಅನ್ನು ಬಹಿರಂಗಪಡಿಸಿದ್ದಾರೆ. ಈ ಪೈಕಿ ಹಲವು ಟೀಸರ್ ಗಳು (Auto News) ಈಗಾಗಲೇ ಬಿಡುಗಡೆ ಆಗಿದ್ದು, ಇದಲ್ಲದೇ ಈಗಾಗಲೇ ತಿಳಿಸಲಾದ XUV 3XO ನ ಹೊಸ ರೂಪಾಂತರಗಳನ್ನು ಬಹಿರಂಗಪಡಿಸಲಾಗಿದೆ.

ಇದೀಗ ಎಲ್ಲವುಗಳ ನಂತರ ಮಹೀಂದ್ರಾ ಇದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಮಹೀಂದ್ರಾ XUV 3XO ಅನ್ನು MX, AX, AX3, AX5, AX7 ರೂಪಾಂತರಗಳಲ್ಲಿ ಐಷಾರಾಮಿ ಪ್ಯಾಕ್, ಪ್ರೊ ಆವೃತ್ತಿಗಳೊಂದಿಗೆ ಗ್ರಾಹಕರ ಮುಂದೆ ತರಲಾಗುತ್ತಿದೆ. SUV ವೈರ್ ಲೆಸ್ ಸ್ಮಾರ್ಟ್ ಫೋನ್ ಸಂಪರ್ಕ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ವೀಲ್, ಹೊಸದಾಗಿ ವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಅನ್ನು ಒಳಗೊಂಡಿದೆ.

ಇದರಲ್ಲಿ ವೈರ್ ಲೆಸ್ ಚಾರ್ಜರ್, ಸ್ವಯಂಚಾಲಿತ ಹವಾಮಾನ ನಿಯಂತ್ರಣದೊಂದಿಗೆ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹಾ ಒಳಗೊಂಡಿದೆ. ಇದು 360-ಡಿಗ್ರಿ ಸರೌಂಡ್ ಕ್ಯಾಮೆರಾ, ಹರ್ಮನ್ ಕಾರ್ಡನ್ ಮೂಲದ ಸಂಗೀತ ವ್ಯವಸ್ಥೆ, ಪನೋರಮಿಕ್ ಸನ್‌ ರೂಫ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಸಹಾಯಗಳನ್ನು ಸಹಾ ಒಳಗೊಂಡಿದೆ.

ಮಹೀಂದ್ರಾ XUV 3XO ಪ್ರಸ್ತುತ ಮಾದರಿಯ ರೀತಿಯಲ್ಲೇ ಇರುವ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇತ್ತೀಚೆಗೆ, ಕಾರು ತಯಾರಕರು ತಮ್ಮ ಟೀಸರ್ ನಲ್ಲಿ ಅದರ ಮೈಲೇಜ್ ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಬಹಿರಂಗ ಪಡಿಸಲಾಗಿದೆ. ಇದರ ಹೊರತಾಗಿ, ಈ SUV 4.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 km/hr ವೇಗವನ್ನು ಪಡೆಯುತ್ತದೆ. ಇದು ಎಆರ್‌ಎಐ ಪ್ರಮಾಣೀಕೃತ ಮೈಲೇಜ್ 20.1 ಕಿಮೀ/ಲೀಟರ್ ಆಗಿದೆ.

Related Post

Leave a Comment