Skin Care: ಪ್ರತಿ ಹುಡುಗಿಯೂ ತನ್ನ ಮುಖದ ತ್ವಚೆಯು ಸುಂದರವಾಗಿ, ಆಕರ್ಷಕವಾಗಿ, ಕಾಂತಿಯುತವಾಗಿ ಮತ್ತು ತಾರುಣ್ಯದಿಂದ ಹೊಳೆಯಬೇಕೆಂದು ಬಯಸುವುದು ಸಹಜ. ಆದರೆ ವಯಸ್ಸು ಮತ್ತು ಆಧುನಿಕ ಜೀವನಶೈಲಿ ಮತ್ತು ಮಾಲಿನ್ಯದ ಕಾರಣದಿಂದಾಗಿ ಅನೇಕ ಜನರು ಚರ್ಮದ ಸಮಸ್ಯೆಗಳನ್ನು (Skin Care) ಎದುರಿಸುತ್ತಿದ್ದಾರೆ ಮತ್ತು ಚರ್ಮದ ಮೇಲೆ ಸುಕ್ಕುಗಳು ಬೇಗ ಮೂಡುತ್ತಿವೆ.
ಈ ಚರ್ಮದ ಸಮಸ್ಯೆಗಳನ್ನು ಪರಿಹರಿಸೋದಕ್ಕೆ ಅಥವಾ ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು, ನೀವು ಚರ್ಮದ ಆರೋಗ್ಯ ಕಾಪಾಡುವಂತಹ ಉತ್ತಮವಾದ ಪಾನೀಯಗಳನ್ನು ಸೇವನೆ ಮಾಡಬೇಕೆಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ಹೀಗೆ ಸುಕ್ಕುಗಳನ್ನು ಹೋಗಲಾಡಿಸಿ ತ್ವಚೆಯನ್ನು ಯೌವ್ವನದಿಂದ ಕಾಣುವಂತೆ ಮಾಡುವ ಪಾನೀಯಗಳು ಯಾವುವೆಂದು ತಿಳಿಯೋಣ.
ಬೆಳಿಗ್ಗೆ ಕಪ್ಪು ಒಣದ್ರಾಕ್ಷಿ ಮತ್ತು ಕೇಸರಿ ನೀರನ್ನು ಕುಡಿಯುವುದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಚರ್ಮಕ್ಕೆ ಮಾತ್ರವಲ್ಲದೇ ನಮ್ಮ ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ. ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ನೀರು ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ದೇಹವನ್ನು ಡಿಟಾಕ್ಸ್ ಮಾಡುವಲ್ಲಿಯೂ ಉತ್ತಮ.
ನುಗ್ಗೆ ಮರದ ಎಲೆಗಳ ಜ್ಯೂಸ್ (Drumstick Leaves Juice) ಅನ್ನು ಮಾಡಿಕೊಂಡು ಕುಡಿಯುವುದರಿಂದಲೂ ಚರ್ಮದ ಸುಕ್ಕುಗಳು ಕಡಿಮೆಯಾಗುತ್ತವೆ. ಇನ್ನು ಬೀಟ್ರೂಟ್ ಜ್ಯೂಸ್ ನಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ, ಇದು ಕೊಲೊಜನ್ ಉತ್ಪಾದನೆಯನ್ನು ಹೆಚ್ಚಿಸವುದಕ್ಕೆ ಸಹಾಯವನ್ನು ಮಾಡುತ್ತದೆ.
ಅಲೋವೆರಾ (Aloevera Juice) ಸಹಾ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದ್ದು, ಅಲೋವೆರಾದಲ್ಲಿ ಆಕ್ಸಿನ್ ಮತ್ತು ಗಿಬ್ಬರೆಲಿನ್ ಗಳು ಹೇರಳವಾಗಿದೆ. ಆದ್ದರಿಂದಲೇ ಪ್ರತಿ ನಿತ್ಯ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕಡಿಮೆ ಸಮಯದಲ್ಲಿ ಹೊಳೆಯುವ ತ್ವಚೆ ನಿಮ್ಮದಾಗುವುದು.
ಪ್ರತಿದಿನ ಕ್ಯಾರೆಟ್ ಜ್ಯೂಸ್ (Carrot Juice) ಕುಡಿಯುವುದು ಸಹಾ ನಮ್ಮ ಚರ್ಮಕ್ಕೆ ಬಹಳ ಪ್ರಯೋಜನಕಾರಿ ಹಾಗೂ ಆರೋಗ್ಯಕ್ಕೆ ಸಹಾ ಒಳ್ಳೆಯದು. ಇದರಿಂದಾಗಿ ನಮ್ಮ ಮುಖದ ಮೇಲಿನ ಸುಕ್ಕುಗಳು ಕಡಿಮೆಯಾಗಿ ಚರ್ಮ ಕಾಂತಿಯುತವಾಗುತ್ತದೆ. ಇದು ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತದೆ.
(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)